WATCH:ಹಿಮರಾಶಿಯ ನಡುವೆ 15,000 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಿದ ITBP

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಬುಧವಾರ 15000 ಅಡಿಗಳಷ್ಟು ಎತ್ತರದಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹಿಮರಾಶಿಯ ನಡುವೆ ರಾಷ್ಟ್ರಧ್ವಜವನ್ನು ಹಾರಿಸಿದರು. 

Edited by - Chetana Devarmani | Last Updated : Jan 26, 2022, 09:24 AM IST
  • ಭಾರತವು ತನ್ನ 73 ನೇ ಗಣರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿದೆ
  • 15,000 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ
  • ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹಿಮರಾಶಿಯ ನಡುವೆ ಗಣರಾಜ್ಯೋತ್ಸವ ಆಚರಿಸಿದ ITBP
WATCH:ಹಿಮರಾಶಿಯ ನಡುವೆ 15,000 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಿದ ITBP title=
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್

ಲಡಾಖ್: ಭಾರತವು ತನ್ನ 73 ನೇ ಗಣರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಿರುವಾಗ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಸಿಬ್ಬಂದಿ ಬುಧವಾರ 15000 ಅಡಿಗಳಷ್ಟು ಎತ್ತರದಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಹಿಮರಾಶಿಯ ನಡುವೆ ರಾಷ್ಟ್ರಧ್ವಜವನ್ನು ಹಾರಿಸಿದರು. 

 

 

ಭಾರತದ ಗಣರಾಜ್ಯೋತ್ಸವದ (Republic Day) ಸ್ಮರಣಾರ್ಥ ವಿಶೇಷ ವಿಡಿಯೋ ಮತ್ತು ಫೋಟೋಗಳನ್ನು ಸಹ ITBP ಪಡೆ ಪೋಸ್ಟ್ ಮಾಡಿದೆ. ಲಡಾಖ್‌ನಲ್ಲಿ ಮಾತ್ರವಲ್ಲದೆ ಹಿಮಾಲಯದ ಶಿಖರಗಳಲ್ಲಿ ಭಾರತ-ಚೀನಾ ಗಡಿಯನ್ನು ಭದ್ರಪಡಿಸಲು ನಿಯೋಜಿಸಲಾದ ವಿವಿಧ ಎತ್ತರಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಿರುವ ಸೈನಿಕರ ದೇಶಪ್ರೇಮವನ್ನು ಈ ವಿಡಿಯೋ ಇತಿ ಹಿಡಿಯುತ್ತದೆ. 

ಇದನ್ನೂ ಓದಿ: Republic Day: ಮೊದಲಿಗೆ ಗಣರಾಜ್ಯೋತ್ಸವ ಪರೇಡ್ ನಡೆದಿದ್ದೆಲ್ಲಿ? ಮುಖ್ಯ ಅತಿಥಿ ಯಾರಾಗಿದ್ದರು?

"ಭಾರತ್ ಮಾತಾ ಕಿ ಜೈ" ಮತ್ತು "ವಂದೇ ಮಾತರಂ" ಎಂದು ಗಡಿಯಲ್ಲಿ ಸಿಂಹ ಘರ್ಜನೆ ಮಾಡಿರುವ ಯೋಧರ ಕ್ಲಿಪ್ ಟ್ವಿಟರ್‌ನಲ್ಲಿ ನೆಟಿಜನ್‌ಗಳ ಮನಗೆದ್ದಿದೆ. ಹಲವಾರು ಮೆಚ್ಚುಗೆಯ ಕಾಮೆಂಟ್‌ಗಳು ಮತ್ತು ಶುಭಾಶಯಗಳನ್ನು ಗಳಿಸಿದೆ.

"ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಹಿಮ ವೀರರು (Himveers) ಎಂದು ಕರೆಯಲ್ಪಡುವ ಹಿಮಾವೃತ ಲಡಾಖ್ (Ladakh) ಗಡಿಗಳಲ್ಲಿ ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 15000 ಅಡಿ ಎತ್ತರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ" ಎಂದು ITBP ಹೇಳಿದೆ.

 

 

ಲಡಾಖ್ ಜೊತೆಗೆ, ITBP ಸಿಬ್ಬಂದಿ ಹಿಮಾಚಲ ಪ್ರದೇಶದಲ್ಲಿ 16,000 ಅಡಿ ಎತ್ತರದಲ್ಲಿ ಗಣರಾಜ್ಯೋತ್ಸವವನ್ನು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ ಮತ್ತು ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಆಚರಿಸಿದರು.

ITBP ಸಿಬ್ಬಂದಿ ಉತ್ತರಾಖಂಡದ ಕುಮಾವೂನ್ ಪ್ರದೇಶದಲ್ಲಿ ಮೈನಸ್ ತಾಪಮಾನದಲ್ಲಿ 12,000 ಅಡಿಗಳಷ್ಟು ಎತ್ತರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಿದರು.

ಲಡಾಖ್‌ನಲ್ಲಿ ಅತ್ಯಂತ ಕಷ್ಟಕರವಾದ ಮತ್ತು ನಿರಾಶ್ರಿತ ಭೂಪ್ರದೇಶದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ITBP ಸಿಬ್ಬಂದಿ ಶೌರ್ಯ, ಬದ್ಧತೆ ಮತ್ತು ದೇಶಭಕ್ತಿಗೆ ಉದಾಹರಣೆ.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಇಲ್ಲ, ಪೂರ್ಣಾವಧಿಗೆ ಬೊಮ್ಮಾಯಿ ಸಿಎಂ: ನಳೀನ್ ಕುಮಾರ್ ಕಟೀಲ್

ITBP, ವಿಶೇಷ ಪರ್ವತ ಪಡೆಯ ಹೆಚ್ಚಿನ ಅಧಿಕಾರಿಗಳು ಮತ್ತು ಪುರುಷರು ತರಬೇತಿ ಪಡೆದ ಪರ್ವತಾರೋಹಿಗಳಾಗಿದ್ದಾರೆ. ಲಡಾಖ್‌ನ ಕಾರಕೋರಂ ಪಾಸ್‌ನಿಂದ ಅರುಣಾಚಲ ಪ್ರದೇಶದ ಜಾಚೆಪ್ ಲಾ ವರೆಗಿನ 3,488 ಕಿಮೀ ಗಡಿಯನ್ನು ಕಾಪಾಡುತ್ತಾರೆ.  

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News