Mobile Charging : ನಿಮ್ಮ ಮೊಬೈಲ್ ಚಾರ್ಜ್ ಆಗುತ್ತಿಲ್ಲವೇ? ಹಾಗಿದ್ರೆ ಹೀಗೆ ಮಾಡಿ

ಅನೇಕ ಬಾರಿ ಬ್ಯಾಟರಿ ಅಥವಾ ನಿಮ್ಮ ಚಾರ್ಜರ್ ಹಾಳಾಗಿರುವುದಿಲ್ಲ. ಬೇರೆ ಕಾರಣ ಕೂಡ ಇರಬಹುದು. ಅದನ್ನು ಮನೆಯಲ್ಲಿಯೇ ಕುಳಿತು ಸರಿಪಡಿಸಬಹುದು.

Last Updated : Jun 18, 2021, 11:03 AM IST
  • ಬ್ಯಾಟರಿ ಅಥವಾ ನಿಮ್ಮ ಚಾರ್ಜರ್ ಹಾಳಾಗಿರುವುದಿಲ್ಲ
  • ಸರಿಯಾಗಿ ಓದದೇ ಅಪ್ ಡೇಟಿಂಗ್ ಸಂದೇಶವನ್ನು ಡಿಲಿಟ್ ಮಾಡಿ ಬಿಡ್ತೇವೆ
  • ಮೊಬೈಲ್ ಚಾರ್ಜಿಂಗ್ ನಲ್ಲಿ USB ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತದೆ
Mobile Charging : ನಿಮ್ಮ ಮೊಬೈಲ್ ಚಾರ್ಜ್ ಆಗುತ್ತಿಲ್ಲವೇ? ಹಾಗಿದ್ರೆ ಹೀಗೆ ಮಾಡಿ title=

ಕೆಲವೊಮ್ಮೆ ಆಕಸ್ಮಿಕವಾಗಿ ಮೊಬೈಲ್ ಚಾರ್ಜ್ ಆಗುವುದೇ ಇಲ್ಲ. ಚಾರ್ಜರ್ ಹಾಳಾಗಿದೆ ಇಲ್ಲ ಬ್ಯಾಟರಿ ಹೋಗಿದೆ ಅಂತಾ ತಿಳಿಯುವ ಬಳಕೆದಾರರು ಇದನ್ನು ರಿಪೇರಿಗೆ ಕೊಂಡೊಯ್ಯುತ್ತಾರೆ.

ಆದ್ರೆ ಅನೇಕ ಬಾರಿ ಬ್ಯಾಟರಿ(Battery) ಅಥವಾ ನಿಮ್ಮ ಚಾರ್ಜರ್ ಹಾಳಾಗಿರುವುದಿಲ್ಲ. ಬೇರೆ ಕಾರಣ ಕೂಡ ಇರಬಹುದು. ಅದನ್ನು ಮನೆಯಲ್ಲಿಯೇ ಕುಳಿತು ಸರಿಪಡಿಸಬಹುದು.

ಇದನ್ನೂ ಓದಿ : iPhone ಕಳೆದುಹೋಗಿದೆಯೇ, ಅದನ್ನು ಹುಡುಕಲು/ಡೇಟಾ ಅಳಿಸಲು ಇಲ್ಲಿದೆ ಸುಲಭ ಮಾರ್ಗ

ಹಾಗಾದ್ರೆ ಯಾವೆಲ್ಲ ಕಾರಣಗಳಿಂದ ಮೊಬೈಲ್ ಚಾರ್ಜ್(Mobile Charger) ಆಗುವುದಿಲ್ಲ ಎಂಬುವುದನ್ನು ನೋಡುವುದಾದ್ರೆ.

ಮೊಬೈಲ್ ಒದ್ದೆಯಾಗುವುದು ಒಂದು ಕಾರಣ. ನನ್ನ ಮೊಬೈಲ್ ನೀರಿಗೆ ಬಿದ್ದಿಲ್ಲ ಆದ್ರೂ ಚಾರ್ಜ್(Charger) ಆಗ್ತಿಲ್ಲ ಎನ್ನುವವರಿದ್ದಾರೆ. ನಿಮ್ಮ ಮೊಬೈಲ್ ನೀರಿಗೆ ಬೀಳಬೇಕೆಂದೇನೂ ಇಲ್ಲ. ನಿಮ್ಮ ಬೆವರು ಅಥವಾ ಕೈಗೆ ಇರುವ ನೀರು ಕೂಡ ಮೊಬೈಲ್ ಚಾರ್ಜ್ ಆಗದಿರಲು ಕಾರಣವಾಗುತ್ತದೆ. ಆಗ ಮೊಬೈಲ್ ಬ್ಯಾಟರಿ ತೆಗೆದು ಒಣಗಿದ ಬಟ್ಟೆಯಲ್ಲಿ ಕ್ಲೀನ್ ಮಾಡಿ ಮತ್ತೆ ಹಾಕಿ.

ಇದನ್ನೂ ಓದಿ : Google ಬಳಕೆದಾರರಿಗೆ ಸಿಹಿ ಸುದ್ದಿ : ಗೂಗಲ್‌ನಿಂದ 'Photos Hide' ಸೌಲಭ್ಯ, ಇಲ್ಲಿದೆ ಮಾಹಿತಿ

ಎಷ್ಟೇ ಗಮನ ಹರಿಸಿದ್ರೂ ಮೊಬೈಲ್(Mobile) ಗೆ ಧೂಳು, ಮಣ್ಣು ತಗಲುವ ಸಾಧ್ಯತೆ ಇರುತ್ತದೆ. ಹಾಗಾಗಿ ಮೊದಲು ಮೊಬೈಲ್ ಚಾರ್ಜ್ ಮಾಡುವ ಜಾಗವನ್ನು ನೋಡಿ. ಅದನ್ನು ಹಗುರ ಬಟ್ಟೆಯಿಂದ ಕ್ಲೀನ್ ಮಾಡಿ. ನಂತ್ರ ಚಾರ್ಜರ್ ಹಾಕಿ.

ಇದನ್ನೂ ಓದಿ : Twitter Appoints Interim Chief Compliance Officer: ಕೊನೆಗೂ ಒತ್ತಡಕ್ಕೆ ಮಣಿದ Twitterನಿಂದ ಮಧ್ಯಂತರ ಮುಖ್ಯ ಅನುಸರಣಾ ಅಧಿಕಾರಿಯ ನೇಮಕ

ಸರಿಯಾಗಿ ಓದದೇ ಅಪ್ ಡೇಟಿಂಗ್(Mobile Update) ಸಂದೇಶವನ್ನು ಡಿಲಿಟ್ ಮಾಡಿ ಬಿಡ್ತೇವೆ. ಆದ್ರೆ ಅದ್ರಲ್ಲಿ ಬ್ಯಾಟರಿ ಅಪ್ ಡೇಟಿಂಗ್ ಸಂದೇಶ ಕೂಡ ಬಂದಿರುವ ಸಾಧ್ಯತೆಗಳಿರುತ್ತದೆ. ನವೀಕರಣ ಸಂದೇಶ ಬಂದಾಗ ಬ್ಯಾಟರಿಯನ್ನು ಅಪ್ ಡೇಟ್ ಮಾಡಬೇಕಾಗುತ್ತದೆ. ಹಾಗೆ ಮಾಡದಿದ್ದಲ್ಲಿ ಮೊಬೈಲ್ ಚಾರ್ಜ್ ಆಗುವುದಿಲ್ಲ.

ಇದನ್ನೂ ಓದಿ : Whatsapp Number change : ಹೀಗೆ ಮಾಡಿದರೆ ಸುಲಭವಾಗಿ ಬದಲಾಯಿಸಬಹುದು ವಾಟ್ಸಾಪ್ ನಂಬರ್

ಮೊಬೈಲ್ ಚಾರ್ಜಿಂಗ್ ನಲ್ಲಿ USB ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಬಹಳ ಹೊತ್ತಿನವರೆಗ ಫೋನ್ ಚಾರ್ಜ್ ಆಗಿಲ್ಲವೆಂದಾದ್ರೆ USB ಸಮಸ್ಯೆ ಇದೆ ಎಂದರ್ಥ. ಹಾಗಾಗಿ USB ಚೆಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News