US ಮಿಲಿಟರಿ, NATO ದ ದೀರ್ಘಾವಧಿಯ ಕೆಲಸವನ್ನು ಹೊರತುಪಡಿಸಿ, ತನ್ನ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ವಿಶ್ವಾದ್ಯಂತ ನಿರ್ಮಿಸಲಾದ ಮಿಲಿಟರಿ ನೆಲೆಗಳಲ್ಲಿ ನಿಯೋಜನೆಗೊಂಡಿದೆ. ಇದು ಇರಾಕ್ನಿಂದ ಅಫ್ಘಾನಿಸ್ತಾನಗಳ ವರೆಗೆ ತನ್ನ ಉಪಸ್ಥಿತಿ ಮತ್ತು ನಿಯೋಜನೆಯ ದೀರ್ಘ ಇತಿಹಾಸವನ್ನು ಅದು ಹೊಂದಿದೆ. ಏತನ್ಮಧ್ಯೆ, ಅಮೆರಿಕದ ಸೈನಿಕರಿಗೆ ವಯಾಗ್ರವನ್ನು ಒದಗಿಸುವ ವೆಚ್ಚದ ಬಗ್ಗೆ ಇದೀಗ ಭಾರಿ ಕೋಲಾಹಲ ಸೃಷ್ಟಿಯಾಗಿದೆ.
ಇತ್ತೀಚೆಗೆ, ಅಮೆರಿಕಾದಲ್ಲಿ ದೊಡ್ಡ ಪ್ರಮಾಣದಲ್ಲಿ ರಹಸ್ಯ ಕಡತಗಳು ಸಾರ್ವಜನಿಕರಿಗೆ ಲಭ್ಯವಾಗಿದ್ದು, ಅದರಲ್ಲಿ ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಮಿಲಿಟರಿ ಲೆಕ್ಕಾಚಾರಗಳು, ವಿವಿಧ ಜಾಗತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸಿಐಎ ನೀಡಿದ ವರದಿಗಳೂ ಸೇರಿದ್ದವು. ಈ ಕಡತಗಳು ಮೊದಲು ರಷ್ಯಾದಲ್ಲಿ ಹೆಚ್ಚಾಗಿ ಬಳಸಲಾಗುವ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್ನಲ್ಲಿ ಹರಿದಾಡಿ, ಆ ಮೂಲಕ ಸಾರ್ವಜನಿಕರ ಗಮನಕ್ಕೆ ಬಂದವು.
ರಷ್ಯಾದ ಸೇನೆಯೊಂದಿಗೆ ನ್ಯಾಟೋ ಪಡೆಗಳ ಯಾವುದೇ ನೇರ ಸಂಪರ್ಕ ಅಥವಾ ನೇರ ಘರ್ಷಣೆಯು ಜಾಗತಿಕ ದುರಂತಕ್ಕೆ ಕಾರಣವಾಗುತ್ತದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶುಕ್ರವಾರ ಹೇಳಿದ್ದಾರೆ.
ಉಕ್ರೇನ್ ಯುಎಸ್ ನೇತೃತ್ವದ ನ್ಯಾಟೋ ಮಿಲಿಟರಿ ಮೈತ್ರಿಗೆ ಸೇರಿಸಿಕೊಂಡರೆ, ಉಕ್ರೇನ್ನಲ್ಲಿನ ಸಂಘರ್ಷವು ಮೂರನೇ ಮಹಾಯುದ್ಧವಾಗಿ ಉಲ್ಬಣಗೊಳ್ಳುವುದು ಖಾತರಿಪಡಿಸುತ್ತದೆ ಎಂದು ರಷ್ಯಾದ ಭದ್ರತಾ ಮಂಡಳಿಯ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಒಂದು ಕಡೆ ಉಕ್ರೇನ್ ನೆಲದಲ್ಲಿ ರಷ್ಯಾ ಭೀಕರ ದಾಳಿ ನಡೆಸುತ್ತಿದೆ. ದಾಳಿಗೆ ಉಕ್ರೇನ್ ಕೂಡ ಪ್ರತ್ಯುತ್ತರ ನೀಡುತ್ತಿದ್ದರೂ, ಪ್ರಬಲ ರಷ್ಯಾ ದಾಳಿಗೆ ಉಕ್ರೇನ್ ಧೂಳಿಪಟವಾಗಿದೆ. ಇಷ್ಟೆಲ್ಲಾ ನಡೆದರೂ ಉಕ್ರೇನ್ ಇನ್ನೂ ಸಂಪೂರ್ಣವಾಗಿ ಶರಣಾಗಿಲ್ಲ. ಹಾಗಾದರೆ ಉಕ್ರೇನ್ಗೆ ಶಕ್ತಿ ತುಂಬುತ್ತಿರುವ ಆ ಕಾಣದ ಕೈಗಳು ಯಾವುವು..? ಎಂಬ ಪ್ರಶ್ನೆ ಸಹಜವಾಗಿ ಕುತೂಹಲ ಕೆರಳಿಸುತ್ತಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.
Russia-Ukraine War - ಉಕ್ರೇನ್ ಮತ್ತು ರಷ್ಯಾ ನಡುವೆ ಮೂರನೇ ಮಹಾಯುದ್ಧ (Third World War) ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೆರೆಯ ರಾಷ್ಟ್ರಗಳು ರಷ್ಯಾದ ದಾಳಿಗೆ ಹೆದರುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಗಡಿಯಲ್ಲಿರುವ ದೇಶಗಳಿಗೆ ಅಮೆರಿಕ ಸೇನೆಯನ್ನು ಕಳುಹಿಸಿದೆ.
Ukraine-Russia War Updates: ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆಯೇ ಜರ್ಮನಿ (Germany) ಉಕ್ರೇನ್ಗೆ (Ukraine) 1 ಸಾವಿರ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರಗಳು ಮತ್ತು 500 ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳನ್ನು ನೀಡಲಿದೆ. ಅಷ್ಟೇ ಅಲ್ಲ ಜರ್ಮನಿ ರಷ್ಯಾದ ವಿಮಾನಗಳಿಗಾಗಿ ತನ್ನ ವಾಯುಪ್ರದೇಶವನ್ನು ಸಹ ಮುಚ್ಚಲಿದೆ.
Russia-Ukraine War: ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿಯ ಎರಡನೇ ದಿನವಾದ ಇಂದು ರಷ್ಯಾ ಸೇನೆ ಉಕ್ರೇನ್ ರಾಜಧಾನಿ (Kyiv) ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ಏಕಾಂಗಿತನ ಅನುಭವಿಸುತ್ತಿದೆ. NATO ಆಗಿರಲಿ ಅಥವಾ ಅಮೇರಿಕಾ (America) ಆಗಿರಲಿ ಉಕ್ರೇನ್ ಸಹಾಯಕ್ಕೆ ಯಾವುದೇ ದೇಶ ಮುಂದಕ್ಕೆ ಬರುತ್ತಿಲ್ಲ.
Russia-Ukraine Conflict Update: ಬೆಲಾರೂಸ್ ಪರಮಾಣು ಡ್ರಿಲ್ ನಡೆಸುವ ಮೂಲಕ ರಷ್ಯಾ ಕಪ್ಪು ಸಮುದ್ರದಲ್ಲಿ (Russia's Black Sea Fleet) ತನ್ನ ಸಮರಾಭ್ಯಾಸ ನಡೆಸಿದೆ. ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ರಷ್ಯಾ ಮೂರೂ ದಿಕ್ಕುಗಳಿಂದ ರಷ್ಯಾವನ್ನು ಸುತ್ತುವರೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ವತಃ ಈ ಪರಮಾಣು ಡ್ರಿಲ್ ಗೆ ಸಾಕ್ಷಿಯಾಗಿದ್ದಾರೆ.
Russia-Ukraine Standoff - ಉಕ್ರೇನ್ ಮೇಲೆ ರಷ್ಯಾ (Russia-Ukraine Crisis) ದಾಳಿಗೆ ಕ್ಷಣಗಣನೆ ಆರಂಭಗೊಂಡಿದೆ ಎನ್ನಲಾಗಿದೆ. ಇಷ್ಟೆಲ್ಲಾ ಆದರೂ ಕೂಡ ಉಕ್ರೇನ್(Ukriane) ಅನ್ನು ರಕ್ಷಿಸುವ ಧೈರ್ಯವನ್ನು ಅಮೆರಿಕ (US) ಮತ್ತು ನ್ಯಾಟೋಪಡೆಗಳಿಂದ (NATO Forces) ಕೂಡಿ ಸಾಧ್ಯವಾಗುತ್ತಿಲ್ಲ. ಯಾವುದೇ ದೇಶದ ಹೆಸರನ್ನು ಕ್ಷಣಮಾತ್ರದಲ್ಲಿ ಅಳಿಸಿ ಹಾಕಬಲ್ಲ 5 ಮೆಗಾ ವಿಧ್ವಂಸಕ ಅಸ್ತ್ರಗಳು (Most Dangerous Weapons Of Russia) ರಷ್ಯಾ ಬಳಿ ಇರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
Russia-Ukrain Conflict - ಪ್ರಸ್ತುತ ಉಕ್ರೇನ್ (Ukraine) ಮೇಲೆ ರಷ್ಯಾದ (Russia) ದಾಳಿಯ ದಿನಾಂಕ ಮತ್ತು ಸಮಯದ ಚರ್ಚೆಯಲ್ಲಿ ಇಡೀ ಜಗತ್ತೇ ತೊಡಗಿಸಿಕೊಂಡಿದೆ, ಇದು ಉಕ್ರೇನ್ ಮೇಲೆ ರಷ್ಯಾದ ದಾಳಿ ಖಚಿತ ಎಂಬ ಅಂಶಕ್ಕೆ ಬಲ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ನ 79 ವರ್ಷದ ಮಹಿಳೆಯೊಬ್ಬರು ಎಕೆ-47 ಚಲಾಯಿಸಲು (Ukraine Grandma AK 47 Viral Photo) ಕಲಿಯುತ್ತಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.
World War Fear - ಉಕ್ರೇನ್ನ ಸುತ್ತಲೂ ರಷ್ಯಾದ ಮಿಲಿಟರಿ ಸಂರಚನೆಯ ನಡುವೆಯೇ NATO ಇದೀಗ ಪೂರ್ವ ಯುರೋಪ್ಗೆ ಯುದ್ಧ ವಿಮಾನಗಳು ಮತ್ತು ಜೆಟ್ಗಳನ್ನು ಕಳುಹಿಸುತ್ತಿದೆ. ಇಂತಹ ಸೇನಾ ಸಜ್ಜುಗೊಳಿಸುವಿಕೆಯನ್ನು ಮೂರನೇ ಮಹಾಯುದ್ಧದ ಸಂಕೇತವೆ? ಎಂಬಂತೆ ನೋಡಲಾಗುತ್ತಿದೆ.
Russia-Ukraine Tension - ಉಕ್ರೇನ್ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಜಗತ್ತನ್ನು ಮತ್ತೊಮ್ಮೆ ವಿಶ್ವಯುದ್ಧದತ್ತ ತಳ್ಳುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ ನಂತರ ವಿಶ್ವಯುದ್ಧವೂ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಕೆಂದರೆ ಯುಎಸ್ ಅಧ್ಯಕ್ಷರು ರಷ್ಯಾಗೆ ಈಗಾಗಲೇ ಭೀಕರ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ನ್ಯಾಟೋ ರಷ್ಯಾಕ್ಕೆ ಸಲಹೆ ನೀಡಿದೆ.
Afghanistan Crisis - ಅಫ್ಘಾನಿಸ್ಥಾನದಲ್ಲಿ ದೃಷ್ಟಿ ಬೀಭತ್ಸವಾಗಿದೆ. ತಾಲಿಬಾನ್ ಭಯದ ಹಿನ್ನೆಲೆ ಜನರು ಯಾವ ಬೆಲೆ ಬೇಕಾದರೂ ತೆರಲು ರೆಡಿಯಾಗಿದ್ದಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಜನರು ಕಾಬೂಲ್ ನಿಂದ ಓಡಿ ಹೋಗಲು ಯತ್ನಿಸುತ್ತಿದ್ದಾರೆ. ಏತನ್ಮಧ್ಯೆ. 7 ತಿಂಗಳ ಕಂದಮ್ಮವೊಂದು ತನ್ನ ಪೋಷಕರಿಂದ ಬೇರ್ಪಟ್ಟು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಳುತ್ತಿರುವುದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.