ನವದೆಹಲಿ : ರೈತನಿಗೂ ಹಸುಗಳಿಗೂ ಮಧ್ಯೆ ಅವಿನಾಭಾವ ಸಂಬಂಧವಿದೆ. ಹಸುಗಳೆಂದರೆ ರೈತರಿಗೆ ಎಲ್ಲಿಲ್ಲದ ಪ್ರೀತಿ. ಏನೇ ಆದರೂ ತಮ್ಮ ಹಸುಗಳಿಗೆ (Cow) ಮಾತ್ರ ಯಾವ ತೊಂದರೆಯೂ ಆಗದಂತೆ ಎಚ್ಚರಿಕೆ ವಹಿಸುತ್ತಾರೆ. ಸ್ವಿಟ್ಜರ್ಲೆಂಡ್ನಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ಉದಾಹರಣೆ. ಇಲ್ಲಿ ಹಸುಗಳನ್ನು ಏರ್ ಲಿಫ್ಟ್ (Airlift) ಮೂಲಕ ಬೆಟ್ಟದಿಂದ ಕೆಳಗೆ ತರಲಾಗಿದೆ. ಅದರ ಫೋಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ರೈತರೇ ಹಸುಗಳನ್ನು ಏರ್ ಲಿಫ್ಟ್ ಮಾಡಿಸಿದ್ದಾರೆ. ಇದರ ಹಿಂದಿನ ಕಾರಣ ಭಾವನಾತ್ಮಕವಾಗಿದೆ.
ಏನಿದು ಪ್ರಕರಣ :
ಸ್ಕೈ ನ್ಯೂಸ್ ವರದಿಯ ಪ್ರಕಾರ, ಈ ಹಸುಗಳು ಬೇಸಿಗೆಯಲ್ಲಿ (Summer) ಮೇಯಲು ಬೆಟ್ಟಗಳತ್ತ ಹೋಗುತ್ತವೆ, ನಂತರ ಅವುಗಳನ್ನು ಚಳಿಗಾಲದಲ್ಲಿ (Winter) ಮತ್ತೆ ಬಯಲಿಗೆ ತರಲಾಗುತ್ತದೆ. ಹೀಗೆ ಮೇಯುವ ಕಾರಣಕ್ಕೆ ಬೆಟ್ಟಕ್ಕೆ ತೆರಳಿದ್ದ ಹಸುಗಳು ಅಲ್ಲಿ ಗಾಯಗೊಂಡಿದ್ದವು. ಗಾಯಗೊಂಡು ಅನಾರೋಗ್ಯಕ್ಕೆ ಒಳಗಾಗಿದ್ದವು ಈ ಹಸುಗಳು. ಹಸುಗಳು ತೆರಳಿದ್ದ ಬೆಟ್ಟದ ಮಾರ್ಗ ಕೂಡಾ ಹೇಗಿತ್ತೆಂದರೆ, ಅಲ್ಲಿಗೆ ವಾಹನದ ಮೂಲಕ ತೆರಳುವುದು ಕೂಡಾ ಸಾಧ್ಯವಿಲ್ಲ. ಹಾಗಾಗಿ ತಮ್ಮ ಹಸುಗಳನ್ನು ಏರ್ ಲಿಫ್ಟ್ (Airlift) ಮಾಡಲು ರೈತರು ನಿರ್ಧರಿಸಿದರು. ಏರ್ ಲಿಫ್ಟ್ ಮಾಡಿದರೆ ಹಸುಗಳು ಮತ್ತೆ ನಡೆಯುವ ಕಷ್ಟ ಅನುಭವಿಸಬೇಕಾಗಿಲ್ಲ ಎನ್ನುವುದು ರೈತರ ಯೋಚನೆ.
ಇದನ್ನೂ ಓದಿ : Afghanistan Crisis: ಪಂಜ್ಶೀರ್ ವಶಕ್ಕೆ ಯತ್ನಿಸಿದ್ದ 600ಕ್ಕೂ ಹೆಚ್ಚು ತಾಲಿಬಾನ್ ಉಗ್ರರ ಹತ್ಯೆ!
ಬಹಳ ಎಚ್ಚರಿಕೆಯಿಂದ ನಡೆಯಿತು ಏರ್ ಲಿಫ್ಟಿಂಗ್:
ವಿಶೇಷವೆಂದರೆ ಏರ್ ಲಿಫ್ಟಿಂಗ್ ಸಮಯದಲ್ಲಿ, ಹಸುಗಳು ಗಾಬರಿಯಾಗಲಿಲ್ಲ. ಇದಕ್ಕಾಗಿ ಅವುಗಳನ್ನು ಸರಿಯಾಗಿ ಕೇಬಲ್ (cable) ಮತ್ತು ಹಗ್ಗಗಳಿಂದ ಕಟ್ಟಲಾಗಿತ್ತು. ಕೆಲವು ಹಸುಗಳು ಗಾಯಗೊಂಡಿವೆ, ಗಾಯಗೊಂಡಿರುವ ಹಸುಗಳನ್ನು ಮತ್ತೆ ಕಾಲ್ನಡಿಗೆಯಲ್ಲಿ ತರಲು ನಾವು ಬಯಸುವುದಿಲ್ಲ ಎಂದು ರೈತ ಜೋನಾಸ್ ಅರ್ನಾಲ್ಡ್ ಹೇಳಿದ್ದಾರೆ . ಹಾಗಂತ ಉಳಿದ ವಾಹನಗಳು ಹುಲ್ಲುಗಾವಲನ್ನು ತಲುಪಲು ಸಾಧ್ಯವಾಗಲಿಲ್ಲ, ಆದ್ದರಿಂದ ಹೆಲಿಕಾಪ್ಟರ್ ಮೂಲಕ ಹಸುಗಳನ್ನು ಬೆಟ್ಟದಿಂದ ಕೆಳಗಿಳಿಸಲು ನಿರ್ಧರಿಸಲಾಯಿತು ಎಂದವರು ಹೇಳಿದ್ದಾರೆ.
ಈ ಪ್ರಕ್ರಿಯೆಯು ಕೆಲವೇ ಕ್ಷಣಗಳಲ್ಲಿ ಪೂರ್ಣಗೊಂದವು. ಆರೋಗ್ಯಕರ ಹಸುಗಳು (healthy cow) ನಡೆದುಕೊಂಡೇ ಪರ್ವತದಿಂದ ಕೆಳಗಿಳಿದವು. ಹಿಂಡಿನಲ್ಲಿ ಸುಮಾರು 1 ಸಾವಿರ ಹಸುಗಳಿದ್ದು, ಅದರಲ್ಲಿ ಸುಮಾರು 10 ಹಸುಗಳನ್ನು ಏರ್ ಲಿಫ್ಟ್ ಮಾಡಿ ಕೆಳಗೆ ತರಲಾಯಿತು. ಅನಗತ್ಯವಾಗಿ ಪ್ರಾಣಿಗಳಿಗೆ ಕಿರುಕುಳ ನೀಡುವ ಅನೇಕ ಪ್ರಕರಣಗಳು ಮುಂಚೂಣಿಗೆ ಬರುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ಪ್ರಾಣಿಗಳ (Animals) ಬಗ್ಗೆ ತುಂಬಾ ಪ್ರೀತಿ ಮತ್ತು ಕಾಳಜಿ ಹೊಂದಿರುವ ಈ ಪ್ರಕರಣಕ್ಕೆ ಯಾವುದೇ ಸಾಟಿಯಿಲ್ಲ.
ಇದನ್ನೂ ಓದಿ : Afghanistan Crisis: ಅಫ್ಘಾನಿಸ್ತಾನದಲ್ಲಿ ಅಧಿಕಾರ ಸಂಘರ್ಷ, ಗುಂಡು ಹಾರಿಸಿದ ಹಕ್ಕಾನಿ, ಗಾಯಗೊಂಡ ಬರಾದರ್! : ವರದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ