ರಾಜ್ಯದ ಜನತೆಗೆ ವಿದ್ಯುತ್ ಶಾಕ್: ವಿದ್ಯುತ್ ದರದಲ್ಲಿ ಶೇ.13 ರಿಂದ ಶೇ.26ರಷ್ಟು ಏರಿಕೆ, ಏ.1 ರಿಂದಲೇ ಪೂರ್ವಾನ್ವಯ

ವಿದ್ಯುತ್ ದರಗಳನ್ನು ಪರಿಷ್ಕರಣೆ ಮಾಡಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿ ಕನಿಷ್ಟ 82 ಪೈಸೆಯಿಂದ ಗರಿಷ್ಠ 1.62 ರೂ.ಗಳಷ್ಟು ದರ ಏರಿಕೆ ಮಾಡಿದೆ. 

Last Updated : May 14, 2018, 04:49 PM IST
ರಾಜ್ಯದ ಜನತೆಗೆ ವಿದ್ಯುತ್ ಶಾಕ್: ವಿದ್ಯುತ್ ದರದಲ್ಲಿ ಶೇ.13 ರಿಂದ ಶೇ.26ರಷ್ಟು ಏರಿಕೆ, ಏ.1 ರಿಂದಲೇ ಪೂರ್ವಾನ್ವಯ title=

ಬೆಂಗಳೂರು : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ಕಡಿಮೆಯಾಗುತ್ತಿದ್ದಂತೆ ರಾಜ್ಯದ ಜನತೆಗೆ ವಿದ್ಯುತ್ ದರದ ಕಾವು ತಟ್ಟಿದೆ. ಪ್ರಸಕ್ತ ಸಾಲಿನಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರಗಳನ್ನು ಪರಿಷ್ಕರಣೆ ಮಾಡಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿ ಕನಿಷ್ಟ 82 ಪೈಸೆಯಿಂದ ಗರಿಷ್ಠ 1.62 ರೂ.ಗಳಷ್ಟು ದರ ಏರಿಕೆ ಮಾಡಿದೆ. 

ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಕೆಇಆರ್‌ಸಿ ಅಧ್ಯಕ್ಷ ಶಂಕರಲಿಂಗೇಗೌಡ ಅವರು, ಪ್ರತಿ ಯೂನಿಟ್‌ಗೆ ಬೆಸ್ಕಾಂ ವ್ಯಾಪ್ತಿಯಲ್ಲಿ 82ಪೈಸೆ(ಶೇ.13), ಮೆಸ್ಕಾಂನಲ್ಲಿ 1.23 ರೂ. (ಶೇ.19), ಸೆಸ್ಕ್‌ನಲ್ಲಿ 1.13ರೂ (ಶೇ.18), ಹೆಸ್ಕಾಂನಲ್ಲಿ 1.23 ರೂ. (ಶೇ.19), ಜೆಸ್ಕಾಂನಲ್ಲಿ 1.62 ರೂ(ಶೇ.26)ರಷ್ಟು ಏರಿಕೆ ಮಾಡಲಾಗಿದೆ. ಒಟ್ಟಾರೆ ಶೇ.5.93ರಷ್ಟು ದರ ಏರಿಕೆಯಾಗಿದ್ದು, ಪರಿಷ್ಕೃತ ವಿದ್ಯುತ್‌ ದರ ಏಪ್ರಿಲ್‌ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. 

ಕಳೆದ ವರ್ಷ ಯೂನಿಟ್‌ಗೆ ಸರಾಸರಿ 48 ಪೈಸೆಯಷ್ಟು ಹೆಚ್ಚಳ ಮಾಡಲಾಗಿತ್ತು. ಅದರಂತೆ ಯೂನಿಟ್‌ಗೆ ಕನಿಷ್ಠ 15 ಪೈಸೆಯಿಂದ ಗರಿಷ್ಠ 50 ಪೈಸೆ ವರೆಗೆ ವಿದ್ಯುತ್‌ ದರ ಏರಿಕೆಯಾಗಿತ್ತು.

 

Trending News