ಬೆಂಗಳೂರು : ಜೀವನಕ್ರಮ ಬದಲಾಗುತ್ತಿದೆ. ಹಾಗಾಗಿ ಆರೋಗ್ಯದ ಮೇಲೆ ಒತ್ತಡವೂ ಹೆಚ್ಚಿಗೆ ಆಗುತ್ತಿದೆ. ನೀವು ನಿಮ್ಮ ಹಾರ್ಟ್ ಹೆಲ್ತಿ ಇರಬೇಕು ಎಂದು ಬಯಸಿದ್ದರೆ, ವ್ಯಾಯಾಮದ ಜೊತೆಗೆ ಊಟ ತಿಂಡಿ ವಿಚಾರದಲ್ಲೂ (Healthy breakfast) ಕೊಂಚ ಚೂಸಿ ಆಗಬೇಕು. ಹೆಲ್ತಿ ಹೃದಯಕ್ಕಾಗಿ ನಿಮ್ಮ ಬೆಳಗ್ಗಿನ ಉಪಹಾರದಲ್ಲಿ ಏನಿದ್ದರೆ ಸೂಕ್ತ ಎಂಬುದರ ಮಾಹಿತಿ ಇಲ್ಲಿದೆ. ಇದು ಮಕ್ಕಳಿಗೂ ತೀರಾ ಇಷ್ಟ ಆಗುತ್ತದೆ. ಮತ್ತು ಹೆಲ್ತಿ. ಅಲ್ಲದೇ ಫಟಾಫಟ್ ಮಾಡಿಬಿಡಬಹುದು.
1. ಬ್ರೌನ್ ಬ್ರೆಡ್ ಸ್ಯಾಂಡ್ ವಿಚ್.
ಸಾಮಾನ್ಯ ಬ್ರೆಡ್ (Bread) ಮೈದಾ ಬಳಸಿ ಮಾಡಲಾಗುತ್ತದೆ. ಹಾಗಾಗಿ ಬ್ರೌನ್ ಬ್ರೆಡ್ ಬಳಕೆ ಸೂಕ್ತ. ಬ್ರೌನ್ ಬ್ರೆಡ್ ಬಳಸಿಯೇ ಸ್ಯಾಂಡ್ ವಿಚ್ (sandwitch) ಮಾಡಿ. ಸ್ಯಾಂಡ್ ವಿಚ್ ಗಾಗಿ ನೀವು ನಿಮ್ಮ ಇಷ್ಟದ ತರಕಾರಿ ಸೇರಿಸಬಹುದು. ಟೊಮ್ಯಾಟೋ (Tomato), ಸೌತೆಕಾಯಿ, ಮಷ್ರೂಮ್, ಇತ್ಯಾದಿ ಸೇರಿಸಿ ಮಾಡಿದರೆ ಬ್ರೇಕ್ ಫಾಸ್ಟ್ ಹೆಲ್ತಿ ಆಗಿರುತ್ತದೆ.
ಇದನ್ನೂ ಓದಿ : ರಾತ್ರಿ ಮಲಗುವ ಮುನ್ನ ಈ ಎರಡು ಅಂಗಗಳಿಗೆ ಎಣ್ಣೆ ಹಚ್ಚಿದರೆ ಅದ್ಭುತ ಪ್ರಯೋಜನ ಸಿಗಲಿದೆ
2. ಮೊಳಕೆಕಾಳು
ಮೊಳಕೆಕಾಳಿನಲ್ಲಿ (Sprouts) ಅಪರಿಮಿತ ಪ್ರಮಾಣದಲ್ಲಿ ಪೋಷಕಾಂಶಗಳಿರುತ್ತವೆ. ಇವು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ. ಹಾರ್ಟಿನ ಆರೋಗ್ಯಕ್ಕೂ ಇವು ಬೆಸ್ಟ್. ಬೆಳಗ್ಗಿನ ಉಪಹಾರಕ್ಕೆ ನಿತ್ಯವೂ ಮೊಳಕೆ ಕಾಳು ತಿನ್ನಿ. ಮೊಳಕೆ ಕಾಳನ್ನು ಮನೆಯಲ್ಲೇ ತಯಾರಿಸಬಹುದು. ಮಾರ್ಕೆಟಿನಿಂದಲೂ ತರಬಹುದು. ಟೇಸ್ಟಿಗಾಗಿ ಟ್ಯೊಮ್ಯಾಟೋ, ಲಿಂಬು (Lemon), ಕರಿಮೆಣಸು ಸೇರಿಸಿ ಸ್ವಲ್ಪ ಸ್ಪೈಸೀ ಮಾಡಬಹುದು.
3. ಮೊಸರು ಮತ್ತು ಹಣ್ಣು
ಗಟ್ಟಿ ಮೊಸರನ್ನು (Curd) ನಿಮ್ಮ ನಾಸ್ತಾದಲ್ಲಿ ತಿನ್ನಬಹುದು. ಮೊಸರು ಮತ್ತು ಹಣ್ಣು ಈ ಕಾಂಬಿನೇಷನ್ ಹೊಟ್ಟೆ ತುಂಬಿಸುತ್ತದೆ ಜೊತೆಗೆ ನಿಮ್ಮನ್ನು ಹೆಲ್ತಿಯಾಗಿಡುತ್ತದೆ. ಇದು ಹೃದಯಕ್ಕೂ ಎನರ್ಜಿ ತುಂಬುತ್ತದೆ. ಇದರಲ್ಲಿ ಕೊಬ್ಬು ಕಡಿಮೆ ಇರುತ್ತದೆ. ಆಂಟಿ ಆಕ್ಸಿಡೆಂಟ್ ಕೂಡಾ ಹೌದು. ಮೊಸರು ಮತ್ತು ಹಣ್ಣು ಅತ್ಯುತ್ತಮ ಡೆಸರ್ಟ್ ಕೂಡಾ ಹೌದು.
4. ಓಟ್ಸ್ ಉಪಮಾ ಅಥವಾ ಇಡ್ಲಿ
ನಿಮ್ಮ ಹಾರ್ಟ್ ಆರೋಗ್ಯವಾಗಿರಬೇಕಾದರೆ ಬ್ರೇಕ್ ಫಾಸ್ಟಿನಲ್ಲಿ ಖಂಡಿತಾ ಓಟ್ಸ್ (Oats)ಇರಲಿ. ಓಟ್ಸ್ ಬೇರೆ ಬೇರೆ ವಿಧಾನದಲ್ಲಿ ಕುಕ್ ಮಾಡಿ ತಿನ್ನಬಹುದಾಗಿದೆ. ಓಟ್ಸ್ ನಲ್ಲಿ ಸಾಕಷ್ಟು ಫೈಬರ್ ಇರುತ್ತದೆ. ಓಟ್ಸ್ ಅನ್ನು ಹಣ್ಣುಗಳ ಜೊತೆಗೂ ತಿನ್ನಬಹುದು. ಅದರ ಇಡ್ಲಿ ಮಾಡಿ ಬಡಿಸಬಹುದು. ಅದಕ್ಕೆ ನಿಮಗಿಷ್ಟದ ತರಕಾರಿ ಸೇರಿಸಿ ಇಡ್ಲಿ ಮಾಡಬಹುದು.
ಇದನ್ನೂ ಓದಿ : Papaya Juice Benefits: ಪರಂಗಿ ಹಣ್ಣಿನ ಜ್ಯೂಸ್ ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ
5. ಮಲ್ಟಿಗ್ರೇನ್ ಇಡ್ಲಿ:
ಹಬೆಯಲ್ಲಿ ಬೆಂದ ಇಡ್ಲಿ ಆರೋಗ್ಯಕ್ಕೆ (idly for good health)ಬಹಳ ಒಳ್ಳೆಯದು. ಯಾಕೆಂದರೆ ಇಲ್ಲಿ ಎಲ್ಲೂ ನೀವು ಎಣ್ಣೆ ಬಳಸುವುದಿಲ್ಲ ಇದಕ್ಕೆ ಜೋಳ, ಮೆಕ್ಕೆಜೋಳ, ಓಟ್ಸ್, ಗೋಧಿ ಹಿಟ್ಟು, ಇತ್ಯಾದಿ ಸೇರಿಸಿಯೂ ಇಡ್ಲಿ ಮಾಡಬಹುದು. ಬಹುಧಾನ್ಯ ಬಳಸಿ ಮಾಡುವ ಇಡ್ಲಿಗೆ ಬೇಕೆನಿಸಿದರೆ ನಿಮಗಿಷ್ಟದ ತರಕಾರಿ ಸೇರಿಸಬಹುದು.
6. ಎಗ್ ವೈಟ್ ಆಮ್ಲೇಟ್
ಮೊಟ್ಟೆಯು (Egg) ಪ್ರೊಟೀನ್ ಸಾಕಷ್ಟು ಪ್ರಮಾಣದಲ್ಲಿರುತ್ತದೆ. ಮೊಟ್ಟೆ ಎನರ್ಜಿ ಬೂಸ್ಟರ್. ಬ್ರೇಕ್ ಫಾಸ್ಟಿನಲ್ಲಿ ಮೊಟ್ಟೆ ಇದ್ದರೆ, ಶರೀರಕ್ಕೆ ಶಕ್ತಿ ಸಿಗುತ್ತದೆ. ಆದರೆ, ಮೊಟ್ಟೆಯನ್ನು ಬ್ರೇಕ್ ಫಾಸ್ಟಿಗೆ ಬಳಸುವ ಮೊದಲು ಒಂದು ಮುನ್ನೆಚ್ಚರಿಕೆ ಇರಲಿ. ಮೊಟ್ಟೆಯ ಹಳದಿ ಬಣ್ಣದ ಭಾಗವನ್ನು ತೆಗೆಯಿರಿ. ಕೇವಲ ಬಿಳಿ ಬಣ್ಣದ ಭಾಗವನ್ನು ಮಾತ್ರ ತಿನ್ನಿ
7. ಮಿಕ್ಸ್ ಫ್ರೂಟ್ ಓಟ್ಸ್ ಸ್ಮೂದಿ
ಬೆಳಗ್ಗಿನ ಉಪಹಾರದಲ್ಲಿ ಸ್ಮೂದಿಯ ಬಳಕೆ ಬೆಸ್ಟ್ ಆಯ್ಕೆ. ಸ್ಮೂದಿ ತಿಂದರೆ ಬೇಗ ಹಸಿವಾಗುವುದಿಲ್ಲ. ಇದು ಟೇಸ್ಟಿ ಮತ್ತು ಹೆಲ್ತಿ ಕೂಡಾ. ಹಾರ್ಟಿಗೂ ಇದು ಬೆಸ್ಟ್. ಇದನ್ನು ಫಟಾಫಟ್ ಮಾಡಬಹುದು. ಬಾಳೆ ಹಣ್ಣು, ಹಾಲು, ದಾಳಿಂಬೆ, ಮೊಸರು ಮತ್ತು ಓಟ್ಸ್ ಮಿಕ್ಸ್ ಮಾಡಿ ಬ್ಲೆಂಡರ್ ನಿಂದ ಬ್ಲೆಂಡ್ ಮಾಡಿ ಬಿಟ್ಟರೆ, ನಿಮ್ಮ ಸ್ಮೂದಿ ರೆಡಿ. ಮಕ್ಕಳಿಗೂ ಇದು ಸಖತ್ ಇಷ್ಟ ಆಗುತ್ತದೆ.
ಇದು ಸಾಮಾನ್ಯ ಜ್ಞಾನ ಪರಂಪರೆಯಿಂದ ಬಂದಿರುವ ಮಾಹಿತಿಗಳಾಗಿವೆ. ಅನ್ವಯ ಮಾಡಿಕೊಳ್ಳುವ ಮುನ್ನ ಯೋಗ್ಯ ವೈದ್ಯರ ಸಲಹೆ ಪಡೆಯುವುದು ಕೂಡಾ ಸೂಕ್ತ.
ಇದನ್ನೂ ಓದಿ : ವರ್ಷಗಳು ಕಳೆದರೂ ಈ ಐದು ವಸ್ತುಗಳು ಕೆಡುವುದೇ ಇಲ್ಲ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ