ನವದೆಹಲಿ : ನವೆಂಬರ್ ಕೊನೆಯ ವಾರದಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ಭಾರೀ ಧನಲಾಭವಾಗಲಿದೆ. ಈ ಸಮಯದಲ್ಲಿ ಅವರು ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ನವೆಂಬರ್ 22 2021 ರಿಂದ ನವೆಂಬರ್ 28 ರವರೆಗೆ ದ್ವಾದಶ ರಾಶಿಗಳ ರಾಶಿಫಲ ಹೇಗಿರಲಿದೆ ನೋಡೋಣ..
ಮೇಷ (Aries): ಮೇಷ ರಾಶಿಯವರಿಗೆ ಆರಂಭಿಕ ದಿನಗಳಲ್ಲಿ ಕೆಲವು ಆರೋಗ್ಯ ಸಂಬಂಧಿ ತೊಂದರೆಗಳು ಉಂಟಾಗಬಹುದು. ಆದ್ದರಿಂದ ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿ. ಈ ವಾರ ಖರ್ಚುಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಸೋಮಾರಿತನದಿಂದಾಗಿ, ಈ ವಾರ ನಿಮ್ಮ ಕೆಲವು ಕೆಲಸಗಳನ್ನು ಅಪೂರ್ಣವಾಗಿ ಉಳಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಸಾಮರಸ್ಯದಿಂದ ನಡೆದುಕೊಳ್ಳುವುದರಿಂದ ಪ್ರಯೋಜನವಾಗಬಹುದು.
ವೃಷಭ (Taurus): ವೃಷಭ ರಾಶಿಯವರಿಗೆ ಧನ ಲಾಭವಾಗಬಹುದು. ವಾರದ ಮಧ್ಯದಲ್ಲಿ, ವ್ಯಾಪಾರ ಸಂಬಂಧಿತ ಕೆಲಸಗಳಲ್ಲಿ ಲಾಭ ಮತ್ತು ಯಶಸ್ಸನ್ನು ಪಡೆಯುತ್ತೀರಿ. ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು.
ಇದನ್ನೂ ಓದಿ : Budhaditya Yoga: ಬುಧ- ಸೂರ್ಯನ ಸಂಯೋಗದಿಂದ ಈ 5 ರಾಶಿಯವರಿಗೆ ಸಿಗಲಿದೆ ಶುಭಫಲ..!
ಮಿಥುನ (Gemini): ಮಿಥುನ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ . ಅಧಿಕಾರಿಗಳ ಜೊತೆಗಿನ ನಿಮ್ಮ ಬಾಂಧವ್ಯ ಉತ್ತಮವಾಗಿರುತ್ತದೆ. . ಈ ವಾರ ನಿಮ್ಮ ಸೌಕರ್ಯಗಳು ಹೆಚ್ಚಾಗಬಹುದು. ಸಹೋದರರು ಮತ್ತು ಸ್ನೇಹಿತರ ಸಹಕಾರ ಸಿಗುತ್ತದೆ. ಕುಟುಂಬ ಮತ್ತು ವೈವಾಹಿಕ ಜೀವನವು ಈ ವಾರ ಉತ್ತಮವಾಗಿರುತ್ತದೆ.
ಕರ್ಕಾಟಕ (Cancer) : ಕರ್ಕಾಟಕ ರಾಶಿಯವರಿಗೆ ಸ್ವಾಭಿಮಾನ ಹೆಚ್ಚಾಗಬಹುದು. ನೀವು ನಿಮ್ಮ ಸಂಗಾತಿಯೊಂದಿಗಿನ ಬಾಂಧವ್ಯವು ಉತ್ತಮವಾಗಿರುತ್ತದೆ. ವಾರದ ಮಧ್ಯದಲ್ಲಿ ಕೆಲಸದ ಹೊರೆ ಹೆಚ್ಚಾಗಲಿದೆ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಸಿಂಹ (Leo): ಸಿಂಹ ರಾಶಿಯವರು ಭಾರೀ ಲಾಭವನ್ನು ಪಡೆಯಬಹುದು. ಈ ವಾರ ನಿಮಗೆ ಉಡುಗೊರೆಗಳು ಮತ್ತು ಗೌರವ ಸಿಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಈ ವಾರ ಶುಭಕರವಾಗಿರುತ್ತದೆ. ವಾರದ ಮಧ್ಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಕನ್ಯಾ ರಾಶಿ (Virgo) : ಕನ್ಯಾ ರಾಶಿಯವರ ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಈ ವಾರ ನೀವು ಕೆಲವು ಉತ್ತಮ ವ್ಯಾಪಾರ ಲಾಭವನ್ನು ಪಡೆಯಬಹುದು. ವಾರದ ಮಧ್ಯದಲ್ಲಿ ದೈಹಿಕ ಮತ್ತು ಮಾನಸಿಕ ಒತ್ತಡವನ್ನು ಹೊಂದಬಹುದು.
ತುಲಾ (Libra): ತುಲಾ ರಾಶಿಯವರ ಆರ್ಥಿಕ ಸ್ಥಿತಿ ಸದೃಢವಾಗಲಿದೆ. ಈ ವಾರ ನೀವು ಕುಟುಂಬ ಸದಸ್ಯರಿಂದ ಉತ್ತಮ ಬೆಂಬಲವನ್ನು ಪಡೆಯುತ್ತೀರಿ. ಈ ವಾರ ಕೆಲಸದ ಬಗ್ಗೆ ಸ್ವಲ್ಪ ಆಲಸ್ಯ ಇರಬಹುದು. ದುಡಿಯುವ ವರ್ಗದವರಿಗೆ ಈ ವಾರ ಉತ್ತಮ ಲಾಭ ದೊರೆಯುವ ಲಕ್ಷಣಗಳಿವೆ.
ವೃಶ್ಚಿಕ (Scorpio): ವೃಶ್ಚಿಕ ರಾಶಿಯವರಿಗೆ ಗೃಹೋಪಯೋಗಿ ವಸ್ತುಗಳಿಗೆ ಹಣ ಖರ್ಚಾಗುವ ಸಾಧ್ಯತೆ ಇದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರ ವರ್ಗದವರಿಗೆ ಈ ವಾರ ಲಾಭದಾಯಕವಾಗಿರುತ್ತದೆ. ಹಳೆಯ ಹೂಡಿಕೆಗಳು ಈ ವಾರ ನಿಮಗೆ ಲಾಭವನ್ನು ನೀಡಬಹುದು.
ಇದನ್ನೂ ಓದಿ : Surya Grahan 2021: ಈ ದಿನ ಸಂಭವಿಸಲಿದೆ ವರ್ಷದ ಕೊನೆಯ ಸೂರ್ಯಗ್ರಹಣ, ತಿಳಿಯಿರಿ ಯಾರ ಮೇಲೆ ಯಾವ ಪರಿಣಾಮ ?
ಧನು ರಾಶಿ (Sagittarius): ಧನು ರಾಶಿಯವರಿಗೆ ಉತ್ತಮ ಲಾಭ ದೊರೆಯುತ್ತದೆ. ಈ ವಾರ ಕೌಟುಂಬಿಕ ವಿಚಾರಗಳಲ್ಲಿ ಸ್ವಲ್ಪ ಜಾಗ್ರತೆಯಿಂದ ನಡೆದುಕೊಳ್ಳುವುದು ಒಳ್ಳೆಯದು. ಈ ವಾರ ನಿಮ್ಮ ಆರ್ಥಿಕ ಸ್ಥಿತಿ ದುರ್ಬಲವಾಗಿರಬಹುದು.
ಮಕರ (Capricorn) : ಮಕರ ರಾಶಿಯವರಿಗೆ ಉತ್ತಮ ಧನ ಲಾಭ ದೊರೆಯಲಿದೆ. ಈ ವಾರ ನಿಮ್ಮ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ. ಈ ವಾರ ನೀವು ಪ್ರೇಮ ಸಂಬಂಧದ ವಿಷಯಗಳಲ್ಲಿ ಯಶಸ್ಸನ್ನು ಪಡೆಯಬಹುದು. ವಿದ್ಯಾರ್ಥಿಗಳಿಗೆ ಈ ವಾರ ಯಶಸ್ವಿಯಾಗಲಿದೆ.
ಕುಂಭ (Aquarius): ಕುಂಭ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ. ಈ ವಾರ ನಿಮ್ಮ ಗೌರವ ಹೆಚ್ಚಾಗಬಹುದು. ವಾರದ ಮಧ್ಯದಲ್ಲಿ ಕೆಲವು ಚಿಂತೆ ನಿಮ್ಮನ್ನು ಕಾಡಬಹುದು. ಕೆಲಸದ ವಿಷಯದಲ್ಲಿ ವಾರವು ಉತ್ತಮವಾಗಿರುತ್ತದೆ.
ಮೀನ (Pisces): ಮೀನ ರಾಶಿಯವರಿಗೆ ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ತೊಂದರೆಯಾಗಬಹುದು. ಕುಟುಂಬ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಈ ವಾರ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗಬಹುದು. ಅನುಪಯುಕ್ತ ಚಟುವಟಿಕೆಗಳಿಂದ ದೂರವಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.