Cabinet Approves PM MITRA: ಮುಂಬರುವ ಐದು ವರ್ಷಗಳಲ್ಲಿ ಒಟ್ಟು ರೂ 4,445 ಕೋಟಿ ವೆಚ್ಚದಲ್ಲಿ 7 ಮೆಗಾ ಇಂಟಿಗ್ರೇಟೆಡ್ ಟೆಕ್ಸ್ಟೈಲ್ ರೀಜನ್ ಮತ್ತು ಅಪಾರೆಲ್ (PM MITRA) ಪಾರ್ಕ್ಗಳನ್ನು ಸ್ಥಾಪಿಸಲು ಕೇಂದ್ರ ಕ್ಯಾಬಿನೆಟ್ ಬುಧವಾರ ಅನುಮೋದನೆ ನೀಡಿದೆ.
ಕೇಂದ್ರ ಸಚಿವ ಸಂಪುಟ ಸಭೆಯ (Cabinet Meeting) ಬಳಿಕ ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಜವಳಿ ಸಚಿವ (Union Textile Minister) ಪಿಯುಶ್ ಗೋಯೆಲ್ (Piyush Goyal), ಸರ್ಕಾರದ ಈ ಹೆಜ್ಜೆಯಿಂದ 7 ಲಕ್ಷ ಪ್ರತ್ಯಕ್ಷ ಹಾಗೂ 14 ಲಕ್ಷ ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ. ಈ ಗಾಗಲೇ 10 ರಾಜ್ಯಗಳು ಈ ಯೋಜನೆಯಲ್ಲಿ ತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಿವೆ ಎಂದು ಗೋಯಲ್ ಹೇಳಿದ್ದಾರೆ.
Union Cabinet approves setting up of 7 PM Mega Integrated Textile Region & Apparel (PM MITRA) parks with a total outlay of Rs 4,445 crores over 5 years. Move inspired by 5F vision of PM Modi - Farm to Fibre to Factory to Fashion to Foreign: Union Commerce Minister Piyush Goyal pic.twitter.com/AkXHUP5xxO
— ANI (@ANI) October 6, 2021
PM MITRA ಅನ್ನು PPP Mode ನಲ್ಲಿ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಮಾಲೀಕತ್ವದ ಒಂದು ವಿಶೇಷ ಯೋಜನೆಯ ರೂಪದಲ್ಲಿ ಅಭವೃದ್ಧಿಗೊಳಿಸಲಾಗುವುದು ಎಂದು ಗೋಯಲ್ ಹೇಳಿದ್ದಾರೆ.
ಜವಳಿ ಉದ್ಯಮವು (Textile Industry) ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು, ದೊಡ್ಡ ಹೂಡಿಕೆಗಳನ್ನು ಆಕರ್ಷಿಸಲು, ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಮತ್ತು ಜವಳಿ ರಫ್ತು ಹೆಚ್ಚಿಸಲು ಅನುವು ಮಾಡಿಕೊಡಲು PM-MITRA ಯೋಜನೆಯನ್ನು ಮೊಟ್ಟಮೊದಲ ಬಾರಿಗೆ ಕೇಂದ್ರ ಬಜೆಟ್ 2021 ರಲ್ಲಿ ಘೋಷಿಸಲಾಗಿದೆ. ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-Nobel Prize 2021 Chemistry: 2021ನೇ ಸಾಲಿನ ರಸಾಯನ ಶಾಸ್ತ್ರವಿಭಾಗದ ನೊಬೆಲ್ ಪ್ರಶಸ್ತಿ ಪ್ರಕಟ
ವರ್ಷ 2025ರವರೆಗೆ 200 ಬಿಲಿಯನ್ ಡಾಲರ್ ವ್ಯಾಪಾರದ ನಿರೀಕ್ಷೆ
ಕೇಂದ್ರ ಸರ್ಕಾರದ ಪ್ರಕಾರ, ದೇಶದಲ್ಲಿ ಜವಳಿ ಉದ್ಯಮದ ವಹಿವಾಟು $ 45 ಬಿಲಿಯನ್ ಆಗಿದ್ದು, 2025 ರ ವೇಳೆಗೆ ಇದು $ 200 ಬಿಲಿಯನ್ ತಲುಪುವ್ ನಿರೀಕ್ಷೆಯಿದೆ. 10 ನೇ ಪಂಚವಾರ್ಷಿಕ ಯೋಜನೆಯಡಿ 2005 ರಲ್ಲಿ ಕೇಂದ್ರ ಸರ್ಕಾರವು ಇಂಟಿಗ್ರೇಟೆಡ್ ಟೆಕ್ಸ್ಟೈಲ್ ಪಾರ್ಕ್ ಸ್ಕೀಮ್ (ITPS) ಅನ್ನು ಆರಂಭಿಸಿತ್ತು ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-Big Verdict:ಅನುಕಂಪದ ಆಧಾರದ ಮೇಲಿನ ನೇಮಕಾತಿಯ ಕುರಿತು ಸುಪ್ರೀಂ ಮಹತ್ವದ ತೀರ್ಪು
ಏನಿದು ಜವಳಿ ಪಾರ್ಕ್? (Textile Park)
ಭಾರತ ಜವಳಿ ಉದ್ಯಮದಲ್ಲಿ ವಿಶ್ವದ ಆರನೇ ಅತಿದೊಡ್ಡ ರಫ್ತುದಾರ ದೇಶವಾಗಿದೆ. ಟೆಕ್ಸ್ಟೈಲ್ ಪಾರ್ಕ್ ಮೂಲಕ ಈ ವಲಯದಲ್ಲಿ ರಫ್ತು ಶ್ರೇಣಿಯನ್ನು (Export Ranking) ಸುಧಾರಿಸುವ ಗುರಿಯನ್ನು ಹೊಂದಲಾಗಿದೆ ಜವಳಿ ಸಚಿವಾಲಯದ ಸಮಗ್ರ ಜವಳಿ ಪಾರ್ಕ್ ಯೋಜನೆಯಡಿ, ದೇಶದಲ್ಲಿ 59 ಜವಳಿ ಪಾರ್ಕ್ಗಳಿಗೆ ಅನುಮೋದನೆ ನೀಡಲಾಗಿದೆ.
ಇದನ್ನೂ ಓದಿ-ಹಳೆಯ ಪಠ್ಯಕ್ರಮದಂತೆಯೇ ನಡೆಯಲಿದೆ ನೀಟ್ ಪಿಜಿ ಪರೀಕ್ಷೆ: ಸುಪ್ರೀಂಗೆ ಕೇಂದ್ರದ ಸ್ಪಷ್ಟನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.