ನವದೆಹಲಿ: ಹರ್ನಾಜ್ ಸಂಧು (Harnaaz Sandhu) ಅವರು ಮಿಸ್ ಯೂನಿವರ್ಸ್ 2021 ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ.
ಯಾರು ಈ ಹರ್ನಾಜ್ ಸಂಧು?:
ಚಂಡೀಗಢದ 21 ವರ್ಷದ ಯುವತಿ ಇಸ್ರೇಲ್ನ ಐಲಾಟ್ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಪರಾಗ್ವೆಯ ನಾಡಿಯಾ ಫೆರೇರಾ ಮತ್ತು ದಕ್ಷಿಣ ಆಫ್ರಿಕಾದ ಲಾಲೆಲಾ ಮ್ಸ್ವಾನೆ ಅವರನ್ನು ಹಿಂದಿಕ್ಕಿದರು.
ಹರ್ನಾಜ್ ಚಂಡೀಗಢದಲ್ಲಿ ಶಿಕ್ಷಣ ಪಡೆದಿದ್ದಾರೆ. ಚಂಡೀಗಢದಲ್ಲಿರುವ ಶಿವಾಲಿಕ್ ಪಬ್ಲಿಕ್ ಸ್ಕೂಲ್ ಮತ್ತು ಬಾಲಕಿಯರ ಸ್ನಾತಕೋತ್ತರ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಹರ್ನಾಜ್ ಚಿಕ್ಕ ವಯಸ್ಸಿನಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು.
ಇದನ್ನೂ ಓದಿ: Miss Universe 2021: ಭಾರತದ ಹರ್ನಾಜ್ ಸಂಧುಗೆ ಒಲಿದ 'ಭುವನ ಸುಂದರಿ 2021' ಪಟ್ಟ
ಟೈಮ್ಸ್ ಫ್ರೆಶ್ ಫೇಸ್ ಮಿಸ್ ಚಂಡೀಗಢ 2017 (Times Fresh Face Miss Chandigarh 2017), ಮಿಸ್ ಮ್ಯಾಕ್ಸ್ ಎಮರ್ಜಿಂಗ್ ಸ್ಟಾರ್ ಇಂಡಿಯಾ 2018 (Miss Max Emerging Star India 2018), ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 (Femina Miss India Punjab 2019) ಮತ್ತು LIVA ಮಿಸ್ ದಿವಾ ಯೂನಿವರ್ಸ್ 2021 (LIVA Miss Diva Universe 2021) ಸೇರಿದಂತೆ ಹಲವಾರು ಸ್ಪರ್ಧೆಯಲ್ಲಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.
WHO ARE YOU? #MISSUNIVERSE pic.twitter.com/YUy7x9iTN8
— Miss Universe (@MissUniverse) December 13, 2021
ಅವರ ಮಿಸ್ ಯೂನಿವರ್ಸ್ ಪ್ರತಿನಿಧಿ ಪ್ರೊಫೈಲ್ನ ಪ್ರಕಾರ, ಹರ್ನಾಜ್ ಈ ಸಾಧನೆಗೆ ತಾಯಿ ರೂಬಿ ಸಂಧು ಅವರೇ ಸ್ಫೂರ್ತಿ. ಅವರು ವೃತ್ತಿಯಲ್ಲಿ ಸ್ತ್ರೀರೋಗತಜ್ಞರಾಗಿದ್ದಾರೆ.
ಮಿಸ್ ಯೂನಿವರ್ಸ್ ಡೆಲಿಗೇಟ್ ಪ್ರೊಫೈಲ್ ನಲ್ಲಿ ಸಂಧು ತಮ್ಮ ನೆಚ್ಚಿನ ನಟಿ ಪ್ರಿಯಾಂಕಾ ಚೋಪ್ರಾ ಎಂದು ಹೇಳಿದ್ದಾರೆ. ಸ್ನೇಹಿತರ ಜತೆ ಕಾಲ ಕಳೆಯುವುದು, ಯೋಗ, ನೃತ್ಯ, ಅಡುಗೆ, ಕುದುರೆ ಸವಾರಿ ಮತ್ತು ಚೆಸ್ ಆಡುವುದನ್ನು 'ಭುವನ ಸುಂದರಿ' ಇಷ್ಟಪಡುತ್ತಾರಂತೆ.
ಗೆಲುವಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಹರ್ನಾಜ್:
ಭುವನ ಸುಂದರಿ 2021 (Miss Universe 2021) ಕಿರೀಟವನ್ನುಧರಿಸಿದ ನಂತರ, ಹರ್ನಾಜ್ ತನ್ನ ಸಹ ಸ್ಪರ್ಧಿಗಳೊಂದಿಗೆ ವೇದಿಕೆಯಲ್ಲಿ ಸಂಭ್ರಮಿಸುವುದನ್ನು ಕಾಣಬಹುದು. ಗೆಲುವಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಹರ್ನಾಜ್, "ಚಕ್ ದೇ ಪಟ್ಟೆ ಇಂಡಿಯಾ (Chak de phatte India)" ಎಂದು ಹೇಳಿದರು.
ಜಡ್ಜ್ ಗಳ ಮನಗೆದ್ದ ಬೆಡಗಿಯ ಉತ್ತರ:
ಅಂತಿಮ ಸುತ್ತಿನ ಭಾಗವಾಗಿ, ಅಗ್ರ ಮೂರು ಸ್ಪರ್ಧಿಗಳನ್ನು ಪ್ರಶ್ನೆ ಕೇಳಲಾಯಿತು, "ಯುವತಿಯರು ಇಂದು ಅವರು ಎದುರಿಸುತ್ತಿರುವ ಒತ್ತಡವನ್ನು ಹೇಗೆ ಎದುರಿಸಬೇಕೆಂದು ನೀವು ಸಲಹೆ ನೀಡುತ್ತೀರಿ?"
FINAL STATEMENT: India. #MISSUNIVERSE
The 70th MISS UNIVERSE Competition is airing LIVE around the world from Eilat, Israel on @foxtv pic.twitter.com/wwyMhsAyvd
— Miss Universe (@MissUniverse) December 13, 2021
ಇದಕ್ಕೆ ತನ್ನ ಅಂತಿಮ ಹೇಳಿಕೆ ನೀಡಿದ ಹರ್ನಾಜ್ ಸಂಧು, "ಸರಿ, ಇಂದಿನ ಯುವ ಜನಾಂಗ ಎದುರಿಸುತ್ತಿರುವ ದೊಡ್ಡ ಒತ್ತಡವೆಂದರೆ ತಮ್ಮಲ್ಲಿ ನಂಬಿಕೆ ಇಡುವುದು ( believe in themselves) ಎಂದು ನಾನು ಭಾವಿಸುತ್ತೇನೆ. ಬೇರೆಯವರು ಏನೆಂದುಕೊಳ್ಳುತ್ತಾರೋ ಎನ್ನುವ ಭಯವನ್ನು ಎದುರಿಸುತ್ತಿದ್ದಾರೆ. ಬೇರೆಯವರ ಬಗ್ಗೆ ಯೋಚಿಸುವುದನ್ನು ಬಿಟ್ಟು ನಿಮ್ಮ ಆಸಕ್ತಿ ಕ್ಷೇತ್ರದೆಡೆಗೆ ಗಮನವಿರಲಿ. ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳುವುದನ್ನು ನಿಲ್ಲಿಸಿ. ಪ್ರಪಂಚದಾದ್ಯಂತ ನಡೆಯುತ್ತಿರುವ ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡೋಣ. ನೀವು ಅರ್ಥಮಾಡಿಕೊಳ್ಳಬೇಕಾದದ್ದು ಇದನ್ನೇ ಎಂದು ನಾನು ಭಾವಿಸುತ್ತೇನೆ. ನಿಮಗಾಗಿ ಮಾತನಾಡಿ, ಏಕೆಂದರೆ ನೀವು ನಿಮ್ಮ ಜೀವನದ ಹೀರೋ. ನೀವು ನಿಮ್ಮ ಸ್ವಂತ ಧ್ವನಿ. ನನ್ನ ಮೇಲೆ ನಾನಿಟ್ಟ ನಂಬಿಕೆ, ಆತ್ಮ ವಿಶ್ವಾಸ ಇಂದು ಈ ವೇದಿಕೆಗೆ ತಂದು ನಿಲ್ಲಿಸಿದೆ. ಧನ್ಯವಾದಗಳು." ಎಂದರು.
ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಜಾಗತಿಕ ತಾಪಮಾನ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಹರ್ನಾಜ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು. ಇದು ತೀರ್ಪುಗಾರರನ್ನು ಪ್ರಭಾವಿಸಿತ್ತು.
ಇದನ್ನೂ ಓದಿ: Harnaaz Sandhu Photos:'ಮಿಸ್ ಯೂನಿವರ್ಸ್ 2021' ಹರ್ನಾಜ್ ಸಂಧು ಫಿನಾಲೆ ಫೋಟೋಗಳು
70ನೇ ಭುವನ ಸುಂದರಿ 2021 (Miss Universe 2021) ಆಗಿ 21 ವರ್ಷದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾರತ ಈ ಹಿಂದೆ 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಎರಡು ಬಾರಿ ಭುವನ ಸುಂದರಿ (Miss Universe)ಪ್ರಶಸ್ತಿ ಗೆದ್ದಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.