ನವದೆಹಲಿ : ಪ್ರಸ್ತುತ ದೇಶದಲ್ಲಿ ಕೊರೋನಾ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ ಎನ್ನುವಷ್ಟರಲ್ಲಿ 'ಬ್ಲ್ಯಾಕ್ ಫಂಗಸ್' ಅಂಬಾ ಮಹಾಮಾರಿ ಹೆಚ್ಚಾಗಲಾರಂಭಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ(Rahul Gandhi), ಕಪ್ಪು ಶಿಲೀಂಧ್ರ ಸಾಂಕ್ರಾಮಿಕದ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು-
ಇದನ್ನೂ ಓದಿ : Empty Stomach : ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ ಆಹಾರ ಸೇವಿಸಬೇಡಿ! ಇಲ್ಲದಿದ್ರೆ ತಪ್ಪಿದಲ್ಲ ಈ ತೊಂದರೆ!
1. Amphotericin B ಔಷಧ ಕೊರತೆ(Amphotericin B Shortage)ಗೆ ಏನು ಮಾಡಲಾಗುತ್ತಿದೆ?
2. ಈ ಔಷಧವನ್ನು ರೋಗಿಗಳಿಗೆ ನೀಡುವ ವಿಧಾನ ಯಾವುದು?
ಇದನ್ನೂ ಓದಿ : World Milk Day 2021: ಇವುಗಳನ್ನು ಹಾಲಿನಲ್ಲಿ ಮಿಕ್ಸ್ ಮಾಡಿ ಕುಡಿದರೆ ಉತ್ತಮ ಆರೋಗ್ಯ ನಿಮ್ಮದಾಗಲಿದೆ
3. ಚಿಕಿತ್ಸೆ ನೀಡಬೇಕಾದ ಸಮಯದಲ್ಲಿ ಮೋದಿ ಸರ್ಕಾರ(Modi Govt) ಜನರಿಗೆ ಇನ್ನಷ್ಟು ತೊಂದರೆಗೊಳಗಾಗುವಂತೆ ಏಕೆ ನಡೆದುಕೊಳ್ಳುತ್ತಿದೆ?' ಎಂದು ಬರೆದುಕೊಂಡಿದ್ದಾರೆ.
Black fungus महामारी के बारे में केंद्र सरकार स्पष्ट करे-
1. Amphotericin B दवाई की कमी के लिए क्या किया जा रहा है?
2. मरीज़ को ये दवा दिलाने की क्या प्रक्रिया है?
3. इलाज देने की बजाय मोदी सरकार जनता को औपचारिकताओं में क्यों फँसा रही है?
— Rahul Gandhi (@RahulGandhi) June 1, 2021
ಇದನ್ನೂ ಓದಿ : Drinking Hot Water : ಪ್ರತಿದಿನ ಬೆಳಗ್ಗೆ 1 ಗ್ಲಾಸ್ ಬಿಸಿನೀರು ಕುಡಿಬೇಕು? ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಸದ್ಯ ಬ್ಲ್ಯಾಕ್, ವೈಟ್, ಯೆಲ್ಲೋ, ಕ್ರೀಂ ಬಣ್ಣದ ಫಂಗಸ್ಗಳು ಕಾಣಿಸಿಕೊಂಡಿವೆ. ಪ್ರತಿದಿನ ದೇಶದಲ್ಲಿನ ಈ ಫಂಗಸ್ ಪ್ರಕರಣಗಳು(Black Fungus Cases) ಏರುತ್ತಲೇ ಇವೆ. ನಮ್ಮ(ಕರ್ನಾಟಕ) ರಾಜ್ಯವೊಂದರಲ್ಲೇ 1250 ಮಂದಿ ಬ್ಲಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ, 39 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ