ನವದೆಹಲಿ : ಅನೇಕರಿಗೆ ಸೋಫಾದ ಮೇಲೆ ಮಲಗಿಕೊಂಡು (Sleeping on sofa) ಟಿವಿ ನೋಡುವ ಅಭ್ಯಾಸ ಇರುತ್ತದೆ. ಟಿವಿ ನೋಡಿಕೊಂಡು ಅಲ್ಲಿಯೇ ನಿದ್ರೆಗೆ ಜಾರುತ್ತಾರೆ. ಆದರೆ ಸೋಫಾದ ಮೇಲೆ ಮಲಗುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ (side effects of sleeping on sofa) ಎಂದು ನಿಮಗೆ ತಿಳಿದಿದೆಯೇ? ಸೋಫಾದಲ್ಲಿ ಸ್ಪಾಂಜ್ ಅನ್ನು ಬಳಸಲಾಗುತ್ತದೆ. ಇದರಿಂದಾಗಿ ಅದರ ಮೇಲೆ ಮಲಗುವುದು ತುಂಬಾ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ.
ಸೋಫಾ ಮತ್ತು ಹಾಸಿಗೆ ನಡುವೆ ಬಹಳ ದೊಡ್ಡ ವ್ಯತ್ಯಾಸವಿದೆ. ಹಾಸಿಗೆ ಹಾರ್ಡ್ ಆಗಿರುತ್ತದೆ. ಸೋಫಾ ತುಂಬಾ ಮೃದುವಾಗಿರುತ್ತದೆ. ಮೃದುವಾದ ಸ್ಪಾಂಜ್ ಅನ್ನು ಸೋಫಾದಲ್ಲಿ (sofa) ಬಳಸಲಾಗುತ್ತದೆ. ಸ್ಪಾಂಜ್ ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ (side effects of sleeping on sofa).ಇದರಿಂದಾಗಿ ಸೋಫಾದಲ್ಲಿ ಮಲಗಿದ ನಂತರ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ : Benefits of Giloy : ಆರೋಗ್ಯಕ್ಕೆ ಪ್ರಯೋಜನಕಾರಿ 'ಅಮೃತ ಬಳ್ಳಿಯ ಕಷಾಯ' : ಮನೆಯಲ್ಲಿಯೇ ತಯಾರಿಸಿ!
ಸೋಫಾ ಹಾಸಿಗೆಯಂತೆ ಉದ್ದ ಮತ್ತು ಅಗಲವಾಗಿರುವುದಿಲ್ಲ. ಆ ಕಾರಣದಿಂದ ನೀವು ಮುದುರಿಕೊಂಡು ಮಲಗಬೇಕಾಗುತ್ತದೆ. ಈ ಕಾರಣ, ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಬೆನ್ನುನೋವಿನ (Back ache) ಸಮಸ್ಯೆ ಪ್ರಾರಂಭವಾಗುತ್ತದೆ.
ನಾವು ಸೋಫಾದಲ್ಲಿ ಸರಿಯಾದ ರೀತಿಯಲ್ಲಿ ಮಲಗುವುದು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಾಗಿ, ಬೆನ್ನುನೋವಿನ ಬಗ್ಗೆ ದೂರುತ್ತಲೇ ಇರುತ್ತೇವೆ.
ಇನ್ನು ಹಾಸಿಗೆಯ ಬದಲು ಸೋಫಾದ ಮೇಲೆ ನಿರಂತರವಾಗಿ ಮಲಗುವ (sleeping problem) ಅಭ್ಯಾಸವನ್ನು ಹೊಂದಿದ್ದರೆ, ಮುಂದೆ ನಿದ್ರಾ ಹೀನತೆಯ ತೊಂದರೆಗಳು ಮತ್ತು ತಲೆನೋವಿನ ಸಮಸ್ಯೆ ಎದುರಾಗಬಹುದು.
ಇದನ್ನೂ ಓದಿ : face hair removal tips:ಮುಖದ ಮೇಲಿನ ಕೂದಲಿನ ಸಮಸ್ಯೆಗೆ ಈ ಸುಲಭ ಪರಿಹಾರ ಟ್ರೈ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.