New ITR E-filing Portal : ತೆರಿಗೆದಾರರು ಈಗ ಮೊಬೈಲ್ ನಲ್ಲೆ ಸಲ್ಲಿಸಬಹುದು IT Return : ಹೇಗೆ ಇಲ್ಲಿದೆ ನೋಡಿ

ಈ ಸೌಲಭ್ಯ ಜೂನ್ 7 ರಿಂದ ಮೊಬೈಲ್ ನಲ್ಲೇ ಆದಾಯ ತೆರಿಗೆ ರಿಟರ್ನ್ಸ್

Last Updated : Jun 5, 2021, 04:09 PM IST
  • ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ವಿಶೇಷ ಸೌಲಭ್ಯ
  • ಈ ಸೌಲಭ್ಯ ಜೂನ್ 7 ರಿಂದ ಮೊಬೈಲ್ ನಲ್ಲೇ ಆದಾಯ ತೆರಿಗೆ ರಿಟರ್ನ್ಸ್
  • ಈ ಪೋರ್ಟಲ್‌ಗೆ 'ಇ-ಫೈಲಿಂಗ್ 2.0' ಎಂದು ಹೆಸರಿಸಲಾಗಿದೆ
New ITR E-filing Portal : ತೆರಿಗೆದಾರರು ಈಗ ಮೊಬೈಲ್ ನಲ್ಲೆ ಸಲ್ಲಿಸಬಹುದು IT Return : ಹೇಗೆ ಇಲ್ಲಿದೆ ನೋಡಿ title=

ನವದೆಹಲಿ : ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ವಿಶೇಷ ಸೌಲಭ್ಯ ಒಂದನ್ನ ಪ್ರಾರಂಭ ಮಾಡಿದೆ. ಈ ಸೌಲಭ್ಯ ಜೂನ್ 7 ರಿಂದ ಮೊಬೈಲ್ ನಲ್ಲೇ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು. ಇ-ಫೈಲಿಂಗ್ ವೆಬ್‌ಸೈಟ್ incometaxindiaefiling.gov.in ಬಂದ್ ಆದ ನಂತ್ರ ಐಟಿಆರ್ ಫೈಲಿಂಗ್ ಪ್ರಕ್ರಿಯೆಯನ್ನ ಆರು ದಿನಗಳವರೆಗೆ ಅಂದ್ರೆ 31 ಮೇ 2021 ರ ಮಧ್ಯರಾತ್ರಿಯಿಂದ ಬಂದ್ ಮಾಡಲಾಗಿದೆ. ಜೂನ್ 6 ರಂದು ಹೊಸ ಇ-ಫೈಲಿಂಗ್ ವೆಬ್‌ಸೈಟ್ ಪ್ರಾರಂಭಿಸಲಾಗುತ್ತಿದೆ, ಈ ಫೈಲಿಂಗ್ ಪ್ರಕ್ರಿಯೆಯು ಜೂನ್ 7 ರಿಂದ ಮತ್ತೆ ಪ್ರಾರಂಭವಾಗುವುದು.

ಈ ಪೋರ್ಟಲ್‌ಗೆ 'ಇ-ಫೈಲಿಂಗ್ 2.0' ಎಂದು ಹೆಸರಿಸಲಾಗಿದೆ. ಇದರೊಂದಿಗೆ, ಇಲಾಖೆಯ ಇ-ಫೈಲಿಂಗ್‌(New ITR E-filing Portal)ಗಾಗಿ ಚಾಲನೆಯಲ್ಲಿರುವ ಹಳೆಯ ಪೋರ್ಟಲ್ʼನ್ನ ಮುಚ್ಚಲಾಗುವುದು. ಈ ಪೋರ್ಟಲ್ ಮೂಲಕ, ಆದಾಯ ತೆರಿಗೆ ಪಾವತಿದಾರರು ಮೊಬೈಲ್ ಫೋನ್‌ನಲ್ಲಿ ಸುಲಭವಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುತ್ತದೆ. ಈ ಪೋರ್ಟಲ್‌ನಲ್ಲಿ, ನೀವು ಮೊದಲೇ ಭರ್ತಿ ಮಾಡಿದ ಆದಾಯ ತೆರಿಗೆ ರಿಟರ್ನ್ ಫಾರ್ಮ್‌ಗಳೂ ಸಹ ಲಭ್ಯವಿರುತ್ವೆ. ಇದಷ್ಟೇ ಅಲ್ಲದೇ ಇದ್ರಲ್ಲಿ ಹಲವು ಸೌಲಭ್ಯಗಳು ಲಭ್ಯವಾಗುತ್ತವೆ.

ಇದನ್ನೂ ಓದಿ : Gold-Silver Rate : ಚಿನ್ನ ಬೆಲೆಯಲ್ಲಿ ₹ 2,700 ಇಳಿಕೆ : ಇಲ್ಲಿದೆ ನಿಮ್ಮ ನಗರದ ಚಿನ್ನದ ದರ!

ನೀವು ಕೂಡ ಈ ರೀತಿಯ ಆದಾಯ ತೆರಿಗೆ ರಿಟರ್ನ್ಸ್(IT Return File) ಭರ್ತಿ ಮಾಡಬಹುದು. ಇದಕ್ಕಾಗಿ ನೀವು ಮೊದಲು http://incometax.gov.in ಗೆ ಹೋಗಬೇಕು. ಇದು ಹೊಸ ವೆಬ್‌ಸೈಟ್‌ಗೆ ಲಿಂಕ್ ಆಗಿದೆ. ತಜ್ಞರ ಪ್ರಕಾರ, ಈ ಪ್ರಯೋಜನಗಳು ಹೊಸ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : Gas Booking on Paytm: ಪೇಟಿಎಂನಲ್ಲಿ ಎಲ್ಪಿಜಿ ಬುಕ್ ಮಾಡಿ, 800 ರೂ.ವರೆಗೆ ಕ್ಯಾಶ್ಬ್ಯಾಕ್ ಪಡೆಯಿರಿ

ಮೊಬೈಲ್ ಅಪ್ಲಿಕೇಶನ್ :

ಇದರೊಂದಿಗೆ, ಮೊಬೈಲ್ ಅಪ್ಲಿಕೇಶನ್(Mobile Application) ಸಹ ಅಭಿವೃದ್ಧಿಪಡಿಸಲಾಗಿದೆ. ಇದು ಮೊಬೈಲ್ ನೆಟ್ವರ್ಕ್ನಲ್ಲಿನ ಎಲ್ಲಾ ಮುಖ್ಯ ಕಾರ್ಯಗಳಿಗೆ ಪ್ರವೇಶವನ್ನ ನೀಡುತ್ತದೆ. ಈ ಪೋರ್ಟಲ್‌ನ ಎಲ್ಲಾ ಪ್ರಮುಖ ವೈಶಿಷ್ಟ್ಯಗಳು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುತ್ತವೆ. ಅಂದ್ಹಾಗೆ, ಪ್ರಸ್ತುತ ವ್ಯವಸ್ಥೆಯಲ್ಲಿ ಯಾವುದೇ ಮೊಬೈಲ್ ಅಪ್ಲಿಕೇಶನ್ ಲಭ್ಯವಿಲ್ಲ.

ಇದನ್ನೂ ಓದಿ : Petrol-Diesel Price : ವಾಹನ ಸವಾರರೇ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News