Bank Account Rules: ಈ ತಪ್ಪುಗಳಾಗಿದ್ದರೆ ಕ್ಲೋಸ್ ಆಗಲಿದೆ ನಿಮ್ಮ ಅಕೌಂಟ್

ಅನೇಕ ಬಾರಿ ಜನರು ಬ್ಯಾಂಕ್ ಖಾತೆ ತೆರೆದ ನಂತರ ಯಾವುದೇ ರೀತಿಯ ವಹಿವಾಟು ನಡೆಸುವುದಿಲ್ಲ. ಹೀಗೆ ಮಾಡುವುದರಿಂದ ಅವರ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ. 

Written by - Ranjitha R K | Last Updated : Jan 28, 2022, 03:40 PM IST
  • ಈಗ ಬ್ಯಾಂಕ್ ಖಾತೆ ತೆರೆಯುವುದು ಬಹಳ ಸುಲಭ
  • ಕೆಲವೊಮ್ಮೆ ಖಾತೆ ನಿಷ್ಕ್ರಿಯಗೊಳ್ಳುತ್ತದೆ
  • ಖಾತೆ ನಿಷ್ಕ್ರಿಯವಾಗಲು ಏನು ಕಾರಣ ತಿಳಿದಿರಲಿ
Bank Account Rules: ಈ ತಪ್ಪುಗಳಾಗಿದ್ದರೆ ಕ್ಲೋಸ್ ಆಗಲಿದೆ ನಿಮ್ಮ ಅಕೌಂಟ್  title=
ಈಗ ಬ್ಯಾಂಕ್ ಖಾತೆ ತೆರೆಯುವುದು ಬಹಳ ಸುಲಭ (file photo)

ನವದೆಹಲಿ : Bank Account Rules: ಡಿಜಿಟಲ್ ಇಂಡಿಯಾದ ಈ ಯುಗದಲ್ಲಿ ಈಗ ಕುಳಿತಲ್ಲಿಂದಲೇ ಬ್ಯಾಂಕ್ ಖಾತೆ ತೆರೆಯಬಹುದು. ಕೆಲವೊಮ್ಮೆ ಬ್ಯಾಂಕ್ ಕೆಲವು ಗ್ರಾಹಕರ ಖಾತೆಗಳನ್ನು ನಿಷ್ಕ್ರಿಯಗೊಳಿಸುತ್ತದೆ (Inactive account). ಬ್ಯಾಂಕ್ ಈ ರೀತಿಯ ಕ್ರಮಗಳನ್ನು ಕೈಗೊಳ್ಳಲು ಏನು ಕಾರಣ ಎಂದು ಅನೇಕ ಬಾರಿ ನಮಗೆ ತಿಳಿಯುವುದೇ ಇಲ್ಲ. 

ನಿಷ್ಕ್ರಿಯ ಬ್ಯಾಂಕ್ ಖಾತೆ:
ಅನೇಕ ಬಾರಿ ಜನರು ಬ್ಯಾಂಕ್ ಖಾತೆ (Bank account) ತೆರೆದ ನಂತರ ಯಾವುದೇ ರೀತಿಯ ವಹಿವಾಟು ನಡೆಸುವುದಿಲ್ಲ. ಹೀಗೆ ಮಾಡುವುದರಿಂದ ಅವರ ಬ್ಯಾಂಕ್ ಖಾತೆ ನಿಷ್ಕ್ರಿಯವಾಗುತ್ತದೆ. ಇಂದು ಡಿಜಿಟಲ್ ಮಾಧ್ಯಮದ (Digital media) ಮೂಲಕ ಬ್ಯಾಂಕ್ ಖಾತೆ ತೆರೆಯುವುದು ತುಂಬಾ ಸುಲಭವಾಗಿದೆ. ಇಡೀ ಪ್ರಕ್ರಿಯೆಯನ್ನು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿಯೇ (online) ಮಾಡಬಹುದು. 

ಇದನ್ನೂ ಓದಿ : PAN ಕಾರ್ಡ್‌ನಲ್ಲಿ ಹೆಸರನ್ನು ಬದಲಾಯಿಸುವ ಸುಲಭ ಪ್ರಕ್ರಿಯೆ

ಖಾತೆ ನಿಷ್ಕ್ರಿಯವಾಗಲು ಕಾರಣ :  
ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಾರ, ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ ಎರಡು ವರ್ಷಗಳವರೆಗೆ ಯಾವುದೇ ವಹಿವಾಟು ನಡೆಯದಿದ್ದರೆ, ಆ ಖಾತೆಯನ್ನು ನಿಷ್ಕ್ರಿಯ ಖಾತೆಯ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಒಮ್ಮೆ ನಿಷ್ಕ್ರಿಯ ಖಾತೆ (Inactive account) ಎಂದು ಬದಲಾದರೆ, ನಂತರ  ಹತ್ತು ವರ್ಷಗಳವರೆಗೆ ಖಾತೆ ನಿಷ್ಕ್ರಿಯವಾಗಿಯೇ ಇರುತ್ತದೆ. ಅಂದರೆ ನಂತರ ಈ ಖಾತೆ ಮೂಲಕ ಯಾವುದೇ ವಹಿವಾಟು ನಡೆಸುವುದು ಸಾಧ್ಯವಾಗುವುದಿಲ್ಲ. ಅಲ್ಲದೆ, ನಿಷ್ಕ್ರಿಯಗೊಂಡ  ಖಾತೆಯಲ್ಲಿ ಠೇವಣಿ ಮಾಡಿದ ಹಣ ಮತ್ತು ಅದರ ಬಡ್ಡಿಯನ್ನು ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲಾಗುತ್ತದೆ. ಆದರೆ ಈ ರೀತಿ ಮಾಡುವ ಮೊದಲು ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚನೆ ನೀಡುತ್ತದೆ. 

ಈ ವಿಷಯಗಳನ್ನು ನೆನಪಿನಲ್ಲಿಡಿ  :
 ಹೆಚ್ಚು ಬಳಸದ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ಅದನ್ನು ಕ್ಲೋಸ್ ಮಾಡಿ. ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿದ್ದರೆ, ಅವುಗಳನ್ನು ನಿರ್ವಹಿಸುವಾಗ ವಿಶೇಷ ಗಮನ ಕೊಡುವುದು ಅಗತ್ಯ. ನಿಮ್ಮ ಖಾತೆಯು ನಿಷ್ಕ್ರಿಯ ಖಾತೆಯಾಗಿ ಬದಲಾಗಿದ್ದರೆ, ತಕ್ಷಣವೇ ನಿಮ್ಮ ಹೋಮ್ ಬ್ರಾಂಚ್ ಅನ್ನು ಸಂಪರ್ಕಿಸಿ. 

ಇದನ್ನೂ ಓದಿ : Budget 2022 : ಬಜೆಟ್ ನಲ್ಲಿ ಪಿಂಚಣಿದಾರರಿಗೆ ಸಂತಸದ ಸುದ್ದಿ! ಭಾರೀ ಹೆಚ್ಚಾಗಬಹುದು ಪಿಂಚಣಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News