ಇದು ನ್ಯಾಯವೇ.? ಪತಿಯ ಜಾಮೀನಿಗೆ ಕಾನೂನು ನೆರವು ಕೇಳಿದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Noida gang rape: ಮಹಿಳೆ ತನ್ನ ದೂರಿನಲ್ಲಿ, ವಕೀಲರು ತನಗೆ ಸಹಾಯ ಮಾಡುವ ನೆಪದಲ್ಲಿ ನೋಯ್ಡಾದಲ್ಲಿರುವ ತನ್ನ ಕಚೇರಿಗೆ ಕರೆಸಿಕೊಂಡರು. ಅಲ್ಲಿ ತಮ್ಮ ಸಹಚರರ ಜತೆ ಸೇರಿ ತನ್ನ ಮೇಲೆ ಅತ್ಯಾಚಾರ ಎಸಗಿದರು. ಘೋರ ಅಪರಾಧದ ವಿಡಿಯೋ ಕ್ಲಿಪ್ ಕೂಡ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

Edited by - Zee Kannada News Desk | Last Updated : Dec 29, 2021, 06:50 PM IST
  • ಪತಿಯ ಜಾಮೀನಿಗೆ ಕಾನೂನು ನೆರವು ಕೇಳಿದ ಮಹಿಳೆ
  • ವಕೀಲ ಮತ್ತು ಸಹಚರರಿಂದ ಸಾಮೂಹಿಕ ಅತ್ಯಾಚಾರ
  • ನೋಯ್ಡಾದ ಸೆಕ್ಟರ್ 2 ದಲ್ಲಿ ನಡೆದ ಘಟನೆ
ಇದು ನ್ಯಾಯವೇ.? ಪತಿಯ ಜಾಮೀನಿಗೆ ಕಾನೂನು ನೆರವು ಕೇಳಿದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ  title=
ಸಾಮೂಹಿಕ ಅತ್ಯಾಚಾರ

ನವದೆಹಲಿ: ನೋಯ್ಡಾದಲ್ಲಿ ವಕೀಲರು ಮತ್ತು ಅವರ ಆಪ್ತರಿಂದ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ (Noida gang rape) ಎಂದು ಹರಿಯಾಣದ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ಮಹಿಳೆ ತನ್ನ ಪತಿಯನ್ನು ಜಾಮೀನಿನ ಮೇಲೆ ಹೊರತರಲು ಕಾನೂನು ಸಹಾಯವನ್ನು ಪಡೆಯುತ್ತಿದ್ದಳು.

ಮಹಿಳೆ ತನ್ನ ದೂರಿನಲ್ಲಿ, ವಕೀಲರು ತನಗೆ ಸಹಾಯ ಮಾಡುವ ನೆಪದಲ್ಲಿ ನೋಯ್ಡಾದಲ್ಲಿರುವ ತನ್ನ ಕಚೇರಿಗೆ ಕರೆಸಿಕೊಂಡರು. ಅಲ್ಲಿ ತಮ್ಮ ಸಹಚರರ ಜತೆ ಸೇರಿ ಅತ್ಯಾಚಾರ (gang rape by lawyer) ಎಸಗಿದರು. ಘೋರ ಅಪರಾಧದ ವಿಡಿಯೋ ಕ್ಲಿಪ್ ಕೂಡ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿಯನ್ನು ನೋಯ್ಡಾ ಪೊಲೀಸರು ಬಂಧಿಸಿದ್ದರು. 

ಈ ಪ್ರಕರಣದ ಬಗ್ಗೆ ವಿವರಗಳನ್ನು ಹಂಚಿಕೊಂಡ ನೋಯ್ಡಾದ ಸಹಾಯಕ ಪೊಲೀಸ್ ಆಯುಕ್ತರಾದ ಅಂಕಿತಾ ಶರ್ಮಾ, ಹರಿಯಾಣದ ವಲ್ಲಭಗಢ ಜಿಲ್ಲೆಯ ನಿವಾಸಿಯಾದ ಸಂತ್ರಸ್ತೆಯು, ತನ್ನ ಪತಿ ಜೈಲಿನಲ್ಲಿದ್ದಾಗ, ಜಾಮೀನು ಪಡೆಯಲು ವಕೀಲರನ್ನು ಹುಡುಕುತ್ತಿದ್ದರು. ಆಕೆಗೆ ವಿಕಾಸ್ ಎಂಬುವವರಿಂದ ಕರೆ ಬಂದಿತು. ಅವರು ತನ್ನ ಪತಿಗೆ ಜಾಮೀನು ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ವಕೀಲ ಮಹೇಶ್ ಅವರನ್ನು ಭೇಟಿಯಾಗುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮಹೇಶ್ ಅವರನ್ನು ಭೇಟಿಯಾದ ನಂತರ, ನೋಯ್ಡಾದ ಸೆಕ್ಟರ್ 2 ನಲ್ಲಿರುವ ತನ್ನ ಕಚೇರಿಗೆ ಕರೆಸಿಕೊಂಡರು, ಅಲ್ಲಿ ಮಹೇಶ್, ವಿಕಾಸ್, ದೇವೇಂದ್ರ ಮತ್ತು ಇನ್ನೊಬ್ಬ ವ್ಯಕ್ತಿ ತನ್ನ ಮೇಲೆ ದಿನಗಟ್ಟಲೆ ಸಾಮೂಹಿಕ ಅತ್ಯಾಚಾರ ಎಸಗಿದರು. ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಮಹಿಳೆ ಆರೋಪಿಸಿದ್ದಾರೆ.

ನಂತರ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. 

ಇದನ್ನೂ ಓದಿ: Newyear ಪಾರ್ಟಿಗೆ ಗೋವಾ ಪ್ಲಾನ್ ಮಾಡಿರುವಿರಾ? ಸರ್ಕಾರದ ಈ ನಿರ್ಧಾರವನ್ನು ಒಮ್ಮೆ ನೋಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News