PM Awas Yojana:ಪ್ರಧಾನಿ ಆವಾಸ್ ಯೋಜನೆಯ ಅಡಿ ಸಿಗಲಿದೆಯಾ ಮೂರು ಪಟ್ಟು ಹೆಚ್ಚು ಹಣ? ಸರ್ಕಾರದ ಯೋಜನೆ ಏನು?

PM Awas Yojana Updates: PM ಆವಾಸ್ ಮೊತ್ತವನ್ನು ನಾಲ್ಕು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಯೋಜನೆಯಡಿ ಕೇವಲ ಒಂದು ಲಕ್ಷದ 20 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು. 

Written by - Nitin Tabib | Last Updated : Oct 23, 2021, 08:18 PM IST
  • PM Awas Yojana ಲಾಭಾರ್ಥಿಗಲಿಗೊಂದು ಸಂತಸದ ಸುದ್ದಿ.
  • ಈ ಯೋಜನೆ ಅಡಿ ಸಿಗುವ ಧನ ಸಹಾಯದಲ್ಲಿ ಹೆಚ್ಚಳ ಸಾಧ್ಯತೆ.
  • ಹೆಚ್ಚಾಗುತ್ತಿರುವ ಹಣದುಬ್ಬರ ಪರಿಗಣಿಸಿ ಪ್ರಸ್ತಾವನೆ ಸಲ್ಲಿಸಿದ ಸಮಿತಿ
PM Awas Yojana:ಪ್ರಧಾನಿ ಆವಾಸ್ ಯೋಜನೆಯ ಅಡಿ ಸಿಗಲಿದೆಯಾ ಮೂರು ಪಟ್ಟು ಹೆಚ್ಚು ಹಣ? ಸರ್ಕಾರದ ಯೋಜನೆ ಏನು? title=
PM Awas Yojana Updates (File Photo)

ನವದೆಹಲಿ: PM Awas Yojana Latest News - ನೀವೂ ಕೂಡ ಒಂದು ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PMAY) ಫಲಾನುಭವಿಗಳಾಗಿದ್ದರೆ, ನಿಮಗಾಗಿ ಇಲ್ಲಿದೆ ಒಂದು ಮಹತ್ವದ ಸುದ್ದಿ. ಇದೀಗ ಈ ವಿಶೇಷ ಯೋಜನೆಯಡಿ, ಮನೆ ಕಟ್ಟಲು ನಾಲ್ಕು ಲಕ್ಷ ರೂಪಾಯಿಗಳನ್ನು (PM Awas Yojana Amount) ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಅಂದರೆ, ಮೊದಲಿನಗಿಂತ ಮೂರು ಪಟ್ಟು ಹೆಚ್ಚು ಹಣ ಎಂದರ್ಥ. ಈ ಕುರಿತು ಹೇಳಿಕೆ ನೀಡಿರುವ ಸಮೀತಿ ಮನೆ ಕಟ್ಟಲು ಬೇಕಾಗುವ ಹೂಡಿಕೆ ಕೂಡ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಇದೀಗ ಮೊತ್ತವನ್ನು ಹೆಚ್ಚಿಸಬೇಕು ಎಂದು ಹೇಳಲಾಗಿದೆ. ಈ ಪ್ರಸ್ತಾವನೆಗೆ ಒಂದೊಮ್ಮೆ  ಒಪ್ಪಿಗೆ ದೊರೆತರೆ, ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಜನರು ಮೊದಲಿಗಿಂತ 3 ಪಟ್ಟು ಹೆಚ್ಚು ಹಣವನ್ನು ಪಡೆಯಲಿದ್ದಾರೆ. ಹಾಗಾದರೆ ಬನ್ನಿ ಈ ಪ್ರಸ್ತಾವನೆಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.

ಇದನ್ನೂ ಓದಿ-RBI Guidelines: ತಪ್ಪಾದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿದೆಯೇ? ಚಿಂತೆಬಿಡಿ, ಈ ರೀತಿ ಮರಳಿ ಪಡೆಯಿರಿ

ಹೆಚ್ಚಾಗಲಿದೆ PM ಆವಾಸ್ ಯೋಜನೆಯ ಅಡಿ ನೀಡುವ ಧನಸಹಾಯ
ಜಾರ್ಖಂಡ್ ವಿಧಾನಸಭೆಯ ಅಂದಾಜು ಸಮಿತಿಯು ರಾಜ್ಯದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ನಾಲ್ಕು ಲಕ್ಷ ರೂಪಾಯಿಗಳ ಧನಸಹಾಯಕ್ಕೆ  ಶಿಫಾರಸು ಮಾಡಿದೆ. ಮುಂಗಾರು ಅಧಿವೇಶನದ ಕೊನೆಯ ದಿನದಂದು ಸಮಿತಿಯ ಅಧ್ಯಕ್ಷ ದೀಪಕ್ ಬಿರುವಾ ಅವರು ಅಂದಾಜು ಸಮಿತಿಯ ವರದಿಯನ್ನು ಸದನದ ಮೇಜಿನ ಮೇಲೆ ಮಂಡಿಸಿದ್ದಾರೆ. ಪ್ರತಿ ವಸ್ತುವಿನ ಬೆಲೆ ಹೆಚ್ಚಾಗಿದೆ ಎಂದು ಜೆಎಂಎಂ ಶಾಸಕ ದೀಪಕ್ ಬಿರುವಾ ಹೇಳುತ್ತಾರೆ. ವಾಸ್ತವವಾಗಿ, ಮರಳು, ಸಿಮೆಂಟ್, ರಾಡ್‌ಗಳು, ಇಟ್ಟಿಗೆಗಳು, ನಿಲುಭಾರದ ಹಣದುಬ್ಬರದಿಂದಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ವೆಚ್ಚ ಹೆಚ್ಚಾಗಿದೆ.

ಇದನ್ನೂ ಓದಿ-How To Block Accounts: ಮೊಬೈಲ್ ಕಳೆದುಹೋದರೆ PhonePe, Google Pay ಮತ್ತು Paytm ಖಾತೆಗಳನ್ನು ಹೇಗೆ ನಿರ್ಬಂಧಿಸುವುದು?

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಆಗ್ರಹ
ಬಿಪಿಎಲ್ ಕುಟುಂಬಗಳಿಗೆ ತಮ್ಮ ಕಡೆಯಿಂದ 50 ಸಾವಿರದಿಂದ ಒಂದು ಲಕ್ಷ ರೂಪಾಯಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೀರುವಾ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಕಾರದೊಂದಿಗೆ ನಿರ್ಮಿಸಲಾಗುತ್ತಿರುವ ಮನೆಗಳ ವೆಚ್ಚವನ್ನು ರೂ .1.20 ಲಕ್ಷದಿಂದ ರೂ. 4 ಲಕ್ಷಕ್ಕೆ ಹೆಚ್ಚಿಸಬೇಕು, ಇದರಿಂದ ಮನೆಗಳನ್ನು ಪ್ರಾಯೋಗಿಕವಾಗಿ ನಿರ್ಮಿಸಲು ಮತ್ತು ಜನರು ಮುಂದೆ ಬರಲು ಸಾಧ್ಯವಾಗಲಿದೆ. ಇದೇ ವೇಳೆ  ರಾಜ್ಯದ ಪಾಲನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಪರಿಗಣಿಸಬಹುದು ಎಂದು ಅವರು ಹೇಳಿದ್ದಾರೆ. ಅಂದಾಜು ಸಮಿತಿಯು ಶಾಸಕರಾದ ಬೈದ್ಯನಾಥ ರಾಮ್, ನಾರಾಯಣ್ ದಾಸ್, ಲಂಬೋದರ್ ಮಹತೋ ಮತ್ತು ಅಂಬಾ ಪ್ರಸಾದ್ ಅವರನ್ನು ಒಳಗೊಂಡಿದೆ.

ಇದನ್ನೂ ಓದಿ-ICICI Bank Q2 FY22 Results: ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡ 29.6 ರಷ್ಟು ಏರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News