ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್(Rishabh Pant) ತಮ್ಮ ಅದ್ಭುತ ಪ್ರದರ್ಶನದ ಮೂಲಕ ಅತಿ ಕಡಿಮೆ ಸಮಯದಲ್ಲಿಯೇ ಹೆಚ್ಚು ಪ್ರಸಿದ್ಧಿಯಾಗಿದ್ದಾರೆ. ಟೀಂ ಇಂಡಿಯಾ ಹಲವು ಮಹತ್ವದ ಪಂದ್ಯಗಳಲ್ಲಿ ಗೆಲುವು ಸಾಧಿಸಲು ಪಂತ್ ನೆರವಾಗಿದ್ದಾರೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಪಂತ್ ಬಿರುಸಿನ ಬ್ಯಾಟಿಂಗ್ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಬಲ್ಲರು.
ಟೀಂ ಇಂಡಿಯಾದಲ್ಲಿ ರಿಷಭ್ ಪಂತ್ ಸ್ಥಾನ ಪಡೆದಿರುವುದು ಅನೇಕ ವಿಕೆಟ್ ಕೀಪರ್‌ಗಳ ವೃತ್ತಿಜೀವನಕ್ಕೆ ಕಂಟಕವಾಗಿದೆ. ಒಂದು ಕಾಲದಲ್ಲಿ ‘ಕೂಲ್ ಕ್ಯಾಪ್ಟನ್’ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ(MS Dhoni) ತಂಡದ ಖಾಯಂ ವಿಕೆಟ್ ಕೀಪರ್ ಆಗಿದ್ದಾಗಲೂ ಸಹ ಅನೇಕ ವಿಕೆಟ್‌ಕೀಪರ್‌ಗಳ ವೃತ್ತಿಜೀವನಕ್ಕೆ ಫುಲ್ ಸ್ಟಾಪ್ ಬಿದ್ದಿತ್ತು. ಧೋನಿ ತಂಡವನ್ನು ಮುನ್ನೆಡೆಸುವುದರ ಜೊತೆಗೆ ಖಾಯಂ ಆಗಿ ವಿಕೆಟ್ ಕೀಪರ್ ಆಗಿದ್ದರಿಂದ ಬೇರೆಯವರಿಗೆ ಅವಕಾಶ ಸಿಕ್ಕಿದ್ದು ವಿರಳ. ಈಗ ಇದೇ ಪರಿಸ್ಥಿತಿ ಪಂತ್ ವಿಷಯದಲ್ಲಿಯೂ ಆಗಿದೆ. ಅವರು ಕೂಡ ತಂಡಕ್ಕೆ ಖಾಯಂ ವಿಕೆಟ್ ಕೀಪರ್ ಆದರೆ ಇನ್ನುಳಿದ ವಿಕೆಟ್ ಕೀಪರ್ ಗಳ ವೃತ್ತಿಜೀವನವು ಡೋಲಾಯಮಾನವಾಗಲಿದೆ.
ಇದನ್ನೂ ಓದಿ: BWF World Tour Finals: ಮತ್ತೊಮ್ಮೆ ಕಮಾಲ್ ಮಾಡಿದ PV Sindhu, BWF ವರ್ಲ್ಡ್ ಟೂರ್ ನ ಫೈನಲ್ ಗೆ ಲಗ್ಗೆ
ಈ ಆಟಗಾರರ ವೃತ್ತಿಜೀವನ ಕೊನೆಗೊಳ್ಳಬಹುದು
ಸಂಜು ಸ್ಯಾಮ್ಸನ್
ಸಂಜು ಸ್ಯಾಮ್ಸನ್(Sanju Samson) ಉತ್ತಮ ಬ್ಯಾಟ್ಸ್ ಮನ್. ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಕಲಾತ್ಮಕ ಬ್ಯಾಟಿಂಗ್ ಶೈಲಿಯಿಂದ ಎಲ್ಲರ ಗಮನ ಸೆಳೆದವರು. ಐಪಿಎಲ್‌ನಲ್ಲಿ ಇದುವರೆಗೆ 3 ಶತಕ ಗಳಿಸಿರುವ ಅವರು ನಾಯಕನಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನೆಡೆಸಿದ್ದರು. ಆದರೆ ಪಂತ್ ಫಾರ್ಮ್‌ನಲ್ಲಿ ಓಡುತ್ತಿರುವ ರೀತಿಗೆ ಕೆಲವೊಮ್ಮೆ ಸ್ಯಾಮ್ಸನ್ ಅನ್ನು ನಿರ್ಲಕ್ಷಿಸಲಾಗುತ್ತದೆ. ಸ್ಯಾಮ್ಸನ್ ಇದುವರೆಗೆ 10 ಟಿ-20 ಪಂದ್ಯಗಳನ್ನು ಆಡಿದ್ದಾರೆ ಮತ್ತು ಕೇವಲ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. ಆದರೆ ಇದುವರೆಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಪಂತ್ ಇದೇ ರೀತಿ ಫಾರ್ಮ್‌ನಲ್ಲಿ ಮುಂದುವರಿದರೆ ಸ್ಯಾಮ್ಸನ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ವೃತ್ತಿಜೀವನ ಮುಂದುವರೆಸುವುದು ಕಷ್ಟಕರವಾಗುವ ಸಾಧ್ಯತೆ ಇದೆ.
ಇಶಾನ್ ಕಿಶನ್
ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಸ್ಫೋಟಕ ಆಟ ಪ್ರದರ್ಶಿಸಿ ಗಮನ ಸೆಳೆದಿರುವ ಇಶಾನ್ ಕಿಶನ್(Ishan Kishan) ಉತ್ತಮ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್. ಐಪಿಎಲ್ 2020 ರಲ್ಲಿ ಅವರು ಕೇವಲ 14 ಪಂದ್ಯಗಳಲ್ಲಿ 57ರ ಸರಾಸರಿಯಲ್ಲಿ 516 ರನ್ ಗಳಿಸಿದರು. 2021ರ ಸೀಸನ್‌ನಲ್ಲಿಯೂ ಇದೇ ರೀತಿ ಪ್ರದರ್ಶನ ನೀಡಿದರು. ಇದರ ನಂತರ ಅವರಿಗೆ ಟಿ-20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಅವಕಾಶ ನೀಡಲಾಯಿತು. ಗಮನಿಸಬೇಕಾದ ಅಂಶವೆಂದರೆ ಇಶಾನ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿದ್ದು, ಅವರು ಪಂತ್ ತಂಡದಲ್ಲಿದ್ದಾಗ ಹೆಚ್ಚಿನ ಅವಕಾಶ ಪಡೆಯುವುದು ತುಂಬಾ ಕಷ್ಟ. ಓಪನರ್ ಆಗಿ ಅವರಿಗೆ ಖಂಡಿತವಾಗಿಯೂ ಅವಕಾಶ ನೀಡಲಾಗುತ್ತದೆ. ಆದರೆ ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಅವರಂತಹ ಆಟಗಾರರೊಂದಿಗೆ ಹೆಚ್ಚಿನ ಅವಕಾಶ ಪಡೆಯುವುದು ಕೂಡ ಕಷ್ಟ.
ಇದನ್ನೂ ಓದಿ: ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಆಟಗಾರ್ತಿ ಐಲೀನ್ ಆಶ್ 110 ನೇ ವಯಸ್ಸಿನಲ್ಲಿ ನಿಧನ
ಕೆ.ಎಸ್.ಭರತ್
ಆಂಧ್ರಪ್ರದೇಶದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಕೆ.ಎಸ್.ಭರತ್(KS Bharat) 69 ಪ್ರಥಮ ದರ್ಜೆ ಪಂದ್ಯಗಳಲ್ಲಿ 37.58 ಸರಾಸರಿಯಲ್ಲಿ 3000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದರಲ್ಲಿ ಅವರು 8 ಶತಕ ಮತ್ತು 20 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅಷ್ಟೇ ಅಲ್ಲ ತ್ರಿವಳಿ ಶತಕವನ್ನೂ ಬಾರಿಸಿ ಮಿಂಚಿದ್ದಾರೆ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿ()ಯಲ್ಲಿ ಅವರು RCB ತಂಡದಲ್ಲಿ ಆಡಿದ್ದರು. ಕೊಹ್ಲಿ ಪಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರಿಂದ ಅವರಿಗೆ ಭಾರತೀಯ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಪಂತ್ ಹೊರಗುಳಿದಿದ್ದರು. ಇದಾದ ನಂತರವೂ ಭರತ್ ಗೆ ಚೊಚ್ಚಲ ಪಂದ್ಯವನ್ನಾಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ಪಂತ್ ತಂಡಕ್ಕೆ ಮರಳಿದರೆ ಭರತ್ ವೃತ್ತಿಜೀವನಕ್ಕೆ ಸಂಕಷ್ಟ ಎದುರಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.