ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ (KSRTC)ಯಲ್ಲಿ ಖಾಲಿ ಇರುವ 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಹುದ್ದೆಗಳು ಮತ್ತು 3,745 ಚಾಲನಾ ಸಿಬ್ಬಂದಿ ಸೇರಿ ಒಟ್ಟು 4,600ಕ್ಕೂ ಹೆಚ್ಚು ಹುದ್ದೆಗಳ ನೇರ ನೇಮಕಾತಿಗೆ ಮರು ಚಾಲನೆ ನೀಡುವಂತೆ ಸರ್ಕಾರದ ಅನುಮತಿ ಕೋರಿ ಮನವಿ ಮಾಡಲಾಗಿದೆ.
— KSRTC (@KSRTC_Journeys) December 8, 2021
ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ(KSRTC)ದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಕೋವಿಡ್-19 ಕಾರಣ KSRTCಯಲ್ಲಿ ಖಾಲಿ ಇರುವ 726 ತಾಂತ್ರಿಕ ಸಹಾಯಕ, 200 ಕರಾಸಾ ಪೇದೆ ಹುದ್ದೆಗಳು ಮತ್ತು 3,745 ಚಾಲನಾ ಸಿಬ್ಬಂದಿ ನೇರ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಸದ್ಯ ಕೊರೊನಾ ಕಾರಣ ಈ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರದ ಅನುಮತಿ ಕೋರಾಗಿದೆ.
ಇದನ್ನೂ ಓದಿ: ಬಲವಂತದ ಮತಾಂತರ ವಿಚಾರದಲ್ಲಿ ಜಾಣ ಕುರುಡುತನವೇಕೆ?: ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ
ಈ ಕುರಿತು ಅನುಮತಿ ಬಂದ ಕೂಡಲೇ ಮೇಲ್ಕಂಡ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಆಸಕ್ತರು ನಿಗಮದ ಅಧಿಕೃತ ವೆಬ್ ಸೈಟ್ www.ksrtcjobs.karnataka.gov.in ಗೆ ಭೇಟಿ ನೀಡಿ ಸಂಬಂಧಿತ ಮಾಹಿತಿ ಪಡೆದುಕೊಳ್ಳಬಹುದು.
ಇದನ್ನೂ ಓದಿ: COVID-19 rules in Karnataka:ರಾಜ್ಯದಲ್ಲಿ ಸದ್ಯಕ್ಕಿಲ್ಲ ನೈಟ್ ಕರ್ಫ್ಯೂ, ಒಂದು ವಾರದ ಬಳಿಕ ನಿರ್ಧಾರ: ಸಿಎಂ ಬೊಮ್ಮಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.