ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಐದು ವಿಧಾನಗಳನ್ನು ಅನುಸರಿಸಿ, ಆರೋಗ್ಯ ವೃದ್ದಿಸುತ್ತದೆ

ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ,  ರೋಗಗಳು ಮತ್ತು ಸೋಂಕುಗಳಿಗೆ ಗುರಿಯಾಗುತ್ತಿರಬೇಕಾಗುತ್ತದೆ. ಇದಕ್ಕಾಗಿ ವೈಯಕ್ತಿಕ ನೈರ್ಮಲ್ಯ ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ.   

Written by - Ranjitha R K | Last Updated : Jan 28, 2022, 12:51 PM IST
  • ರೋಗನಿರೋಧಕ ಶಕ್ತಿಯನ್ನು ಬಲಪಡಿಸಿ.
  • ಅನಾರೋಗ್ಯಕರ ಅಭ್ಯಾಸಗಳನ್ನು ತಕ್ಷಣ ಬಿಟ್ಟುಬಿಡಿ.
  • ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ.
ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಐದು ವಿಧಾನಗಳನ್ನು ಅನುಸರಿಸಿ,  ಆರೋಗ್ಯ ವೃದ್ದಿಸುತ್ತದೆ   title=
ಅನಾರೋಗ್ಯಕರ ಅಭ್ಯಾಸಗಳನ್ನು ತಕ್ಷಣ ಬಿಟ್ಟುಬಿಡಿ. (file photo)

ನವದೆಹಲಿ : ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ, ದುರ್ಬಲ ರೋಗನಿರೋಧಕ ಶಕ್ತಿ (Immunity power) ಇದಕ್ಕೆ ಕಾರಣವಾಗಿರಬಹುದು. ಅನಾರೋಗ್ಯಕರ ಆಹಾರ, ವ್ಯಾಯಾಮ ಮಾಡದಿರುವುದು, ಶುಚಿತ್ವದ ಬಗ್ಗೆ ಗಮನ ಹರಿಸದಿರುವುದು, ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದರೆ,  ರೋಗಗಳು ಮತ್ತು ಸೋಂಕುಗಳಿಗೆ ಗುರಿಯಾಗುತ್ತಿರಬೇಕಾಗುತ್ತದೆ. ಇದಕ್ಕಾಗಿ ವೈಯಕ್ತಿಕ ನೈರ್ಮಲ್ಯ ಮತ್ತು ಆಹಾರ ಪದ್ಧತಿಯ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. 

ರೋಗನಿರೋಧಕ ಶಕ್ತಿ ವೃದ್ದಿ ಪಡಿಸಿಕೊಳ್ಳಿ : 
ರೋಗನಿರೋಧಕ ಶಕ್ತಿ (Immunity) ದುರ್ಬಲವಾಗಿದ್ದರೆ, ಹವಾಮಾನ ಬದಲಾಗುತ್ತಿದ್ದಂತೆಯೇ  ಆರೋಗ್ಯ  ಹದಗೆಡಬಹುದು. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ವೃದ್ದಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳಾದ ಕಿತ್ತಳೆ (Orange for immunity), ಅರಿಶಿನ ಮತ್ತು ತುಳಸಿ ಎಲೆಗಳನ್ನು ಸೇವಿಸಿ.  ಪ್ರತಿದಿನ ಅರಿಶಿನ ಮತ್ತು ತುಳಸಿ ಬೆರೆಸಿದ ಹಾಲು (Tulsi with milk) ಕುಡಿಯಿರಿ. ಅಲ್ಲದೆ, ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಒಣ ಹಣ್ಣುಗಳನ್ನು ಸೇವಿಸಿದರೆ ಕೂಡಾ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ :  Apples: ಸೇಬು ತಿನ್ನುವ ಮುನ್ನ ಸಿಪ್ಪೆ ತೆಗೆಯಬೇಕೇ ಅಥವಾ ಬೇಡವೇ? ಯಾವುದು ಹೆಚ್ಚು ಪ್ರಯೋಜನಕಾರಿ

ವೈಯಕ್ತಿಕ ನೈರ್ಮಲ್ಯವನ್ನುಕಾಪಾಡಿಕೊಳ್ಳಿ :
ರೋಗಗಳು ಮತ್ತು ಸೋಂಕುಗಳನ್ನು ತಡೆಗಟ್ಟಲು ಶುಚಿತ್ವಕ್ಕೆ ವಿಶೇಷ ಗಮನ ಕೊಡಿ. ನೀವು ಸಾರ್ವಜನಿಕ ಶೌಚಾಲಯಗಳನ್ನು ಬಳಸುವುದರಿಂದ, ರೋಗಗಳ ಅಪಾಯ ಎದುರಾಗುತ್ತದೆ.  ಅಲ್ಲದೆ ಸ್ವಚ್ಛ ಶೌಚಾಲಯಗಳನ್ನು ಮಾತ್ರ ಬಳಸಿ. ಇದಲ್ಲದೇ ಪ್ರತಿನಿತ್ಯ ಸ್ನಾನ ಮಾಡುವುದು (Bathing tips), ಬಟ್ಟೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಈ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗಿರುತ್ತದೆ. 

ಆಹಾರ ಸೇವಿಸುವ ಸರಿಯಾದ ಮಾರ್ಗ : 
ಅನಾರೋಗ್ಯಕರ ಜೀವನಶೈಲಿಯನ್ನು (Lifestyle) ಅನುಸರಿಸುತ್ತಿದ್ದರೆ, ಬಹಳ ಬೇಗನೆ ಅನಾರೋಗ್ಯಕ್ಕೆ ಒಳಗಾಗಬಹುದು. ರಾತ್ರಿ 8 ಗಂಟೆಯ ನಂತರ ಆಹಾರವನ್ನು ಸೇವಿಸಬೇಡಿ. ಬೆಳಿಗ್ಗೆ ಎದ್ದ 40 ನಿಮಿಷಗಳಲ್ಲಿ ಉಪಹಾರ ಮಾಡಿ ಮುಗಿಸಿ. ಒಂದೇ ಸಮಯದಲ್ಲಿ ಹೆಚ್ಚು ತಿನ್ನುವ ಬದಲು, ಸ್ವಲ್ಪ ಸ್ವಲ್ಪವೇ ಆಹಾರದಂತೆ  5 ಬಾರಿ ಸೇವಿಸಲು ಪ್ರಯತ್ನಿಸಿ. ದಿನವೂ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.  

ಇದನ್ನೂ ಓದಿ : Sore Throat: ಗಂಟಲ ಕಿರಿಕಿರಿ ಇದ್ದರೆ ಮರೆತೂ ಸಹ ಇವುಗಳನ್ನು ತಿನ್ನಬೇಡಿ

ಸರಿಯಾದ ಪ್ರಮಾಣದಲ್ಲಿ ವಿಟಮಿನ್ ತೆಗೆದುಕೊಳ್ಳಿ : 
ವಿಟಮಿನ್ ಮತ್ತು ಖನಿಜಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದಕ್ಕಾಗಿ ಸಾಕಷ್ಟು ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನಿರಿ. ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ 3 ಯನ್ನು ಸೇವಿಸಿ. ವೈದ್ಯರ ಸಲಹೆಯ ಮೇರೆಗೆ ಪೂರಕ ಆಹಾರಗಳನ್ನು ತೆಗೆದುಕೊಳ್ಳಬಹುದು.  ಯಾವತ್ತೂ,  ನೈಸರ್ಗಿಕ ಆಹಾರಗಳ ಮೂಲಕ ಅಗತ್ಯವಾದ ವಿಟಮಿನ್ ಗಳನ್ನು ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿರುತ್ತದೆ. ಅಲ್ಲದೆ, ಮದ್ಯಪಾನ ಮತ್ತು ಧೂಮಪಾನವನ್ನು ತಪ್ಪಿಸಬೇಕು.  

ಅಗತ್ಯ ತಪಾಸಣೆ ಮಾಡಿ :
ಕಾಲಕಾಲಕ್ಕೆ ತಪಾಸಣೆ ಮತ್ತು ಅಗತ್ಯ ಪರೀಕ್ಷೆಗಳನ್ನು ಮಾಡುತ್ತಿರಬೇಕು. 30 ವರ್ಷ ದಾಟಿದ ನಂತರ ಪುರುಷರು ಮಧುಮೇಹ ಪರೀಕ್ಷೆ (Diabetec test) ಮಾಡಿಸಿಕೊಳ್ಳಬೇಕು. ಇದಲ್ಲದೆ, ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ನಿಯಮಿತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಹೃದಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ (heart disease), ಹೃದ್ರೋಗ ತಜ್ಞರಿಗೆ ತೋರಿಸಿ. ವರ್ಷಕ್ಕೆ ಎರಡು ಬಾರಿ ದಂತವೈದ್ಯರನ್ನು ಭೇಟಿ ಮಾಡಿ. ಕಣ್ಣಿನ ತಪಾಸಣೆಯನ್ನೂ ನಿಯಮಿತವಾಗಿ ಮಾಡುತ್ತಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News