SBI ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ, ಇನ್‌ಬಾಕ್ಸ್‌ನಲ್ಲಿ ಬರುವ ಈ ಲಿಂಕ್‌ಗಳ ಬಗ್ಗೆ ಹುಷಾರಾಗಿರಿ

SBI Alert against Phishing: ಫಿಶಿಂಗ್ ಘಟನೆಗಳ ಬಗ್ಗೆ ಎಚ್ಚರದಿಂದಿರುವಂತೆ ಎಸ್‌ಬಿಐ ಗ್ರಾಹಕರಿಗೆ ಮತ್ತೊಮ್ಮೆ ಎಚ್ಚರಿಸಿದೆ.

Written by - Yashaswini V | Last Updated : Jul 16, 2021, 07:35 AM IST
  • ಗ್ರಾಹಕರು ಯಾವುದೇ ರೀತಿಯ ಆಮಿಷಕ್ಕೆ ಬಲಿಯಾಗದಿರುವಂತೆ ಎಸ್‌ಬಿಐ ಎಚ್ಚರಿಕೆ
  • ನಿಮ್ಮ ಇನ್‌ಬಾಕ್ಸ್‌ನಲ್ಲಿ ಯಾವುದೇ ಫಿಶಿಂಗ್ ಲಿಂಕ್ ಬಂದರೆ, ಅದರ ಬಲೆಗೆ ಬೀಳಬೇಡಿ ಎಂದು ಎಸ್‌ಬಿಐ ತಿಳಿಸಿದೆ
  • ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರ ಮೂಲಕ, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬಹುದು- ಎಸ್‌ಬಿಐ ಎಚ್ಚರಿಕೆ
SBI ಎಚ್ಚರಿಕೆಯನ್ನು ನಿರ್ಲಕ್ಷಿಸಬೇಡಿ, ಇನ್‌ಬಾಕ್ಸ್‌ನಲ್ಲಿ ಬರುವ ಈ ಲಿಂಕ್‌ಗಳ ಬಗ್ಗೆ ಹುಷಾರಾಗಿರಿ title=
SBI Alert against Phishing

ನವದೆಹಲಿ: SBI Alert against Phishing- ಬ್ಯಾಂಕಿಂಗ್ ವಂಚನೆಯನ್ನು ತಪ್ಪಿಸಲು ಎಚ್ಚರದಿಂದಿರುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ತನ್ನ ಗ್ರಾಹಕರಿಗೆ ಆಗಾಗ್ಗೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಇದೀಗ ವಂಚಕರು ಬ್ಯಾಂಕ್ ಗ್ರಾಹಕರನ್ನು ಹೊಸ ರೀತಿಯಲ್ಲಿ ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಈ ಬಗ್ಗೆ ಗ್ರಾಹಕರು ಹುಷಾರಾಗಿರುವಂತೆ ಸೂಚಿಸಿರುವ ಎಸ್‌ಬಿಐ, ಗ್ರಾಹಕರು ಯಾವುದೇ ರೀತಿಯ ಆಮಿಷಕ್ಕೆ ಬಲಿಯಾಗದಿರುವಂತೆ ಎಚ್ಚರಿಕೆ ನೀಡಿದೆ.

ಇನ್‌ಬಾಕ್ಸ್ ಸಂದೇಶಗಳ ಬಗ್ಗೆ ಇರಲಿ ಎಚ್ಚರ:
ನಿಮ್ಮ ಇನ್‌ಬಾಕ್ಸ್‌ನಲ್ಲಿ ಯಾವುದೇ ಫಿಶಿಂಗ್ ಲಿಂಕ್ ಬಂದರೆ, ಅದರ ಬಲೆಗೆ ಬೀಳಬೇಡಿ ಎಂದು ಎಸ್‌ಬಿಐ (SBI) ಟ್ವೀಟ್‌ನಲ್ಲಿ ತಿಳಿಸಿದೆ. ವಂಚಕರು ಗ್ರಾಹಕರ ಇನ್‌ಬಾಕ್ಸ್‌ಗೆ 'ನ್ಯಾಷನಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಉಚಿತ ಉಡುಗೊರೆ' ಎಂಬ ಸಂದೇಶದೊಂದಿಗೆ ಲಿಂಕ್‌ಗಳನ್ನು ಕಳುಹಿಸುತ್ತಾರೆ. ಅಂತಹ ಸಂದೇಶವು ಲಿಂಕ್‌ನೊಂದಿಗೆ ಬಂದಾಗಲೆಲ್ಲಾ ಅದನ್ನು ಕ್ಲಿಕ್ ಮಾಡಬೇಡಿ. ವಂಚಕರು ಉಚಿತ ಉಡುಗೊರೆಗಳ ಆಮಿಷವೊಡ್ಡುವ ಮೂಲಕ ಫಿಶಿಂಗ್ ಅನ್ನು ನಿರ್ವಹಿಸುತ್ತಾರೆ. ಅಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ. ಅಂತಹ ಫಿಶಿಂಗ್ ಲಿಂಕ್‌ಗಳನ್ನು ಕ್ಲಿಕ್ ಮಾಡುವುದರ ಮೂಲಕ, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕ್ಷಣಮಾತ್ರದಲ್ಲಿ ಕಳೆದುಕೊಳ್ಳಬಹುದು. ಜಾಗರೂಕರಾಗಿರಿ. ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ ಎಂದು ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚಿಸಿದೆ.

ಇದನ್ನೂ ಓದಿ- Alert! SBI ಖಾತೆದಾರರ ಮೇಲೆ ಚೀನಾ ಸೈಬರ್ ಕಳ್ಳರ ಕಣ್ಣು, ಖಾತೆ ಖಾಲಿಯಾದೀತು ಎಚ್ಚರ!

ಕೆವೈಸಿ ಹೆಸರಿನಲ್ಲಿ ವಂಚನೆ:
ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಕೆವೈಸಿ (KYC) ಹೆಸರಿನಲ್ಲಿ ವಂಚನೆ ಸಾಮಾನ್ಯವಾಗಿದೆ ಎಂದು ಎಸ್‌ಬಿಐ ಹೇಳಿದೆ. ವಂಚಕರು ಬ್ಯಾಂಕ್ ಅಥವಾ ಕಂಪನಿಯ ಪ್ರತಿನಿಧಿಗಳಂತೆ ಸಂದೇಶಗಳನ್ನು ಕಳುಹಿಸುತ್ತಾರೆ ಮತ್ತು ನಿಮ್ಮ ವೈಯಕ್ತಿಕ ವಿವರಗಳನ್ನು ಕೇಳುತ್ತಾರೆ. ಇದರಲ್ಲಿ, ಗ್ರಾಹಕರು ತಮ್ಮ ಕೆವೈಸಿಯನ್ನು ನವೀಕರಿಸಬೇಕು ಅಥವಾ ಇಲ್ಲದಿದ್ದರೆ ಖಾತೆ ಅಥವಾ ಕಾರ್ಡ್ ನಿರ್ಬಂಧಿಸಲಾಗುವುದು ಎಂಬ ಸಂದೇಶವಿರಲಿದೆ. ಹಾಗಾಗಿ ಕೆವೈಸಿ ಅಪ್‌ಡೇಟ್ ಲಿಂಕ್‌ಗಳ ಬಗ್ಗೆ ನೀವು ಎಚ್ಚರದಿಂದಿರಬೇಕು ಎಂದು ಎಸ್‌ಬಿಐ ಕೆಲವು ಪ್ರಮುಖ ಸುರಕ್ಷಿತ ಸಲಹೆಗಳನ್ನು ನೀಡಿದೆ.

ಇದನ್ನೂ ಓದಿ-  SBI Alert: ಫ್ರೀ ಗಿಫ್ಟ್ ಆಸೆಗೆ ಬಲಿಯಾಗದಿರಿ: ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ

ಕೆವೈಸಿ ನವೀಕರಣಕ್ಕಾಗಿ (KYC Update) ಬ್ಯಾಂಕ್ ಎಂದಿಗೂ ಗ್ರಾಹಕರಿಗೆ ಲಿಂಕ್ ಕಳುಹಿಸುವುದಿಲ್ಲ ಎಂದು ಎಸ್‌ಬಿಐ ಮೊದಲು ಸ್ಪಷ್ಟಪಡಿಸಿದೆ. ಅಂತಹ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ. ನಿಮ್ಮ ಯಾವುದೇ ವೈಯಕ್ತಿಕ ವಿವರಗಳು, ಮೊಬೈಲ್ ಸಂಖ್ಯೆಗಳು ಮತ್ತು ಡೇಟಾವನ್ನು ಹಂಚಿಕೊಳ್ಳಬೇಡಿ. ಇಂತಹ ಹಗರಣಗಳ ಬಗ್ಗೆ ನೀವು ಸರ್ಕಾರದ ಸೈಬರ್ ಕ್ರೈಮ್ (cybercrime.gov.in) ಸೆಲ್‌ಗೆ ಮಾಹಿತಿ ನೀಡಬಹುದು ಎಂದು ಬ್ಯಾಂಕ್ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News