ನವದೆಹಲಿ : Gold, Silver Rate Update, 23 August 2021: ಶುಕ್ರವಾರ ಆರಂಭದಲ್ಲಿ ಚಿನ್ನದ ಧಾರಣೆ ಚೆನ್ನಾಗಿಯೇ ಇತ್ತು. ಆದರೆ ಇಂಟ್ರಾ ಡೇ ನಲ್ಲಿ ಫ್ಯೂಚರ್ ಟ್ರೇಡಿಂಗ್ ಜಾಸ್ತಿ ಆದ ಹಿನ್ನೆಲೆಯಲ್ಲಿ ಪ್ರಾಫಿಟ್ ಬುಕಿಂಗ್ ಹೆಚ್ಚಾಯಿತು. ಚಿನ್ನದ ಬೆಲೆ ಪ್ರತಿ 10 ಗ್ರಾಂ 47065 ರೂ. ಗೆ ಕುಸಿದಿದೆ. ಇಂದು ಕೂಡಾ ಫ್ಯೂಚರ್ ಟ್ರೇಡಿಂಗ್ ಪ್ರತಿ 10 ಗ್ರಾಂಗೆ 47200 ರೂ. ಆಸುಪಾಸಿನಲ್ಲಿಯೇ ಟ್ರೇಡ್ ಆಗುತ್ತಿತ್ತು. ಕಳೆದ ವಾರದಿಂದ ಇಲ್ಲಿಯವರೆಗೆ ನೋಡಿದರೆ, ಚಿನ್ನದ ಫ್ಯೂಚರ್ ಟ್ರೇಡ್ ಕೇವಲ 25 ರೂ.ಯಷ್ಟು ಮಾತ್ರ ಹೆಚ್ಚಳವಾಗಿದೆ.
ಕಳೆದ ವಾರದ ಚಿನ್ನದ ಟ್ರೇಡಿಂಗ್ (ಆಗಸ್ಟ್ 16-20)
ಡೇ ಗೋಲ್ಡ್ (MCX ಅಕ್ಟೋಬರ್ ಫ್ಯೂಚರ್ಸ್)
ಸೋಮವಾರ 47225/10 ಗ್ರಾಂ
ಮಂಗಳವಾರ 47280/10 ಗ್ರಾಂ
ಬುಧವಾರ 47132/10 ಗ್ರಾಂ
ಗುರುವಾರ 47169/10 ಗ್ರಾಂ
ಶುಕ್ರವಾರ 47158/10 ಗ್ರಾಂ
ಇದನ್ನೂ ಓದಿ : RBI New Guidelines On Locker: ಬ್ಯಾಂಕ್ ನಲ್ಲಿ ನೀವೂ ಲಾಕರ್ ಹೊಂದಿದ್ದೀರಾ? RBI ನ ಈ ಹೊಸ ನಿಯಮ ನೀವೂ ತಿಳಿದುಕೊಳ್ಳಿ
9,೦೦೦ ದವರೆಗೆ ಅಗ್ಗವಾಗಲಿರುವ ಚಿನ್ನ :
ಕಳೆದ ವರ್ಷ, ಕರೋನಾ (Coronavirus) ಬಿಕ್ಕಟ್ಟಿನಿಂದಾಗಿ, ಜನರು ಚಿನ್ನದಲ್ಲಿ ಹೆಚ್ಚು ಹೂಡಿಕೆ ಮಾಡಿದ್ದರು. ಆಗಸ್ಟ್ 2020 ರಲ್ಲಿ, MCX ನಲ್ಲಿ 10 ಗ್ರಾಂ ಚಿನ್ನದ ಬೆಲೆ ರೂ. 56191 ರ ಗರಿಷ್ಠ ಮಟ್ಟವನ್ನು ತಲುಪಿತು. ಈಗ ಚಿನ್ನದ (Gold Rate) ಅಕ್ಟೋಬರ್ ಫ್ಯೂಚರ್ಸ್ MCX ನಲ್ಲಿ 10 ಗ್ರಾಂಗೆ 47,200 ರೂ.ಗಳ ಮಟ್ಟದಲ್ಲಿದೆ. , ಅಂದರೆ, ಇದು ಇನ್ನೂ ಸುಮಾರು 9000 ರೂ.ಗಳಷ್ಟು ಅಗ್ಗವಾಗುತ್ತಿದೆ.
MCX ನಲ್ಲಿ ಬೆಳ್ಳಿ :
ಬೆಳ್ಳಿಯ (Silver rate) ಸೆಪ್ಟೆಂಬರ್ ಟ್ರೇಡಿಂಗ್ ಬಗ್ಗೆ ಹೇಳುವುದಾದರೆ ಪ್ರತಿ ಕೆಜಿಗೆ 420 ರೂಪಾಯಿಗಳ ಕುಸಿತ ದಾಖಲಾಗಿದೆ. ಇಂಟ್ರಾಡೇಯಲ್ಲಿ ಬೆಳ್ಳಿ ದರ 62,320 ರೂ.ಗೆ ಏರಿತ್ತು, ನಂತರ ಅದು ಇದ್ದಕ್ಕಿದ್ದಂತೆ ಬೆಲೆಯಲ್ಲಿ ಇಳಿಮುಖ ಕಂಡು ಬಂದಿದೆ. ಅಂದರೆ ಇದು, 61227 ರೂ.ಗೆ ಕುಸಿದಿದೆ. ಅಂತಿಮವಾಗಿ ಅದು ಪ್ರತಿ ಕೆಜಿಗೆ 61721 ರೂ. ತಲುಪಿದೆ.
ಕಳೆದ ವಾರ ಬೆಳ್ಳಿಯ ಟ್ರೇಡಿಂಗ್ :
ದಿನ ಬೆಳ್ಳಿ (MCX ಸೆಪ್ಟೆಂಬರ್ - ಫ್ಯೂಚರ್ )
ಸೋಮವಾರ 63457/ಕೆಜಿ
ಮಂಗಳವಾರ 63226/ಕೆಜಿ
ಬುಧವಾರ 62483/ಕೆಜಿ
ಗುರುವಾರ 62133/ಕೆಜಿ
ಶುಕ್ರವಾರ 61721/ಕೆಜಿ
ಇದನ್ನೂ ಓದಿ : Aadhaar Card New Rule: ಆಧಾರ್ ಪಡೆಯುವ ನಿಯಮ ಬದಲಾವಣೆ, ನಿಮ್ಮ ಮೇಲೆ ನೇರ ಪರಿಣಾಮ
18,260 ರೂ. ಅಗ್ಗವಾದ ಬೆಳ್ಳಿ :
ಇಲ್ಲಿಯವರೆಗೆ ಬೆಳ್ಳಿಯ ಗರಿಷ್ಠ ಬೆಲೆ ಎಂದರೆ ಪ್ರತಿ ಕೆಜಿಗೆ 79,980 ರೂ. ಈ ಹಿನ್ನೆಲೆಯಲ್ಲಿ ಬೆಳ್ಳಿ ಕೂಡ ಸುಮಾರು 18260 ರೂಪಾಯಿಗಳಷ್ಟು ಅಗ್ಗವಾಗಿದೆ. ಇಂದು, ಬೆಳ್ಳಿಯ ಜುಲೈ ಫ್ಯೂಚರ್ಸ್ ಪ್ರತಿ ಕೆಜಿಗೆ 61721 ರೂ.ಯಷ್ಟಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ