Coronavirus Delta Variant: ಮಕ್ಕಳಲ್ಲಿ ಕರೋನಾ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ

ಕರೋನವೈರಸ್ನ ಡೆಲ್ಟಾ ರೂಪಾಂತರದಿಂದಾಗಿ (Coronavirus Delta Variant), ಮಕ್ಕಳಲ್ಲಿ ಸೋಂಕಿನ ಪ್ರಕರಣಗಳಲ್ಲಿ ದೊಡ್ಡ ಏರಿಕೆ ಕಂಡುಬಂದಿದೆ ಮತ್ತು ಕೋವಿಡ್ -19 ಸೋಂಕಿತ ಮಕ್ಕಳ ಸಂಖ್ಯೆ ನಿರಂತರವಾಗಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

Written by - Yashaswini V | Last Updated : Aug 10, 2021, 09:49 AM IST
  • ಕೋವಿಡ್ -19 ಸೋಂಕಿತ ಮಕ್ಕಳ ಸಂಖ್ಯೆ ನಿರಂತರವಾಗಿ ಹೆಚ್ಚಳ
  • ತಜ್ಞರ ಪ್ರಕಾರ, ಡೆಲ್ಟಾ ರೂಪಾಂತರವೇ ಇದಕ್ಕೆ ಕಾರಣ
  • ಕರೋನಾ ಸೋಂಕಿಗೆ ಒಳಗಾಗಿರುವ ಶೇ. 90 ರಷ್ಟು ಮಕ್ಕಳಲ್ಲಿ ಡೆಲ್ಟಾ ರೂಪಾಂತರ ಪತ್ತೆ
Coronavirus Delta Variant: ಮಕ್ಕಳಲ್ಲಿ ಕರೋನಾ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ  title=
Coronavirus Delta Variant in Kids

ವಾಷಿಂಗ್ಟನ್: ಅಮೆರಿಕದಲ್ಲಿ ಕೊರೊನಾವೈರಸ್ನ ಡೆಲ್ಟಾ ರೂಪಾಂತರದಿಂದಾಗಿ, ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಆತಂಕಕಾರಿ ಸಂಗತಿ ಎಂದರೆ ಇದು ಮಕ್ಕಳನ್ನು ವೇಗವಾಗಿ ಆವರಿಸುತ್ತಿದೆ. ಈ ಕಾರಣದಿಂದಾಗಿ, ಕೋವಿಡ್ -19 ಸೋಂಕಿನಿಂದಾಗಿ ಅಮೆರಿಕದ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ  ನಿರಂತರವಾಗಿ ಹೆಚ್ಚುತ್ತಿದೆ. ತಜ್ಞರ ಪ್ರಕಾರ, ಆಲ್ಫಾ ಸ್ಟ್ರೈನ್ ಗಿಂತ  ಡೆಲ್ಟಾ ರೂಪಾಂತರದಿಂದಾಗಿ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.

ಕಡಿಮೆ ವ್ಯಾಕ್ಸಿನೇಷನ್ ದರದಿಂದಾಗಿ ಸಮಸ್ಯೆ ಹೆಚ್ಚುತ್ತಿದೆ:
ಈ ಪ್ರವೃತ್ತಿಯು ವಿಶೇಷವಾಗಿ ಅಮೆರಿಕದ ಅನೇಕ ಭಾಗಗಳಲ್ಲಿ ಮುಂಚೂಣಿಗೆ ಬಂದಿದೆ. ಕಡಿಮೆ ವ್ಯಾಕ್ಸಿನೇಷನ್ (Corona Vaccination) ದರದಿಂದಾಗಿ ಈ ಸಮಸ್ಯೆ ಹೆಚ್ಚುತ್ತಿದೆ ಎಂದು ತಿಳಿದುಬಂದಿದೆ. ವಾಸ್ತವವಾಗಿ, ಕಡಿಮೆ ಲಸಿಕೆ ಹಾಕಿದ ಪ್ರದೇಶಗಳಲ್ಲಿ ಕೋವಿಡ್ -19 ಸೋಂಕಿತ ಮಕ್ಕಳ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತಿದೆ. "ಜುಲೈ ಆರಂಭದಿಂದಲೂ, ನಾವು ಪ್ರಕರಣಗಳ ಸಂಖ್ಯೆಯಲ್ಲಿ ಸ್ಥಿರವಾದ ಹೆಚ್ಚಳವನ್ನು ಕಂಡಿದ್ದೇವೆ ಮತ್ತು ಆಸ್ಪತ್ರೆಗೆ ದಾಖಲಾದ ಮಕ್ಕಳ ಸಂಖ್ಯೆಯಲ್ಲಿಯೂ ಹೆಚ್ಚಳವನ್ನೂ ನೋಡಿದ್ದೇವೆ" ಎಂದು ಟೆಕ್ಸಾಸ್ ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಜೇಮ್ಸ್ ವರ್ಸಲೋವಿಕ್ ಹೇಳಿದರು.

ಇದನ್ನೂ ಓದಿ- Corona Vaccine: ಲಸಿಕೆಯ ಕೊರತೆ ನೀಗಿಸಲು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಸಲಹೆ

ಡೆಲ್ಟಾ ರೂಪಾಂತರದಿಂದಾಗಿ ಪ್ರಕರಣಗಳು ಹೆಚ್ಚಾಗಿದೆ:
ಮಕ್ಕಳಲ್ಲಿ ಕರೋನಾವೈರಸ್ ಪ್ರಕರಣ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರುವುದನ್ನು ಇಲ್ಲಿ ಕರೋನಾ ನಾಲ್ಕನೇ ತರಂಗವೆಂದು (Corona Forth Wave) ಪರಿಗಣಿಸಲಾಗಿದೆ ಮತ್ತು ಇದಕ್ಕೆ ಕಾರಣ ಡೆಲ್ಟಾ ರೂಪಾಂತರ ಎಂದು ಹೇಳಲಾಗುತ್ತಿದೆ. ಡೆಲ್ಟಾ ರೂಪಾಂತರವು  (Delta Variant) COVID-19 ನ ಎಲ್ಲಾ ತಿಳಿದಿರುವ ತಳಿಗಳಲ್ಲಿ ಅತ್ಯಂತ ಸಾಂಕ್ರಾಮಿಕವಾಗಿದೆ. ಕರೋನಾ ಸೋಂಕಿಗೆ ಒಳಗಾಗಿರುವ ಶೇ. 90 ರಷ್ಟು ಮಕ್ಕಳಲ್ಲಿ ಡೆಲ್ಟಾ ರೂಪಾಂತರ ಪತ್ತೆಯಾಗಿದೆ ಎಂದು ಡಾ. ಜೇಮ್ಸ್ ವರ್ಸಲೋವಿಕ್ ತಿಳಿಸಿದರು.

12 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ಇಲ್ಲ:
ವಾಸ್ತವವೆಂದರೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇನ್ನೂ ಲಸಿಕೆ ಲಭ್ಯವಾಗಿಲ್ಲ. 12 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ, ಆದರೆ ಅನೇಕರಿಗೆ ಇನ್ನೂ ಲಸಿಕೆ ಹಾಕಲಾಗಿಲ್ಲ. ಈ ಪ್ರದೇಶದಲ್ಲಿ ಶೇ .50 ಕ್ಕಿಂತ ಕಡಿಮೆ ಯುವಕರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ.

ಇದನ್ನೂ ಓದಿ- Good News: ವಾಹನ ಸವಾರರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ... ಶೀಘ್ರದಲ್ಲಿಯೇ ಪೆಟ್ರೋಲ್ ಡಿಸೇಲ್ ಬೆಲೆ...!

12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ:
ಯುಎಸ್ನಲ್ಲಿ ಮಕ್ಕಳಿಗಾಗಿ ಫಿಜರ್ ಕರೋನಾ ಲಸಿಕೆಯನ್ನು (Pfizer Corona Vaccine for Children) ಅನುಮೋದಿಸಲಾಗಿದೆ. ವಾಸ್ತವವಾಗಿ 12 ರಿಂದ 17 ವರ್ಷ ವಯಸ್ಸಿನ ಮಕ್ಕಳಿಗೆ ಕರೋನಾ ಲಸಿಕೆ ನೀಡಲಾಗುತ್ತಿದೆ. ಮಾರ್ಚ್‌ನಲ್ಲಿ ಡೇಟಾವನ್ನು ಬಿಡುಗಡೆ ಮಾಡಿದ ಫೈಜರ್, 12 ರಿಂದ 15 ವರ್ಷ ವಯಸ್ಸಿನ 2,260 ಸ್ವಯಂಸೇವಕರಿಗೆ ಈ ಲಸಿಕೆಯನ್ನು ನೀಡಲಾಗಿದೆ. ಈ ಲಸಿಕೆ ಪಡೆದ ಯಾವುದೇ ಮಗುವಿಗೆ ಕರೋನಾ ಸೋಂಕು ತಗುಲಿರುವ ಬಗ್ಗೆ ವರದಿಯಾಗಿಲ್ಲ ಎಂದು ಮಾಹಿತಿ ನೀಡಿತ್ತು. ಇದರೊಂದಿಗೆ ತಮ್ಮ ಲಸಿಕೆ ಮಕ್ಕಳ ಮೇಲೆ 100% ಪರಿಣಾಮಕಾರಿ ಎಂದು ಆವರು ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News