ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ವೇಳೆ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರ ಸಲಹೆಯ ತಮಗೆ ನೆರವಾಯಿತು ಎಂದು ಭಾರತೀಯ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಹೇಳಿದ್ದಾರೆ.
ಭಾರತವು ಎರಡನೇ ಮತ್ತು ಅಂತಿಮ ಟೆಸ್ಟ್ನ ಮೊದಲ ದಿನದ ಅಂತ್ಯದ ವೇಳೆಗೆ ಮಯಾಂಕ್ ತಮ್ಮ ನಾಲ್ಕನೇ ಟೆಸ್ಟ್ ಶತಕವನ್ನು ಗಳಿಸಿದ್ದರಿಂದಾಗಿ ಭಾರತವು ಶುಕ್ರವಾರದಂದು ನಾಲ್ಕು ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿ ಸುಸ್ಥಿತಿಯಲ್ಲಿದೆ.ಮಾಯಾಂಕ್ ಆಗರ್ವಾಲ್ ಅಜೇಯ 120 ರನ್ ಗಳಿಸಿದರೆ, ವೃದ್ಧಿಮಾನ್ ಸಹಾ 25 ರನ್ ಗಳಿಸಿದರು.
What does it mean to score a ton in whites? 🤔@mayankcricket expresses his run of emotions to @prasidh43 after his gritty century on Day 1 of the 2nd @Paytm #INDvNZ Test at Wankhede. 😎 😎 - By @28anand
Full interview 🎥 🔽 #TeamIndiahttps://t.co/1hVDdntTA1 pic.twitter.com/v7u9mR8aTJ
— BCCI (@BCCI) December 3, 2021
ಇದನ್ನೂ ಓದಿ-ಆತಂಕ ಹೆಚ್ಚಿಸುತ್ತಿದೆ 'ಓಮಿಕ್ರಾನ್', ಪ್ರಯಾಣ ನಿಯಮಗಳನ್ನು ಬಿಗಿಗೊಳಿಸಿದ ಭಾರತ, COVID ನೆಗೆಟಿವ್ ವರದಿ ಕಡ್ಡಾಯ
'ಸನ್ನಿ ಸರ್ (ಗವಾಸ್ಕರ್) ನನ್ನ ಇನ್ನಿಂಗ್ಸ್ನಲ್ಲಿ ಆರಂಭದಲ್ಲಿ ನನ್ನ ಬ್ಯಾಟ್ ಅನ್ನು ಸ್ವಲ್ಪ ಕೆಳಗೆ ಇಟ್ಟುಕೊಳ್ಳಬೇಕು ಎಂದು ಹೇಳಿದರು.ಈ ಅಲ್ಪಾವಧಿಯಲ್ಲಿ ನಾನು ಆ ಹೊಂದಾಣಿಕೆಯನ್ನು ಮಾಡಲು ಸಾಧ್ಯವಾಗಲಿಲ್ಲ, ಆದರೆ ಖಂಡಿತವಾಗಿಯೂ, ಅವರು ಹೇಳುವಾಗ, ನಾನು ಅವರ ಭುಜದ ಸ್ಥಾನವನ್ನು ನೋಡಿದೆ.ಮತ್ತು ಮೂಲಭೂತವಾಗಿ ನಾನು ಹೆಚ್ಚು ಸೈಡ್-ಆನ್ ಆಗಿರಬೇಕು ಎಂದು ತಿಳಿದುಕೊಂಡಿದ್ದೇನೆ" ಎಂದು ದಿನದ ಆಟದ ಅಂತ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಯಾಂಕ್ ಹೇಳಿದರು.
ಇದನ್ನೂ ಓದಿ-ಓಮಿಕ್ರಾನ್ 'ಎಚ್ಚರಿಕೆಯ ಗಂಟೆ' ಯಾಗಿರಬಹುದು: WHO ವಿಜ್ಞಾನಿ
ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮೈದಾನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತೆ ಬ್ಯಾಟ್ಸ್ಮನ್ ಕೇಳಿಕೊಂಡಿದ್ದನ್ನು ಮಯಾಂಕ್ ಬಹಿರಂಗಪಡಿಸಿದ್ದಾರೆ.'ನನ್ನನ್ನು ಇಲ್ಲಿಗೆ ಆಯ್ಕೆ ಮಾಡಿದಾಗ, ರಾಹುಲ್ ಭಾಯ್ ಬಂದು ನನ್ನೊಂದಿಗೆ ಮಾತನಾಡಿದರು"ಎಂದು ಮಯಾಂಕ್ ಹೇಳಿದರು.
ಇದನ್ನೂ ಓದಿ-ರೂಪ ಬದಲಿಸುವ ಮೂಲಕ ವಿನಾಶವನ್ನುಂಟು ಮಾಡುತ್ತಿರುವ ಕೊರೊನಾ ವೈರಸ್!: ಕೇಂದ್ರದ ಸಿದ್ಧತೆ ಹೇಗಿದೆ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.