ನವದೆಹಲಿ : ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿಷೇಧವನ್ನ ಕೇಂದ್ರ ಸರ್ಕಾರ ಇಂದು ಜೂನ್ 30ರವರೆಗೆ ವಿಸ್ತರಿಸಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ನಿಗದಿತ ಸಾಗರೋತ್ತರ ವಿಮಾನಗಳ ಮೇಲಿನ ನಿಷೇಧವು ಮೇ 31ರಂದು ಮುಕ್ತಾಯಗೊಳ್ಳಬೇಕಿತ್ತು.
ಕೋವಿಡ್(COVID-19) ಸಂಬಂಧಿತ ನಿರ್ಬಂಧಗಳು ಅಂತರರಾಷ್ಟ್ರೀಯ ಎಲ್ಲಾ ಸರಕು ಕಾರ್ಯಾಚರಣೆಗಳು ಮತ್ತು ಡಿಜಿಸಿಎ ನಿರ್ದಿಷ್ಟವಾಗಿ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ : Lockdown-Unlock Latest Update: ಮೇ 31 ರಿಂದ ಅನ್ಲಾಕ್ ಆಗಲಿದೆ ರಾಷ್ಟ್ರ ರಾಜಧಾನಿ
ದಿ. 26-06-2020 ರ ಸುತ್ತೋಲೆಯ ಭಾಗಶಃ ಮಾರ್ಪಾಡುಗಳಲ್ಲಿ, ಸಕ್ಷಮ ಪ್ರಾಧಿಕಾರವು ನಿಗದಿತ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳಿಗೆ ಸಂಬಂಧಿಸಿದಂತೆ ಮೇಲೆ ಉಲ್ಲೇಖಿಸಿದ ವಿಷಯದ ಮೇಲೆ ಹೊರಡಿಸಲಾದ ಸುತ್ತೋಲೆಯ ಸಿಂಧುತ್ವವನ್ನ ಜೂನ್ 30, 2021ರ 2359 ಗಂಟೆಗಳು 1 ಎಸ್ ಟಿ ವರೆಗೆ ವಿಸ್ತರಿಸಿದೆ' ಎಂದು ಡಿಜಿಸಿಎ(Directorate General of Civil Aviation) ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : DRDO ಅಭಿವೃದ್ಧಿಪಡಿಸಿರುವ 2 DG Drug ಔಷಧ ಪ್ರತಿ ಪ್ಯಾಕೆಟ್ಗೆ ₹ 990!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.