ನವದೆಹಲಿ: Ghee In Milk Health Benefits - ತುಪ್ಪವು ಆಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ಇದರ ಲಾಭ ದುಪ್ಪಟ್ಟಾಗುತ್ತದೆ. ಹಾಲು ಮತ್ತು ತುಪ್ಪವನ್ನು (Ghee In Milk) ಸೇವಿಸುವ ಮೂಲಕ ನೀವು ಅನೇಕ ಆರೋಗ್ಯಕರ (Healthy Food) ಪ್ರಯೋಜನಗಳನ್ನು ಪಡೆಯಬಹುದು. ಈ ಕುರಿತು ತಿಳಿಯೋಣ ಬನ್ನಿ
ಜೀರ್ಣಕ್ರಿಯೆ ಹೆಚ್ಚಿಸಲು ಸಹಕಾರಿ
ಹಾಲಿಗೆ ತುಪ್ಪ (Ghee And Milk) ಬೆರೆಸಿ ಕುಡಿಯುವುದರಿಂದ ಜೀರ್ಣ ಶಕ್ತಿ ಬಲಗೊಳ್ಳುತ್ತದೆ. ಅಲ್ಲದೆ ಇದು ಜೀರ್ಣಕ್ರಿಯೆಯ ಕಾರ್ಯವನ್ನು ಸುಧಾರಿಸುತ್ತದೆ. ಮಲಬದ್ಧತೆ ಅಥವಾ ದುರ್ಬಲ ಜೀರ್ಣಾಂಗ ವ್ಯವಸ್ಥೆಯ ಸಂದರ್ಭದಲ್ಲಿ, ನೀವು ಪ್ರತಿದಿನ ತುಪ್ಪ ಬೆರೆಸಿದ ಹಾಲನ್ನು ಕುಡಿಯಬಹುದು.
ಸ್ಟೆಮಿನಾ ಹೆಚ್ಚಾಗಲು ನಿತ್ಯ ತುಪ್ಪ ಬೆರೆಸಿದ ಹಾಲನ್ನು ಸೇವಿಸಿ
ನೀವು ಆಗಾಗ್ಗೆ ದಣಿದಿದ್ದರೆ, ನೀವು ತುಪ್ಪ ಬೆರೆಸಿದ ಹಾಲನ್ನು (Milk Benefits) ಕುಡಿಯಬಹುದು, ಇದು ನಿಮ್ಮ ಸ್ಟೆಮಿನಾ ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಲಿನೊಂದಿಗೆ ತುಪ್ಪವನ್ನು ಸೇವಿಸುವುದರಿಂದ, ದೇಹದಲ್ಲಿ ಶಕ್ತಿಯ ಸಂಚಾರವಾಗುತ್ತದೆ ಮತ್ತು ನೀವು ಹೆಚ್ಚು ಶಕ್ತಿಯುತರಾಗುತ್ತೀರಿ.
ದೇಹದ ಮೆಟಾಬಾಲಿಸಂ ಹೆಚ್ಚಿಸುತ್ತದೆ
ದೇಹದಿಂದ ವಿಷಕಾರಿ ಪದಾರ್ಥಗಳನ್ನೂ ಇದು ಹೊರಹಾಕುವುದಲ್ಲದೆ, ಹಾಲು ಮತ್ತು ತುಪ್ಪದ ಸಂಯೋಜನೆಯು ಚಯಾಪಚಯವನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ನಿದ್ರಾಹೀನತೆಯ ಸಮಸ್ಯೆಗೆ ಮುಕ್ತಿ ಹಾಡುತ್ತದೆ
ಸುಸ್ತಾಗಿದ್ದರೂ ಕೂಡ ರಾತ್ರಿ ಹೆಚ್ಚು ಹೊತ್ತು ನಿದ್ದೆ ಬರದಿದ್ದರೆ ಅಥವಾ ನಿದ್ರಾಹೀನತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಹಾಲಿನಲ್ಲಿ ತುಪ್ಪವನ್ನು ಬೆರೆಸಿ ಕುಡಿಯುವುದು ನಿಮಗೆ ಪ್ರಯೋಜನವನ್ನು ನೀಡಲಿದೆ. ಈ ಸಂಯೋಜನೆಯು ಒತ್ತಡವನ್ನು ನಿವಾರಿಸುವುದು ಮಾತ್ರವಲ್ಲದೆ ನಿದ್ರೆಯನ್ನು ಸುಧಾರಿಸುತ್ತದೆ.
ಕೀಲು ನೋವಿನಿಂದ ಆರಾಮ ಸಿಗುತ್ತದೆ
ಒಂದು ವೇಳೆ ನೀವು ಕೀಲು ನೋವಿನಿಂದ ತುಂಬಾ ತೊಂದರೆಗೀಡಾಗಿದ್ದರೆ, ತುಪ್ಪ ಮತ್ತು ಹಾಲು ಸೇವಿಸುವ ಮೂಲಕ, ನೀವು ಈ ಸಮಸ್ಯೆಗೆ ವಿದಾಯ ಹೇಳಬಹುದು. ಇದು ಕೀಲುಗಳಲ್ಲಿನ ಊತವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ.
ಇದನ್ನೂ ಓದಿ-Alert! ಜಿಮ್ ನಲ್ಲಿ ಅತಿ ಹೆಚ್ಚು ವ್ಯಾಯಾಮ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ, ತಜ್ಞರು ಹೇಳುವುದೇನು?
ಹಾಲಿನೊಂದಿಗೆ ತುಪ್ಪ ಬೆರೆಸಿ ಹೇಗೆ ಸೇವಿಸಬೇಕು?
ಹಾಲಿನೊಂದಿಗೆ ತುಪ್ಪ ಬೆರೆಸಿ ಸೇವಿಸಲು, ಮೊದಲು ಹಾಲನ್ನು ಚೆನ್ನಾಗಿ ಬಿಸಿ ಮಾಡಿ. ಹಾಲನ್ನು ಬಿಸಿ ಮಾಡಿದ ನಂತರ ಒಂದರಿಂದ ಎರಡು ಚಮಚ ತುಪ್ಪವನ್ನು ಚೆನ್ನಾಗಿ ಬೆರೆಸಿ ಕುಡಿಯಿರಿ. ಬಿಸಿ ಹಾಲು ಮಾತ್ರ ಪ್ರಯೋಜನಕಾರಿಯಾಗಿದೆ. ಆದರೆ ನಿಮಗೆ ಹೃದಯ, ಮೂತ್ರಪಿಂಡ ಅಥವಾ ಯಕೃತ್ತಿನಂತಹ ಯಾವುದೇ ಗಂಭೀರ ಸಮಸ್ಯೆಗಳಿದ್ದರೆ, ಹಾಲಿನೊಂದಿಗೆ ತುಪ್ಪವನ್ನು ಸೇವಿಸುವ ಮೊದಲು ನಿಮ್ಮ ಆಹಾರ ತಜ್ಞರನ್ನು ಸಂಪರ್ಕಿಸಲು ಮರೆಯಬೇಡಿ.
ಇದನ್ನೂ ಓದಿ-Carrot Benefits: ಚಳಿಗಾಲದಲ್ಲಿ ಗಜ್ಜರಿ ಸೇವನೆಯಿಂದಾಗುವ ಈ ಲಾಭಗಳು ನಿಮಗೂ ತಿಳಿದಿರಲಿ
(Disclaimer:ಇಲ್ಲಿ ನೀಡಲಾಗಿರುವ ಮಾಹಿತಿ ಮನೆಮದ್ದು ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಮಾಹಿತಿಯನ್ನು ಅನುಸರಿಸುವ ಮೊದಲು ನುರಿತ ತಜ್ಞರ ಸಲಹೆ ಪಡೆಯಲು ಮರೆಯಬೇಡಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.