PM Narendra Modi: ಪ್ರೋಟೋಕಾಲ್‌ ಬಿಟ್ಟು ರಾತ್ರಿ ಕಾಶಿ ತಪಾಸಣೆಗೆ ಹೊರಟ ಪ್ರಧಾನಿ, ರೈಲ್ವೆ ನಿಲ್ದಾಣಕ್ಕೂ ಭೇಟಿ

PM Narendra Modi Varanasi Visit: ಕಾಶಿ ವೀಕ್ಷಣೆಗೆಂದು ರಾತ್ರಿ ಒಂದು ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅತಿಥಿ ಗೃಹದಿಂದ ಹೊರಡುತ್ತಾರೆ ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಪೂರ್ವ ನಿಗದಿತ ಕಾರ್ಯಕ್ರಮದಲ್ಲಿ ಕಾಶಿ ತಪಾಸಣೆಯ ಬಗ್ಗೆ ಯಾವುದೇ ಕಾರ್ಯಕ್ರಮ ಪಟ್ಟಿ ಮಾಡಿರಲಿಲ್ಲ.

Written by - Yashaswini V | Last Updated : Dec 14, 2021, 09:27 AM IST
  • ಪರಿಶೀಲನೆ ವೇಳೆ ಸಿಎಂ ಯೋಗಿ ಕೂಡ ಪ್ರಧಾನಿ ಜತೆಗಿದ್ದರು
  • ರೈಲ್ವೇ ನಿಲ್ದಾಣದ ಹೊರಗೆ ಅಂಗಡಿ ಯವರನ್ನು ಸ್ವಾಗತಿಸಿದ ಪ್ರಧಾನಿ
  • ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ
PM Narendra Modi: ಪ್ರೋಟೋಕಾಲ್‌ ಬಿಟ್ಟು ರಾತ್ರಿ ಕಾಶಿ ತಪಾಸಣೆಗೆ ಹೊರಟ ಪ್ರಧಾನಿ, ರೈಲ್ವೆ ನಿಲ್ದಾಣಕ್ಕೂ ಭೇಟಿ title=
Pm modi varanasi visit

PM Narendra Modi Varanasi Visit: ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಭೇಟಿಯ ಎರಡನೇ ದಿನವಾಗಿದೆ. ಪ್ರೋಟೋಕಾಲ್‌ ಬಿಟ್ಟು ಪ್ರಧಾನಿ ಮೋದಿ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಬನಾರಸ್ ರೈಲು ನಿಲ್ದಾಣವನ್ನು ಪರಿಶೀಲಿಸಿದರು. ಈ ವೇಳೆ ಪ್ರಧಾನಿ ಗೋಡೋಲಿಯಾ ಚೌಕ್‌ಗೂ ತೆರಳಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಜೊತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು.

ತಡರಾತ್ರಿ ಬನಾರಸ್ ರೈಲು ನಿಲ್ದಾಣ ತಲುಪಿದ ಪ್ರಧಾನಿ ಮೋದಿ:
ನಿನ್ನೆ ತಡರಾತ್ರಿ ಬನಾರಸ್ ರೈಲು ನಿಲ್ದಾಣದ ಜೊತೆಗೆ ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಪರಿಶೀಲಿಸಿದ್ದಾರೆ. ಪ್ರಧಾನಿ ಮೋದಿ ಅವರು ಬನಾರಸ್ ರೈಲು ನಿಲ್ದಾಣದ ಚಿತ್ರಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರೈಲ್ವೇ ನಿಲ್ದಾಣದ ಚಿತ್ರಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ- ಮುಂದಿನ ನಿಲ್ದಾಣ, ಬನಾರಸ್ ನಿಲ್ದಾಣ. ರೈಲು ಸಂಪರ್ಕವನ್ನು ಹೆಚ್ಚಿಸುವುದರ ಜೊತೆಗೆ ಸ್ವಚ್ಛ, ಆಧುನಿಕ ಮತ್ತು ಪ್ರಯಾಣಿಕರ ಸ್ನೇಹಿ ರೈಲು ನಿಲ್ದಾಣಗಳನ್ನು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಬರೆದಿದ್ದಾರೆ.

ಇದನ್ನೂ ಓದಿ- ಏನಿದು ಕಾಶಿ-ವಿಶ್ವನಾಥ ಕಾರಿಡಾರ್? ಪ್ರಧಾನಿ ಮೋದಿ ಕನಸಿನ ಯೋಜನೆ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ!

ಸ್ವತಃ ತೆರಳಿ ರೈಲು ನಿಲ್ದಾಣವನ್ನು ಪರಿಶೀಲಿಸಿದ ಪ್ರಧಾನಿ:
ಪ್ರಧಾನಿ ಮೋದಿ (PM Modi) ಅವರು ಬನಾರಸ್ ರೈಲು ನಿಲ್ದಾಣವನ್ನು ಪರಿಶೀಲಿಸಿದರು. ರೈಲು ನಿಲ್ದಾಣದಿಂದ ನಿರ್ಗಮಿಸಿದ ಪ್ರಧಾನಿ ಅವರು ಸ್ಟಾಲ್‌ನಲ್ಲಿದ್ದ ವ್ಯಾಪಾರಿಗಳಿಗೆ ಹಸ್ತಲಾಘವ ಮಾಡಿ ಅಭಿನಂದಿಸಿದರು.  

ಇದನ್ನೂ ಓದಿ- Photo Gallery: ಕಾಶಿ ವಿಶ್ವನಾಥನಿಗೆ ಪೂಜೆ, ಗಂಗಾ ಆರತಿ ಸಲ್ಲಿಸಿದ ಪ್ರಧಾನಿ ಮೋದಿ

ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಮಂತ್ರಿಗಳ ವಿಚಾರ ಮಂಥನ:
ಪ್ರಧಾನಿ ನರೇಂದ್ರ ಮೋದಿಯವರು ಇಂದು (ಮಂಗಳವಾರ) ವಾರಣಾಸಿಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಡಬಲ್ ಇಂಜಿನ್ ಸರ್ಕಾರದ ಕಾಮಗಾರಿ, ಉತ್ತಮ ಆಡಳಿತ ಹಾಗೂ ಅಭಿವೃದ್ಧಿ ಕುರಿತು ಚರ್ಚೆ ನಡೆಸಬಹುದು. ಈ ಸಭೆಯಲ್ಲಿ ಉತ್ತರ ಪ್ರದೇಶ  ಸಿಎಂ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ತ್ರಿಪುರಾ ಸಿಎಂ ಬಿಪ್ಲಬ್ ದೇವ್, ಹರ್ಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್, ಹಿಮಾಚಲ ಪ್ರದೇಶ ಸಿಎಂ ಜೈ ರಾಮ್ ಠಾಕೂರ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ , ಉತ್ತರಾಖಂಡ ಸಿಎಂ ಪುಷ್ಕರ್ ಧಾಮಿ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕರ್ನಾಟಕ ಸಿಎಂ ಬಸವರಾಜ್ ಎಸ್ ಬೊಮ್ಮಾಯಿ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್  ಅವರು ಇಂದು ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News