Hafta Vasooli Case: Anil Deshmukh ವಿರುದ್ಧ ED ಗಂಭೀರ ಕ್ರಮ, ನಾಗ್ಪುರ್ ನಲ್ಲಿರುವ ಅವರ ಪೂರ್ವಜರ ಮನೆ ಮೇಲೆ ದಾಳಿ

Extortion Case: ಮಹಾರಾಷ್ಟ್ರದ (Maharashtra) ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ವಿರುದ್ಧ ED (Enforcement Directorate) ಗಂಭೀರ ಕ್ರಮ ಕೈಗೊಂಡಿದೆ. 

Written by - Nitin Tabib | Last Updated : Jul 18, 2021, 02:27 PM IST
  • ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ED ಗಂಭೀರ ಕ್ರಮ ಕೈಗೊಂಡಿದೆ.
  • ಜಾರಿ ನಿರ್ದೇಶನಾಲಯ ಭಾನುವಾರ ಅವರ ಪೂರ್ವಜರ ಮನೆಯ ಮೇಲೆ ದಾಳಿ ನಡೆಸಿದೆ.
  • 100 ಕೋಟಿ ರೂ.ಗಳ ಹಫ್ತಾ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈ ಕ್ರಮ ಕೈಗೊಂಡಿದೆ.
Hafta Vasooli Case: Anil Deshmukh ವಿರುದ್ಧ ED ಗಂಭೀರ ಕ್ರಮ, ನಾಗ್ಪುರ್ ನಲ್ಲಿರುವ ಅವರ ಪೂರ್ವಜರ ಮನೆ ಮೇಲೆ ದಾಳಿ title=
Extortion Case (File Photo)

Extortion Case: ಮಹಾರಾಷ್ಟ್ರದ (Maharashtra) ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh) ವಿರುದ್ಧ ED (Enforcement Directorate) ಗಂಭೀರ ಕ್ರಮ ಕೈಗೊಂಡಿದೆ. ಜಾರಿ ನಿರ್ದೇಶನಾಲಯ ಭಾನುವಾರ ಅವರ ಪೂರ್ವಜರ ಮನೆಯ ಮೇಲೆ ದಾಳಿ ನಡೆಸಿದೆ. 100 ಕೋಟಿ ರೂ.ಗಳ ಸುಲಿಗೆಗೆ ಸಂಬಂಧಿಸಿದಂತೆ ಇಡಿ ಈ ಕ್ರಮ ಕೈಗೊಂಡಿದ್ದು, ನಾಗ್ಪುರ ಜಿಲ್ಲೆಯ ವಾಧ್ವಿಹಿರಾ ಮತ್ತು ಕಟೋಲ್ ಪ್ರದೇಶಗಳಲ್ಲಿರುವ ಅವರ ಪೂರ್ವಜರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಇದಕ್ಕೂ ಎರಡು ದಿನ ಮುಂಚಿತವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಅನಿಲ್ ದೇಶ್ಮುಖ್ ಅವರಿಗೆ ಸೇರಿವೆ ಎನ್ನಲಾದ ಸುಮಾರು 4.20ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ಭಾನುವಾರ ಬೆಳಗ್ಗೆ ಸುಮಾರು 7 ಗಂಟೆಗೆ  ಆರು ED ಸಿಬ್ಬಂದಿಗಳು ಮತ್ತು CRPF ಸಿಬ್ಬಂದಿಯ ಒಂದು ತುಕ್ಕಡಿ ದೇಶಮುಖ್ ಅವರ ಎರಡೂ ಮನೆಗಳನ್ನು ತಲುಪಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಆರ್‌ಪಿಎಫ್ ಯೋಧರು ದೇಶಮುಖರ ಮನೆಯನ್ನು ಎಲ್ಲ ಕಡೆಯಿಂದಲೂ ಸುತ್ತುವರೆದಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಅಂದರೆ ಶುಕ್ರವಾರ ದೇಶಮುಖ್ ಅವರ ಹೆಸರಿನಲ್ಲಿರುವ ಮತ್ತು ಮುಂಬೈನ ವರ್ಲಿಯಲ್ಲಿರುವ ಒಂದು ಫ್ಲಾಟ್ ಹಾಗೂ ಅವರ ಇತರೆ ಸಂಪತ್ತಿಗಳನ್ನು ED ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು. ಇದಲ್ಲದೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಅನಿಲ್ ದೇಶ್ಮುಖ್ ಅವರ ಪತ್ನಿ ಆರತಿ ದೇಶ್ಮುಖ್ (Aarti Deshmukh) ಅವರಿಗೆ ಸಮನ್ಸ್ ಜಾರಿಗೊಳಿಸಿದ್ದರು.

ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್‌ಗಳಿಂದ ಪ್ರತಿ ತಿಂಗಳು 100 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಅನಿಲ್ ದೇಶ್ಮುಖ್ ಅವರು ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ (Sachin Wajhe) ಮತ್ತು ಇತರ ಕೆಲವು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ  ಎಂದು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ (Former Mumbai Police Commissioner Param Bir Singh) ಆರೋಪಿಸಿದ್ದರು.

ಇದನ್ನೂ ಓದಿ-NPS ಚಂದಾದಾರರು ಈಗ ಪೂರ್ಣ ಹಣ ಹಿಂಪಡೆಯಬಹುದು! ಇಲ್ಲಿದೆ ಹೊಸ ನಿಯಮಗಳು

ಪರಮ ಬೀರ್ ಸಿಂಗ್ ಅವರ ಈ ಆರೋಪಗಳ ಬಳಿಕ ಮುಂಬೈ ಹೈಕೋರ್ಟ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿತ್ತು. ಇದಾದ ಬಳಿಕ ಏಪ್ರಿಲ್‌ನಲ್ಲಿ ತನಿಖಾ ಸಂಸ್ಥೆ ದೇಶಮುಖ್ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಕಳೆದ ತಿಂಗಳು ಅನಿಲ್ ದೇಶ್ಮುಖ್ ಅವರ ಪಿಎ ಕುಂದನ್ ಶಿಂಧೆ (Kundan Shindhe) ಮತ್ತು ಪಿಎಸ್ ಸಂಜೀವ್ ಪಾಲಂಡೆ (Sanjeev Palande) ಅವರನ್ನು ಇಡಿ ಬಂಧಿಸಿತ್ತು. ಇದಲ್ಲದೆ, ಇಡಿ ದೇಶಮುಖ್ ಮತ್ತು ಅವರ ಕೆಲವು ಕುಟುಂಬ ಸದಸ್ಯರನ್ನು ಸಹ ಬುಲಾವ್ ಕಳುಹಿಸಿತ್ತು.

ಇದನ್ನೂ ಓದಿ-Aadhar Card ವಂಚಕರ ಬಗ್ಗೆ ಎಚ್ಚರಿಕೆ ನೀಡಿದೆ UIDAI : ಈ ಸೌಲಭ್ಯ ಬಳಸಲು ಜನರಿಗೆ ಸೂಚನೆ

ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಭಾನುವಾರ ED ದಾಳಿಯ ಸಂದರ್ಭದಲ್ಲಿ ದೇಶ್ಮುಖ್ ಹಾಗೂ ಅವರ ಕುಟುಂಬ ಸದಸ್ಯರು ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಕಳೆದ ತಿಂಗಳು ED ಅಧಿಕಾರಿಗಳು ಸಿವಿಲ್ ಲೈನ್ ನಲ್ಲಿರುವ ದೇಶ್ಮುಖ್ ಅವರ ನಿವಾಸದ ಮೇಲೂ ಕೂಡ ದಾಳಿ ನಡೆಸಿತ್ತು ಹಾಗೂ ಅವರ ಪತ್ನಿ ಆರತಿ, ಮಗ ಹೃಷಿಕೇಶ್ (Hrushikesh Deshmukh) ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಇದನ್ನೂ ಓದಿ-Telangana: ಶಸ್ತ್ರ ಚಿಕಿತ್ಸೆಗೆ ಕೂಡಿಟ್ಟಿದ್ದ 2 ಲಕ್ಷ ರೂ. ಹರಿದು ಹಾಕಿದ ಇಲಿಗಳು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News