ನವದೆಹಲಿ : ತೆಲಂಗಾಣ ಮುಖ್ಯಮಂತ್ರಿ KCR ಸಂವಿಧಾನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಂವಿಧಾನವನ್ನು ಪುನಃ ಬರೆಯುವ ಅಗತ್ಯವಿದೆ ಎನ್ನುವ ಮೂಲಕ ಕೆ.ಸಿ.ಆರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೊಸ ಸಂವಿಧಾನ ತರುವ ಅವಶ್ಯಕತೆಯಿದೆ ಇದಕ್ಕಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಿಎಂ ಕೆ.ಸಿ.ರಾವ್ ಘೋಷಣೆ :
ದೇಶದಲ್ಲಿ ನಾಯಕತ್ವ ಬದಲಾವಣೆಯ ಅಗತ್ಯವಿದೆ ಎಂದು ತೆಲಂಗಾಣ ಸಿಎಂ ಕೆ.ಸಿ ಆರ್ (Telangana CM KCR) ಹೇಳಿದ್ದಾರೆ. ಈ ವಿಚಾರವಾಗಿ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ (Uddhav Thackeray) ಅವರೊಂದಿಗೆ ಮಾತನಾಡಲು ಮುಂಬೈಗೆ ತೆರಳುವುದಾಗಿ ಅವರು ಹೇಳಿದ್ದಾರೆ. ಅಲ್ಲದೆ, ನಾವು ಸಂವಿಧಾನವನ್ನು ಪುನಃ ಬರೆಯಬೇಕಾಗಿದೆ. ಹೊಸ ಚಿಂತನೆ, ಹೊಸ ಸಂವಿಧಾನ ತರಬೇಕು ಎಂದು ತೆಲಂಗಾಣ ಸಿಎಂ ಕೆ.ಸಿ ಆರ್ (Telangana CM KCR) ಹೇಳಿದ್ದಾರೆ.
ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.14 ರಷ್ಟು ಹೆಚ್ಚಳ!
ಟಿಆರ್ಎಸ್ ಸಂಸದರಿಂದ ರಾಷ್ಟ್ರಪತಿ ಭಾಷಣದ ಬಹಿಷ್ಕಾರ :
ಈ ಹಿಂದೆ ಸಿಎಂ ಕೆ.ಸಿ.ಆರ್ ನೇತೃತ್ವದ ಟಿಆರ್ ಎಸ್ (TCR) ಸಂಸದರು ಜಂಟಿ ಅಧಿವೇಶನದಲ್ಲಿ ಬಜೆಟ್ ಮಂಡನೆಗೂ (Budget 2022) ಮುನ್ನ ರಾಷ್ಟ್ರಪತಿ ಭಾಷಣವನ್ನು ಬಹಿಷ್ಕರಿಸಿದ್ದರು. ರಾಷ್ಟ್ರಪತಿ ಭಾಷಣಕ್ಕೂ ಮುನ್ನ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಆರ್ (Telangana CM KCR) ತಮ್ಮ ಪಕ್ಷದ ಸಂಸದರ ಜತೆ ಸಭೆ ನಡೆಸಿ ಕೇಂದ್ರ ಸರ್ಕಾರವನ್ನು ವಿರೋಧಿಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಹಣ ಬಿಡುಗಡೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಲಂಗಾಣಕ್ಕೆ ತಾರತಮ್ಯ ಮಾಡುತ್ತಿದೆ ಎಂದು ಟಿಆರ್ ಎಸ್ ಸಂಸದರು ಆರೋಪಿಸಿದ್ದರು.
ಬಜೆಟ್ ಅನ್ನು ಟೀಕಿಸಿದ ಕೆಸಿ ಆರ್ :
ತೆಲಂಗಾಣ ಸಿಎಂ ಕೆಸಿಆರ್ (KCR) ಅವರು ಮಂಗಳವಾರ ಮಂಡಿಸಿದ 2022 ರ ಬಜೆಟ್ ಬಗ್ಗೆ ಕೆಲವೊಂದು ಪ್ರಶ್ನೆಗಳನ್ನು ಎತ್ತಿದ್ದಾರೆ. ಕೇಂದ್ರ ಬಜೆಟ್ ಅನ್ನು ಶೂನ್ಯ ಬಜೆಟ್ ಎಂದು ಅವರು ಕರೆದಿದ್ದಾರೆ. ರೈತರು, ಬಡವರು, ಕೂಲಿ ವರ್ಗದವರಿಗೆ ಬಜೆಟ್ನಲ್ಲಿ ಏನನ್ನೂ ನೀಡಿಲ್ಲ ಎಂದವರು ಹೇಳಿದ್ದಾರೆ.
ಇದನ್ನೂ ಓದಿ : ಕೇಂದ್ರದ ಬಜೆಟ್ ಮಂಡನೆ ಪೂಜೆಗೆ ಹಣವಿಲ್ಲದೆ ಶಾಸ್ತ್ರಕ್ಕೆ ತೆಂಗಿನಕಾಯಿ ಒಡೆದಂತಾಗಿದೆ!: ಕಾಂಗ್ರೆಸ್ ಟೀಕೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.