ವಾಷಿಂಗ್ಟನ್: Russia-Ukraine Tension - ಕೊರೊನಾ ಬಿಕ್ಕಟ್ಟಿನ ಮಧ್ಯೆ ಮಹಾಯುದ್ಧದ ಸದ್ದು ಕೇಳಿ ಬರುತ್ತಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಉದ್ವಿಗ್ನತೆ (Russia-Ukraine Tension) ನಿರಂತರವಾಗಿ ಹೆಚ್ಚುತ್ತಿದೆ. ಯುಎಸ್ ಮತ್ತು ನ್ಯಾಟೋ ಎಚ್ಚರಿಕೆಗಳ ಹೊರತಾಗಿಯೂ, ರಷ್ಯಾ (Russia) ತನ್ನ ನಿಲುವಿಗೆ ಅಂಟಿಕೊಂಡಿದೆ ಮತ್ತು ಗಡಿಯಲ್ಲಿ ಸೈನಿಕರ ಬಿಡಾರಗಳನ್ನು ಹೆಚ್ಚಿಸುತ್ತಿದೆ. ಒಂದು ಅಂದಾಜಿನ ಪ್ರಕಾರ, ರಷ್ಯಾವು ಉಕ್ರೇನ್ (Ukraine) ಗಡಿಯಲ್ಲಿ ಟ್ಯಾಂಕ್ ಮತ್ತು ಫಿರಂಗಿಗಳೊಂದಿಗೆ ಒಂದು ಲಕ್ಷ ಸೈನಿಕರನ್ನು ನಿಯೋಜಿಸಿದೆ ಮತ್ತು ಜನವರಿ ಅಂತ್ಯದ ವೇಳೆಗೆ ಅದರ ಸಂಖ್ಯೆ 1.75 ಲಕ್ಷಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಉಕ್ರೇನ್ ಗೆ ಯುಎಸ್ ಬೆಂಬಲ
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ (America) ಅಧ್ಯಕ್ಷ ಜೋ ಬಿಡನ್ (Joe Biden)ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಈ ಯುದ್ಧದಲ್ಲಿ ಉಕ್ರೇನ್ಗೆ ಅಮೆರಿಕ ಬೆಂಬಲ ನೀಡಲಿದೆ. ಡಿಸೆಂಬರ್ 9 ರಂದು, ಬಿಡೆನ್ ಉಕ್ರೇನಿಯನ್ ಅಧ್ಯಕ್ಷ Volodymyr Zelenskiy ಅವರೊಂದಿಗೆ ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ ಮತ್ತು ಯುಎಸ್ ಸಂಪೂರ್ಣವಾಗಿ ಉಕ್ರೇನ್ ಗೆ ಬೆಂಬಲ ನೀಡಲಿದೆ ಎಂಬ ಭರವಸೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ಕುರಿತು ಉತ್ತರ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ (NATO) ಜತೆಯೂ ಅಮೆರಿಕ ಅಧ್ಯಕ್ಷರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ದೇಶಗಳಿಗೂ ಬೆಂಬಲ ಸಿಗಲಿದೆ
ರಷ್ಯಾ ಮತ್ತು ಉಕ್ರೇನ್ ಒಂದು ವೇಳೆ ಯುದ್ಧದಲ್ಲಿ ತೊಡಗಿದರೆ, ಅದು ಕೇವಲ ಎರಡು ದೇಶಗಳ ನಡುವಿನ ಯುದ್ಧವಾಗಿರುವುದಿಲ್ಲ ಎಂದು ಜಾಗತಿಕ ತಜ್ಞರ ಅಭಿಮತ. ಇದು ವಿಶ್ವಯುದ್ಧವಾಗಿಯೂ ಬದಲಾಗಬಹುದು. ಸದ್ಯದ ಪರಿಸ್ಥಿತಿಯ ಪ್ರಕಾರ ಉಕ್ರೇನ್ ಮೇಲುಗೈ ತೋರುತ್ತಿದೆ. ಉಕ್ರೇನ್ ಬೆಂಬಲಕ್ಕೆ ಅಮೆರಿಕ, 9 ದೇಶಗಳ ಗುಂಪು ಬುಕಾರೆಸ್ಟ್ ನೈನ್ (ರೊಮೇನಿಯಾ, ಪೋಲೆಂಡ್, ಹಂಗೇರಿ, ಬಲ್ಗೇರಿಯಾ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ, ಎಸ್ಟೋನಿಯಾ, ಲಾಟ್ವಿಯಾ ಮತ್ತು ಲಿಥುವೇನಿಯಾ), ಜರ್ಮನಿ ಮತ್ತು ಫ್ರಾನ್ಸ್ ಸೇರಿದಂತೆ ಹಲವು ದೇಶಗಳಿರುವಂತೆ ತೋರುತ್ತಿದೆ. ಇತ್ತೀಚೆಗೆ, ಯುರೋಪಿಯನ್ ಒಕ್ಕೂಟದ ನಾಯಕರು ಈ ವಿಷಯದ ಬಗ್ಗೆ ಬ್ರಸೆಲ್ಸ್ನಲ್ಲಿ ಸಭೆ ನಡೆಸಿದ್ದರು. ಈ ಸಭೆಯಲ್ಲಿ, ಗಡಿಯಲ್ಲಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮತ್ತು ಆಕ್ರಮಣಕಾರಿ ಭಾಷೆ ತಪ್ಪಿಸಲು ರಷ್ಯಾಗೆ ಕೋರಲಾಗಿತ್ತು. ಅಲ್ಲದೆ, ಮಾಸ್ಕೋ ಮೇಲೆ ನಿರ್ಬಂಧಗಳನ್ನು ಹೇರುವಂತಹ ನಿರ್ಧಾರಗಳ ಬಗ್ಗೆಯೂ ಕೂಡ ಮಾತುಕತೆಗಳು ನಡೆದಿದ್ದವು.
ನ್ಯಾಟೋ ಅಸಮಾಧಾನ ಮತ್ತು ರಷ್ಯಾದ ಭಯ
ಉದ್ವಿಗ್ನತೆಯನ್ನು ಸೃಷ್ಟಿಸಲು ರಷ್ಯಾ ತೋರುತ್ತಿರುವ ವರ್ತನೆಗಳಿಂದ ನ್ಯಾಟೋ ಕೂಡ ಅಸಮಾಧಾನಗೊಂಡಿದೆ. NATO ಸೆಕ್ರೆಟರಿ ಜನರಲ್ ಜೆನ್ಸ್ ಸ್ಟೋಲ್ಟೆನ್ಬರ್ಗ್ ಇತ್ತೀಚೆಗೆ ಗಡಿಯಲ್ಲಿ ರಷ್ಯಾದ ಪಡೆಗಳ ಜಮಾವಣೆಯನ್ನು ಖಂಡಿಸಿದ್ದರು. ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಾಸ್ಕೋ ತಕ್ಷಣವೇ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದ್ದರು. ಹಾಗೆ ನೋಡಿದರೆ, ಪಾಶ್ಚಿಮಾತ್ಯ ಭದ್ರತಾ ಸಂಸ್ಥೆ ನ್ಯಾಟೋದಲ್ಲಿ ಉಕ್ರೇನ್ಗೆ ಸ್ಥಾನ ನೀಡುವ ಪ್ರಯತ್ನಗಳಿಂದ ರಷ್ಯಾ ಕೋಪಗೊಂಡಿದೆ. ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆದರೆ, ನ್ಯಾಟೋ ನೆಲೆಗಳನ್ನು ತನ್ನ ಗಡಿಯ ಸಮೀಪದಲ್ಲಿ ಇರಿಸಲಾಗುವುದು ಎಂಬ ಭಯ ರಷ್ಯಾಗಿದೆ. ಇದರಿಂದ ರಷ್ಯಾಗೆ ಯಾವುದೇ ಬೆದರಿಕೆಯನ್ನು ಒಡ್ಡುವುದಿಲ್ಲ ಎಂದು ಜೆನ್ಸ್ ಸ್ಟೋಲ್ಟೆನ್ಬರ್ಗ್ ರಷ್ಯಾಗೆ ನೀಡಿದ್ದಾರೆ.
ಹಾಗಾದರೆ ರಷ್ಯಾದ ಬೆಂಬಲಕ್ಕೆ ಯಾರು?
ಬನ್ನಿ ಈಗ ಈ ಯುದ್ಧದಲ್ಲಿ ನಾವು ರಷ್ಯಾವನ್ನು ಬೆಂಬಲಿಸುವ ರಾಷ್ಟ್ರಗಳ ಕುರಿತು ತಿಳಿದುಕೊಳ್ಳೋಣ. ಯಾವುದೇ ದೊಡ್ಡ ದೇಶವು ಅದರಲ್ಲಿ ಭಾಗಿಯಾಗಿಲ್ಲ. ಚೀನಾ ಖಂಡಿತವಾಗಿಯೂ ಕೊನೆಯ ಕ್ಷಣದಲ್ಲಿ ತನ್ನ ಆಟ ಆಡುವ ಸಾಧ್ಯತೆ ಇದೆ. ರಷ್ಯಾ-ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಈ ಸಂಭಾಷಣೆಯಲ್ಲಿ, ಪಾಶ್ಚಿಮಾತ್ಯ ದೇಶಗಳ ದಬ್ಬಾಳಿಕೆ ವಿರುದ್ಧ ರಷ್ಯಾದೊಂದಿಗೆ ನಿಲ್ಲುವುದಾಗಿ ಜಿನ್ಪಿಂಗ್ (Xi Jinping) ಪುಟಿನ್ ಅವರಿಗೆ ಭರವಸೆ ಭರವಸೆ ನೀಡಿದ್ದಾರೆ.
ಇದನ್ನೂ ಓದಿ-Rafale Aircraft:'ಅಗತ್ಯ ಬಿದ್ದರೆ ಭಾರತಕ್ಕೆ ಹೆಚ್ಚುವರಿ ರಫೇಲ್ ಪೂರೈಕೆ, ಫ್ರಾನ್ಸ್ ರಕ್ಷಣಾ ಸಚಿವರ ಮಹತ್ವದ ಹೇಳಿಕೆ
ರಷ್ಯಾ-ಉಕ್ರೇನ್ ವಿವಾದ ಏನು?
ರಷ್ಯಾ ಮತ್ತು ಉಕ್ರೇನ್ ನಡುವಿನ ವಿವಾದ ಬಹಳ ಹಳೆಯದಾಗಿದೆ. ಉಕ್ರೇನ್ ಒಂದು ಕಾಲದಲ್ಲಿ ರಷ್ಯಾ ಸಾಮ್ರಾಜ್ಯದ ಭಾಗವಾಗಿತ್ತು. 1991 ರಲ್ಲಿ ಸೋವಿಯತ್ ಒಕ್ಕೂಟದ ವಿಭಜನೆಯ ನಂತರ ಉಕ್ರೇನ್ ಸ್ವಾತಂತ್ರ್ಯವನ್ನು ಪಡೆದಾಗ, ಅದು ರಷ್ಯಾದ ನೆರಳಿನಿಂದ ಹೊರಬರಲು ಪ್ರಯತ್ನಿಸಲಾರಂಭಿಸಿತು. ಇದಕ್ಕಾಗಿ ಪಾಶ್ಚಿಮಾತ್ಯ ದೇಶಗಳೊಂದಿಗೆ ಉಕ್ರೇನ್ ತನ್ನ ನಿಕಟತೆಯನ್ನು ಹೆಚ್ಚಿಸಿಕೊಂಡಿದೆ. ವಿಕ್ಟರ್ ಯಾನುಕೋವಿಕ್ ಅವರು ಉಕ್ರೇನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮತ್ತು ಉಕ್ರೇನ್ನ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಅಲ್ಲಿಯ ಪ್ರತ್ಯೇಕತಾವಾದಿಗಳ ಸಹಾಯದಿಂದ ವಶಪಡಿಸಿಕೊಂಡ ನಂತರ ರಷ್ಯಾ ಉಕ್ರೇನ್ ವಿರುದ್ಧ ಆಕ್ರಮಣಕಾರಿ ಧೋರಣೆಯನ್ನು ತಳೆದಿದೆ. ಯಾನುಕೋವಿಚ್ ರಷ್ಯಾದ ಪರವಾಗಿ ಒಲವು ತೋರಿದ ಕಾರಣ ದೇಶದಲ್ಲಿ ಅವರ ವಿರುದ್ಧ ವಾತಾವರಣವು ನಿರ್ಮಾಣಗೊಂಡಿತು.
ಪರಿಸ್ಥಿತಿ ಬಿಗಡಾಯಿಸಿದ್ದೆಲ್ಲಿ
ಉಕ್ರೇನ್ ನಲ್ಲಿನ ಸರ್ಕಾರವನ್ನು ಅಸ್ಥಿರಗೊಳಿಸಲು ಉಕ್ರೇನ್ನಲ್ಲಿರುವ ಪ್ರತ್ಯೇಕತಾವಾದಿಗಳಿಗೆ ರಷ್ಯಾ ಸಹಾಯ ಮಾಡುತ್ತಿದೆ ಎಂದು ಉಕ್ರೇನ್ ಮತ್ತು ಪಶ್ಚಿಮ ದೇಶಗಳು ಹೇಳುತ್ತಿವೆ. ಆದರೆ ಇನ್ನೊಂದೆಡೆ ಮಾಸ್ಕೋ ಈ ಆರೋಪಗಳನ್ನು ತಳ್ಳಿಹಾಕಿದೆ. 2014ರಲ್ಲಿ ನಡೆದ ಒಂದು ವಿಮಾನ ದುರಂತದ ಹಿನ್ನೆಲೆ ರಷ್ಯಾ ಇಡೀ ವಿಶ್ವದ ಕೆಂಗಣ್ಣಿಗೆ ಗುರಿಯಾಗಿದೆ. ಜುಲೈ 17, 2014 ರಂದು ಪೂರ್ವ ಉಕ್ರೇನ್ನಲ್ಲಿ ಕೌಲಾಲಂಪುರಕ್ಕೆ ಹೊರಟಿದ್ದ ಮಲೇಷ್ಯಾ ಏರ್ಲೈನ್ಸ್ ವಿಮಾನವನ್ನು ಹೊಡೆದುರುಳಿಸಲಾಗಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 298 ಪ್ರಯಾಣಿಕರು ಸಾವನ್ನಪ್ಪಿದ್ದರು. ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳ ಪ್ರದೇಶದಿಂದ ರಷ್ಯಾದ ಕ್ಷಿಪಣಿ ವಿಮಾನವನ್ನು ಹೊಡೆದಿದೆ ಎಂದು ಡಚ್ ಅಧಿಕಾರಿಗಳು ಆರೋಪಿಸಿದ್ದಾರೆ. ಅಮೇರಿಕಾ ಮತ್ತು ಪಾಶ್ಚಿಮಾತ್ಯ ದೇಶಗಳು ಸಹ ರಷ್ಯಾದ ಮೇಲೆ ಎಲ್ಲಾ ನಿರ್ಬಂಧಗಳನ್ನು ವಿಧಿಸಿವೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ, ಇದರಿಂದಾಗಿ ಅದು ಒತ್ತಡದ ತಂತ್ರದ ರೂಪದಲ್ಲಿ ಉಕ್ರೇನ್ ಸಮಸ್ಯೆಯನ್ನು ಕೆದುಕುತ್ತಿದೆ.
ಇದನ್ನೂ ಓದಿ-Narendra Modi : ಪ್ರಧಾನಿ ಮೋದಿಗೆ 'ಭೂತಾನ್ ಅತ್ಯುನ್ನತ ನಾಗರಿಕ ಪ್ರಶಸ್ತಿ' ಗೌರವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.