ಲಂಡನ್: ಪೋರ್ಚುಗಲ್‌ನ (Portugal) ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ಅವರ ಎರಡು ಗೋಲುಗಳ ನೆರವಿನಿಂದ ಮ್ಯಾಂಚೆಸ್ಟರ್ ಯುನೈಟೆಡ್ (Manchester United) ಗುರುವಾರ ಇಂಗ್ಲಿಷ್ ಪ್ರೀಮಿಯರ್ ಲೀಗ್ (EPL) ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಆರ್ಸೆನಲ್ (Arsenal) ವಿರುದ್ಧ 3-2 ಗೋಲುಗಳಿಂದ ರೋಚಕ ಗೆಲುವು ಸಾಧಿಸಿದೆ.
800 ಗೋಲುಗಳನ್ನು ಪೂರ್ಣಗೊಳಿಸಿದ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronalldo 800th Goal)
ಈ ಸಂದರ್ಭದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಉನ್ನತ ಮಟ್ಟದ ಪಂದ್ಯಾವಳಿಗಳಲ್ಲಿ (Football Tournament) ತಮ್ಮ 800 ಗೋಲುಗಳನ್ನು (800thGoal) ಪೂರ್ಣಗೊಳಿಸಿದ್ದಾರೆ. ರೊನಾಲ್ಡೊ ಪಂದ್ಯದ 52ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿ ಕ್ಲಬ್ ಮತ್ತು ದೇಶಕ್ಕಾಗಿ 800 ಗೋಲುಗಳನ್ನು ದಾಖಲಿಸಿ ಇತಿಹಾಸ ನಿರ್ಮಿಸಿದ್ದಾರೆ. ಆ ಬಳಿಕ ಪಂದ್ಯದ 70ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸಿ ತಂಡದ ಗೆಲುವನ್ನು ಖಚಿತಪಡಿಸಿದ್ದಾರೆ.
ಇದನ್ನೂ ಓದಿ-ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಆಟಗಾರ್ತಿ ಐಲೀನ್ ಆಶ್ 110 ನೇ ವಯಸ್ಸಿನಲ್ಲಿ ನಿಧನ
ಮ್ಯಾಂಚೆಸ್ಟರ್ ಯುನೈಟೆಡ್‌ಗೆ ರೋಚಕ ಗೆಲುವು
ಇದಕ್ಕೂ ಮೊದಲು ಆರ್ಸೆನಲ್ ಪರ ಎಮಿಲ್ ಸ್ಮಿತ್ 14ನೇ ನಿಮಿಷದಲ್ಲಿ ಮತ್ತು ಮಾರ್ಟಿನ್ ಒಡೆಗಾರ್ಡ್ 54ನೇ ನಿಮಿಷದಲ್ಲಿ ಗೋಲು ಬಾರಿಸಿದ್ದರು. ಬ್ರೂನೋ ಫೆರ್ನಾಂಡಿಸ್ ಮ್ಯಾಂಚೆಸ್ಟರ್ ಯುನೈಟೆಡ್ ಪರ 44ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು. ಜರ್ಮನಿಯ ಲೆಜೆಂಡರಿ ಕೋಚ್ ರಾಲ್ಫ್ ರೆಗ್ನಿಕ್ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲೇ ಮ್ಯಾಂಚೆಸ್ಟರ್ ತಂಡವು ಈ ವಿಜಯವನ್ನು ದಾಖಲಿಸಿದೆ.
ಇದನ್ನೂ ಓದಿ-BWF World Tour Finals: ಮತ್ತೊಮ್ಮೆ ಕಮಾಲ್ ಮಾಡಿದ PV Sindhu, BWF ವರ್ಲ್ಡ್ ಟೂರ್ ನ ಫೈನಲ್ ಗೆ ಲಗ್ಗೆ
ಕೆರಿಕ್ ಅವರ ಉಪಸ್ಥಿತಿಯಲ್ಲಿ ಮತ್ತೊಂದು ಗೆಲುವು
ನವೆಂಬರ್ 21 ರಂದು ಓಲೆ ಗುನ್ನಾರ್ ಸೋಲ್ಸ್‌ಜೇರ್ ಅವರನ್ನು ವಜಾಗೊಳಿಸಿದ ನಂತರ, ಮಾಜಿ ಆಟಗಾರ ಮೈಕೆಲ್ ಕೆರಿಕ್ ಮ್ಯಾಂಚೆಸ್ಟರ್ ಯುನೈಟೆಡ್‌ನ ಉಸ್ತುವಾರಿ ವಹಿಸಿದ್ದರು. ಕೆರಿಕ್ ಉಸ್ತುವಾರಿಲ್ಲಿ, ತಂಡ ಒಟ್ಟು ಮೂರು ಪಂದ್ಯಗಳನ್ನು ಆಡಿದೆ. ಇವುಗಳಲ್ಲಿ ತಂಡ ಯಾವುದೇ ಪಂದ್ಯವನ್ನು ಇದುವರೆಗೆ ಸೋತಿಲ್ಲ.
ಇದನ್ನೂ ಓದಿ-ಈ 3 ಆಟಗಾರರಿಗೆ ತೊಂದರೆ ಆದ ರಿಷಭ್ ಪಂತ್: ವೃತ್ತಿಜೀವನ ಕೊನೆಗೊಳ್ಳುವ ಅಪಾಯ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.