face hair removal tips:ಮುಖದ ಮೇಲಿನ ಕೂದಲಿನ ಸಮಸ್ಯೆಗೆ ಈ ಸುಲಭ ಪರಿಹಾರ ಟ್ರೈ ಮಾಡಿ

face hair removal tips: ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ. ಈ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿರುತ್ತಾರೆ.

Written by - Ranjitha R K | Last Updated : Jul 1, 2021, 12:28 PM IST
  • ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ
  • ಈ ಸಮಸ್ಯೆಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ
  • ಈ ಟಿಪ್ಸ್ ಬಳಸಿದರೆ ಮುಖದ ಮೇಲಿನ ಕೂದಲು ಮಾಯ
face hair removal tips:ಮುಖದ ಮೇಲಿನ ಕೂದಲಿನ ಸಮಸ್ಯೆಗೆ ಈ ಸುಲಭ ಪರಿಹಾರ ಟ್ರೈ  ಮಾಡಿ  title=
ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ (photo zee news)

ನವದೆಹಲಿ : face hair removal tips: ಮುಖದ ಮೇಲೆ ಬೆಳೆಯುವ ಕೂದಲು ಮುಖದ ಅಂದ ಕೆಡಿಸುತ್ತದೆ. ಈ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿರುತ್ತಾರೆ. ಸಮಸ್ಯೆಯ ಪರಹಾರಕ್ಕೆ ನಾನಾ ಪ್ರಯತ್ನಗಳನ್ನು ಕೂಡ ಮಾಡುತ್ತಿರುತ್ತಾರೆ. ಆದರೆ ಪರಿಹಾರ ಸಿಗದೇ ಕೊರಗುತ್ತಾರೆ. ಈ ಸಮಸ್ಯೆಗೆ ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಸುಲಭ ಪರಿಹಾರ. 

1. ನಿಂಬೆ ಮತ್ತು ಜೇನುತುಪ್ಪ :
ನಿಂಬೆ, ಸಕ್ಕರೆ  (Sugar) ಮತ್ತು ಜೇನು ತುಪ್ಪದ ಮಿಶ್ರಣದಿಂದ ಮುಖದ ಮೇಲಿನ ಕೂದಲನ್ನು ತೆಗೆದುಹಾಕಬಹುದು. ಇದಕ್ಕಾಗಿ ನೀವು ಎರಡು ಚಮಚ ಸಕ್ಕರೆ, ನಿಂಬೆ ರಸ (lemon) ಮತ್ತು ಒಂದು ಚಮಚ ಜೇನುತುಪ್ಪವನ್ನು ಬೆರೆಸಬೇಕು.

-ಈ ಮಿಶ್ರಣವನ್ನು ಸುಮಾರು ಮೂರು ನಿಮಿಷಗಳ ಕಾಲ ಬಿಸಿ ಮಾಡಿ.
-ಅಗತ್ಯವಿದ್ದರೆ, ಮಿಶ್ರಣವನ್ನು ತೆಳುವಾಗಿ ಮಾಡಿಕೊಳ್ಳಿ 
-ಪೇಸ್ಟ್ ತಣ್ಣಗಾದ ನಂತರ, ಕೂದಲು ಬೆಳೆದಿರುವ ಜಾಗಕ್ಕೆ ಹಚ್ಚಿ. 
-ಈಗ ವ್ಯಾಕ್ಸಿಂಗ್ ಸ್ಟ್ರಿಪ್ ಅಥವಾ ಹತ್ತಿ ಬಟ್ಟೆಯನ್ನು ತೆಗೆದುಕೊಳ್ಳಿ .
- ವ್ಯಾಕ್ಸಿಂಗ್ ಸ್ಟ್ರಿಪ್ ಅನ್ನು ಪೇಸ್ಟ್  ಮೇಲೆ ಸರಿಯಾಗಿ ಅಂಟಿಸಿ
-ಕೂದಲು ಬೆಳವಣಿಗೆಯ ವಿರುದ್ಧ ದಿಕ್ಕಿಗೆ ಎಳೆಯಿರಿ .
ಜೇನುತುಪ್ಪವು (Honey) ಚರ್ಮವನ್ನು moisturize ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Benefits of Giloy : ಆರೋಗ್ಯಕ್ಕೆ ಪ್ರಯೋಜನಕಾರಿ 'ಅಮೃತ ಬಳ್ಳಿಯ ಕಷಾಯ' : ಮನೆಯಲ್ಲಿಯೇ ತಯಾರಿಸಿ!

2. ಸಕ್ಕರೆ ಮತ್ತು ನಿಂಬೆ ರಸ :
ನೀವು ಸಕ್ಕರೆ ಮತ್ತು ನಿಂಬೆಯೊಂದಿಗೆ ಕೂಡಾ ಮುಖದ ಕೂದಲನ್ನು ತೆಗೆದುಹಾಕಬಹುದು. ಏಕೆಂದರೆ ಸಕ್ಕರೆ ನೈಸರ್ಗಿಕ ಎಕ್ಸ್ ಫ್ಫೋಲಿಯೇಟಿಂಗ್ ಏಜೆಂಟ್ ಮತ್ತು ಬಿಸಿ ಸಕ್ಕರೆ ನಿಮ್ಮ ಕೂದಲಿಗೆ ಅಂಟಿಕೊಳ್ಳುತ್ತದೆ. ಆದರೆ ನಿಂಬೆ ರಸ ಚರ್ಮದ ಕೂದಲಿನ ಮೇಲೆ ನೈಸರ್ಗಿಕ ಬ್ಲೀಚ್ ನಂತೆ ಕಾರ್ಯನಿರ್ವಹಿಸುತ್ತದೆ. 

-ನೀವು ಮೊದಲು 8-9 ಚಮಚ ನೀರಿಗೆ ಎರಡು ಚಮಚ ಸಕ್ಕರೆ ಮತ್ತು ನಿಂಬೆ ರಸ (Lime juice) ಬೆರೆಸಬೇಕು.
- ಅದರಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುವವರೆಗೆ ಈ ಮಿಶ್ರಣವನ್ನು ಬಿಸಿ ಮಾಡಿ ನಂತರ ತಣ್ಣಗಾಗಲು ಬಿಡಿ.
 -ತಣ್ಣಗಾದ  ಮೇಲೆ ಕೂದಲು ಬೆಳೆದಿರುವ ಜಾಗಕ್ಕೆ ಈ ಪೇಸ್ಟ್ ಅನ್ನು ಹಚ್ಚಿ.  ಸುಮಾರು 20-25 ನಿಮಿಷಗಳ ಕಾಲ ಬಿಡಿ.
-ವೃತ್ತಾಕಾರದ ಚಲನೆಯಲ್ಲಿ ಉಜ್ಜುವ ಮೂಲಕ ಅದನ್ನು ತಣ್ಣೀರಿನಿಂದ ತೊಳೆಯಿರಿ.

ಇದನ್ನೂ ಓದಿ : Ice Tea : ಬಿಸಿಲಿನಿಂದ ರಕ್ಷಿಸಿಕೊಳ್ಳಲು ಈ 5 ರೀತಿಯ ಟೀ ಕುಡಿಯಿರಿ!

3. ಓಟ್ ಮೀಲ್ ಮತ್ತು ಬಾಳೆಹಣ್ಣು :
ಓಟ್ ಮೀಲ್ ಮತ್ತು ಬಾಳೆಹಣ್ಣು (Banana) ಕೂಡ ಮುಖದ ಕೂದಲನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಈ ವಿಧಾನವು ತುಂಬಾ ಸುಲಭ. ಓಟ್ ಮೀಲ್ ಉತ್ತಮವಾದ, ಹೈಡ್ರೇಟಿಂಗ್ ಸ್ಕ್ರಬ್ ಆಗಿ ಕೆಲಸ ಮಾಡುತ್ತದೆ. ಚರ್ಮದ ರೆಡ್ನೆಸ್ಸ್ ದೂರ ಮಾಡಲು ಕೂಡ ಇದು ಸಹಕಾರಿಯಾಗಿದೆ. 

-ಮೊದಲು  ಎರಡು ಚಮಚ ಓಟ್ ಮೀಲ್ ಅನ್ನು ಮಾಗಿದ ಬಾಳೆಹಣ್ಣಿನೊಂದಿಗೆ ಬೆರೆಸಬೇಕು.
-ಅದರ ಪೇಸ್ಟ್ ತಯಾರಿಸಿ ಕೂದಲು ಬೆಳೆದಿರುವ ಜಾಗಕ್ಕೆ ಹಚ್ಚಿ.
-ಇದನ್ನು 15 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.
- ಈ ಪೇಸ್ಟ್ ಮುಖದ ಮೇಲಿನ ಕೂದಲು  ತೆಗೆದು ಹಾಕಲು ಮಾತ್ರವಲ್ಲ ಚರ್ಮದ ಕಾಂತಿಯನ್ನು ಕೂಡಾ ಹೆಚ್ಚಿಸುತ್ತದೆ. 

ಇದನ್ನೂ ಓದಿ : ದೇಹಾರೋಗ್ಯ ಮಾತ್ರ ಅಲ್ಲ, ತ್ವಚೆಯ ಆರೋಗ್ಯಕ್ಕೂ ಪ್ರಯೋಜನಕಾರಿ ನೆಲ್ಲಿಕಾಯಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News