ನವದೆಹಲಿ: ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ (KL Rahul) ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಟೀಮ್ ಇಂಡಿಯಾ (Team India) ಪ್ರವಾಸದಲ್ಲಿದ್ದಾರೆ. ಜೂನ್ 18 ರಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ. ಏತನ್ಮಧ್ಯೆ, ಕೆಎಲ್ ರಾಹುಲ್ ತನ್ನ ವದಂತಿ ಗೆಳತಿ ಅಥಿಯಾ ಶೆಟ್ಟಿಯ ಕಾರಣದಿಂದಾಗಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಅಥಿಯಾ ಶೆಟ್ಟಿ (Athiya Shetty) ಕೆಲವು ದಿನಗಳ ಹಿಂದೆ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಾ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಇದನ್ನೂ ಓದಿ - KL Rahul- ಕೆ.ಎಲ್.ರಾಹುಲ್ ಫಿಟ್ನೆಸ್ ಕಂಡು ಫಿದಾ ಆದ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ
ಕೆ.ಎಲ್.ರಾಹುಲ್ ಅವರೊಂದಿಗೆ ಅಥಿಯಾ ಇಂಗ್ಲೆಂಡ್‌ನಲ್ಲಿದ್ದಾರೆಯೇ?
ಅಸಲಿಗೆ ಅಥಿಯಾ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಇತ್ತೀಚಿಗೆ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಅಥಿಯಾ ಜಾಕೆಟ್ ಧರಿಸಿದ್ದಾರೆ. ಅಷ್ಟೇ ಅಲ್ಲ, ಅಥಿಯಾ ಹಂಚಿಕೊಂಡ ಫೋಟೋ ಹೋಟೆಲ್ ಕೋಣೆಯಂತೆ ಕಾಣುತ್ತದೆ. ಸ್ವಲ್ಪ ಸಮಯದ ಹಿಂದೆ ಕೆಎಲ್ ರಾಹುಲ್ (KL Rahul) ಕೂಡ ಇದೇ ರೀತಿಯ ಜಾಕೆಟ್ ಧರಿಸಿದ್ದ ಫೋಟೋ ಹಂಚಿಕೊಂಡಿದ್ದರು. ಇದೀಗ ಅತಿಯಾ ಅವರನ್ನು ಈ ಜಾಕೆಟ್‌ನಲ್ಲಿ ಕಂಡ ಅಭಿಮಾನಿಗಳು ಇದು ರಾಹುಲ್ ಅವರ ಜಾಕೆಟ್ ಅಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.
ಅಥಿಯಾ ಶೆಟ್ಟಿಯವರ ಈ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ (Social Media) ತೀವ್ರವಾಗಿ ವೈರಲ್ ಆಗುತ್ತಿದೆ ಮತ್ತು ಅವರು ಕೆಎಲ್ ರಾಹುಲ್ ಅವರೊಂದಿಗೆ ಇಂಗ್ಲೆಂಡ್‌ಗೆ ಹೋಗಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಅವರ ಪೋಸ್ಟ್ ಬಗ್ಗೆ ಅಭಿಮಾನಿಗಳು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಇದನ್ನೂ ಓದಿ - MS Dhoni 2008ರಲ್ಲೇ ನಾಯಕತ್ವವನ್ನು ತೊರೆಯುವುದಾಗಿ ಹೇಳಿದ್ರಾ?
ವರದಿಗಳ ಪ್ರಕಾರ, ಕೆ.ಎಲ್. ರಾಹುಲ್ ಬಾಲಿವುಡ್ ನ ಹಿರಿಯ ಆಟಗಾರ ಸುನಿಲ್ ಶೆಟ್ಟಿಯವರ ಪುತ್ರಿ ಅಥಿಯಾ ಶೆಟ್ಟಿ ಜೊತೆ ಸಂಬಂಧ ಹೊಂದಿದ್ದಾರೆ. ರಾಹುಲ್ ಮತ್ತು ಅಥಿಯಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.