ನವದೆಹಲಿ: Data Leak! - ಭಾರತದಲ್ಲಿನ ಸಾವಿರಾರು ಜನರ ಹೆಸರುಗಳು, ಮೊಬೈಲ್ ಸಂಖ್ಯೆಗಳು, ವಿಳಾಸಗಳು ಮತ್ತು ಕೋವಿಡ್ ಪರೀಕ್ಷೆಯ ಫಲಿತಾಂಶಗಳು ಸೇರಿದಂತೆ ಇತರ ವೈಯಕ್ತಿಕ ಮಾಹಿತಿ ಸರ್ಕಾರಿ ಸರ್ವರ್ನಿಂದ ಸೋರಿಕೆಯಾಗಿವೆ (Cyber Fraud). ಆನ್ಲೈನ್ ಹುಡುಕಾಟವನ್ನು ಬಳಸಿಕೊಂಡು ಈ ಮಾಹಿತಿಯನ್ನು ಪ್ರವೇಶಿಸಬಹುದು. ಸೋರಿಕೆಯಾದ ಡೇಟಾವನ್ನು ರೆಡ್ ಫೋರಂ ಎಂಬ ವೆಬ್ಸೈಟ್ನಲ್ಲಿ ಮಾರಾಟಕ್ಕೆ ಇರಿಸಲಾಗಿದೆ, ಅಲ್ಲಿ ಸೈಬರ್ ಅಪರಾಧಿಯೊಬ್ಬ (Online Fraud) ತನ್ನ ಬಳಿ 20,000 ಕ್ಕೂ ಹೆಚ್ಚು ಜನರ ವೈಯಕ್ತಿಕ ಡೇಟಾ ಇರುವುದಾಗಿ ಹೇಳಿಕೊಂಡಿದ್ದಾನೆ. ರೆಡ್ ಫೋರಂ ವೆಬ್ಸೈಟ್ನಲ್ಲಿ ಕೋವಿಡ್ನ ಹೆಸರುಗಳು, ಮೊಬೈಲ್ ಸಂಖ್ಯೆಗಳು, ವಿಳಾಸಗಳು ಮತ್ತು ಪರೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ.
ಸೈಬರ್ ತಜ್ಞರ ಎಚ್ಚರಿಕೆ
ಸೈಬರ್ ಸೆಕ್ಯುರಿಟಿ ತಜ್ಞ ರಾಜಶೇಖರ್ ರಾಜಹರಿಯ ಈ ಟ್ವೀಟ್ ಮಾಡಿ, '#Covid19 #RTPCR ಪರೀಕ್ಷಾ ಫಲಿತಾಂಶ ಮತ್ತು ಹೆಸರು, ಮೊಬೈಲ್ ಸಂಖ್ಯೆ, ಪ್ಯಾನ್, ವಿಳಾಸ ಸೇರಿದಂತೆ #Cowin ಡೇಟಾ. PII ಸರ್ಕಾರದ CDN ಮೂಲಕ ಸಾರ್ವಜನಿಕವಾಗುತ್ತಿದೆ. #Google ಸರ್ಚ್ ಇಂಜಿನ್ನಲ್ಲಿ ಸುಮಾರು 9 ಲಕ್ಷ ಸಾರ್ವಜನಿಕ/ಖಾಸಗಿ #GovtDocuments ಇಂಡೆಕ್ಸ್ ಮಾಡಿದೆ. ರೋಗಿಗಳ ಡೇಟಾವನ್ನು ಇದೀಗ #Darkweb ನಲ್ಲಿ ಪಟ್ಟಿ ಮಾಡಲಾಗಿದೆ" ಎಂದು ಹೇಳಿದ್ದಾರೆ.
PII including Name, MOB, PAN, Address etc of #Covid19 #RTPCR results & #Cowin data getting public through a Govt CDN. #Google indexed almost 9 Lac public/private #GovtDocuments in search engines. Patient's data is now listed on #DarkWeb. Need fast deindex#Infosec @IndianCERT pic.twitter.com/LgQxZZi8T6
— Rajshekhar Rajaharia (@rajaharia) January 19, 2022
ಇದನ್ನೂ ಓದಿ-6Gಯತ್ತ ಹೆಜ್ಜೆ ಹಾಕುತ್ತಿರುವ ರಿಲಯನ್ಸ್ ಜಿಯೋ ,ಹೊಂದಿರಲಿದೆ 5G ಗಿಂತ 100 ಪಟ್ಟು ವೇಗ
ವೈದ್ಯರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ
ರೈಡ್ ಫೋರಮ್ನಲ್ಲಿ ಹಂಚಿಕೊಳ್ಳಲಾದ ಮಾದರಿ ದಾಖಲೆಯು ಸೋರಿಕೆಯಾದ ಡೇಟಾವನ್ನು ಕೋ-ವಿನ್ ಪೋರ್ಟಲ್ನಲ್ಲಿ (CoWin Portal) ಅಪ್ಲೋಡ್ ಮಾಡಲು ಉದ್ದೇಶಿಸಲಾಗಿದೆ ಎಂದು ತೋರಿಸುತ್ತದೆ. ಕೋವಿನ್ (CoWin App) ಪೋರ್ಟಲ್ನ ಡೇಟಾ ಸೋರಿಕೆ ಸುದ್ದಿಯನ್ನು ಕೋವಿನ್ ಮುಖ್ಯಸ್ಥ ಡಾ ಆರ್ ಎಸ್ ಶರ್ಮಾ ನಿರಾಕರಿಸಿದ್ದಾರೆ. ಈ ಕುರಿತು ಮಾತನಾಡಿರುವ ಡಾ.ಆರ್.ಎಸ್.ಶರ್ಮಾ ಅವರು, 'ಕೊವಿನ್ ಪೋರ್ಟಲ್ನಲ್ಲಿ ಯಾರೊಬ್ಬರ ವಿಳಾಸ ಅಥವಾ ಕೋವಿಡ್ ವರದಿಯನ್ನು ಅಪ್ಲೋಡ್ ಮಾಡದ ಕಾರಣ ಇದು ಪ್ರಾಥಮಿಕವಾಗಿ ಕೋವಿನ್ ಪೋರ್ಟಲ್ನ ಡೇಟಾ ಸೋರಿಕೆಯ ಪ್ರಕರಣವಾಗಿ ತೋರುತ್ತಿಲ್ಲ. ಆದರೆ, ಸಾರ್ವಜನಿಕ ಹಿತಾಸಕ್ತಿಯಿಂದ ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ತನಿಖೆಯ ನಂತರವೇ ಹೆಚ್ಚಿನ ಮಾಹಿತಿ ನೀಡಲು ಸಾಧ್ಯ' ಎಂದು ಹೇಳಿದ್ದಾರೆ.
ಇದನ್ನೂ ಓದಿ-iPhone 13 ಮೇಲೆ ಇದುವರೆಗಿನ ಅತಿದೊಡ್ಡ ರಿಯಾಯಿತಿ, ಕಡಿಮೆ ಬೆಲೆಗೆ ಖರೀದಿಸಿ ಸ್ಮಾರ್ಟ್ ಫೋನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.