ನವದೆಹಲಿ: ಬಾಲಿವುಡ್ ನಟಿ ಕಂಗನಾ ರನೌತ್ ಯಾವಾಗಲೂ ಒಂದಿಲ್ಲೊಂದು ಸುದ್ದಿಯಲ್ಲಿ ಸದಾ ಮುಳುಗಿರುತ್ತಾರೆ, ಈ ಹಿಂದೆ ತಾಪಸಿ ಪನ್ನು ವಿರುದ್ಧ ವಾಗ್ದಾಳಿ ನಡೆಸಿದ್ದ ಅವರು, ಈಗ ಏಕಾಏಕಿ ಪ್ರಿಯಾಂಕಾ ಚೋಪ್ರಾ ವಿರುದ್ಧ ವ್ಯಂಗವಾಡಿದ್ದಾರೆ.
ಬದಲಾದ ರಾಜಕೀಯ ನಿಲುವುಗಳಿಗಾಗಿ ಪ್ರಿಯಾಂಕಾರನ್ನು (Priyanka Chopra) ತರಾಟೆಗೆ ತೆಗೆದುಕೊಂಡ ಕಂಗನಾ, ಅವರನ್ನು ಜಾತ್ಯಾತೀತ ನಾಯಿ ಎಂದು ಕರೆದಿದ್ದಾರೆ.ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಬರೆದುಕೊಂಡಿರುವ ಅವರು' ಆದರೆ ಇದು ಕೇವಲ ಪತ್ರಿಕೋದ್ಯಮದಲ್ಲಿ ಮಾತ್ರವಲ್ಲ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ಇದೆ; ಪ್ರಿಯಾಂಕಾ ಚೋಪ್ರಾ ರಾಷ್ಟ್ರೀಯತಾವಾದಿಯಾಗಿ ಜಾತ್ಯತೀತ ನಾಯಿಮರಿಗಳತ್ತ ಸಾಗಿದ ರೀತಿ. ಮೋದಿ ಜಿ ಅವರ ಅತಿದೊಡ್ಡ ಅಭಿಮಾನಿಯಾಗುವುದರಿಂದ ಅವರ ಭಾವೋದ್ರಿಕ್ತ ವಿಮರ್ಶಕ ಮತ್ತು ದ್ವೇಷಿಸುವುದರತ್ತ ಸಾಗಿರುವುದು ಸ್ಪಷ್ಟವಾಗಿದೆ. ಮೂಲತಃ, ರೊಟ್ಟಿ ಕೆ ಲಿಯೆ ದುನಿಯಾ ನಾಚತಿ ಹೈ. ಅಪ್ನೆ ದೇಶ್ ಮೇ ಸ್ವಾತಂತ್ರ್ಯ ತೋ ತೋ ಹೈ. ಜೋ ಕರ್ನಾ ಹೈ ಕರೋ ಅವರನ್ನು ಅವರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Priyanka Chopra 11 ಮಕ್ಕಳ ತಾಯಿ ಆಗಲು ಬಯಸುತ್ತಾರಾ? ಅವರ ಪ್ಲಾನ್ ಏನು ?
ಈ ಹಿಂದೆ ರೈತರ ಆಂದೋಲನ (Farmers Protest) ವಿಚಾರದಲ್ಲಿ ದಿಲ್ಜಿತ್ ದೊಸಾಂಜ್ ವಿರುದ್ಧ ಕಂಗನಾ ರನೌತ್ ವಾಗ್ದಾಳಿ ನಡೆಸಿದ್ದರು. ಇನ್ನೂ ಮುಂದುವರೆದು ಅವರನ್ನು ರಾಷ್ಟ್ರ ವಿರೋಧಿಗಳು ಎಂದು ಕರೆದಿದ್ದರು, ಅಷ್ಟೇ ಅಲ್ಲದೆ ರೈತರ ಪ್ರತಿಭಟನೆಯನ್ನು ಇಬ್ಬರು ತಪ್ಪುದಾರಿಗೆಳೆಯುವ ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಅವರು ತಮ್ಮ ಟ್ವೀಟ್ಗಳಲ್ಲಿ ಹೇಳಿದ್ದರು.
ಇದನ್ನೂ ಓದಿ: Priyanka Chopraಗೆ ಬಾಡಿಗೆದಾರರಾದ Jacqueline Fernandez ತಿಂಗಳಿಗೆ ಪಾವತಿಸುವ ಹಣವೆಷ್ಟು?
ಸದ್ಯಕ್ಕೆ ಕಂಗನಾ ರನೌತ್ ಮುಂಬರುವ ಚಿತ್ರ ‘ಟಿಕು ವೆಡ್ಸ್ ಶೆರು’ಚಿತ್ರದ ಮೂಲಕ ನಿರ್ಮಾಪಕರಾಗಿ ಡಿಜಿಟಲ್ ಚೊಚ್ಚಲ ಪ್ರವೇಶಕ್ಕೆ ಸಜ್ಜಾಗಿದ್ದಾರೆ. ಜೊತೆಗೆ ತಲೈವಿಯಲ್ಲಿ ನಟಿ ಮತ್ತು ರಾಜಕಾರಣಿ ಜೆ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಅದು ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ಬಿಡುಗಡೆಗೆ ತಡೆ ಹಿಡಿಯಲಾಗಿದೆ.ಅಷ್ಟೇ ಅಲ್ಲದೆ ಈಗ ಅವರು ‘ತೇಜಸ್’ ಮತ್ತು ದಾಕಾಡ್’ ಚಿತ್ರಗಳ ಭಾಗವಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.