ಬೆಂಗಳೂರು: ಅಸಮರ್ಥ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್(KPCC President DK Shivakumar) ಹತಾಶೆಗೆ ಬಿದ್ದಿದ್ದಾರೆ ಅಂತಾ ಬಿಜೆಪಿ ವ್ಯಂಗ್ಯವಾಗಿ ಟೀಕಿಸಿದೆ. ಹಿಜಾಬ್ ವಿವಾದ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ವ್ಯಂಗ್ಯವಾಡಿದೆ.
ಇದನ್ನೂ ಓದಿ: ಹಿಜಾಬ್ ಬೇಕಾ? ಕಿತಾಬ್ ಬೇಕಾ? ಕಾಂಗ್ರೆಸ್ ಹೇಳಲಿ : ಬಿಜೆಪಿ ಎಂಎಲ್ಸಿ ಎನ್ ರವಿಕುಮಾರ್ ಪ್ರಶ್ನೆ
ಹಿಜಾಬ್ ವಿಚಾರದ ಬಗ್ಗೆ ಚರ್ಚಿಸುವುದಕ್ಕೆ ವಿಪಕ್ಷ ನಾಯಕ @siddaramaiah ಹಿರಿಯ ನಾಯಕರ ಸಭೆ ಕರೆದಿದ್ದಾರೆ.
ಹಿಜಾಬ್ ಬಗ್ಗೆ ಯಾರೂ ಮಾತನಾಡಬಾರದು ಎಂಬ @DKShivakumar ಆದೇಶಕ್ಕೆ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ.
ಅಸಮರ್ಥ ರಾಜ್ಯಾಧ್ಯಕ್ಷ ಡಿಕೆಶಿ ಅವರೀಗ ಹತಾಶೆಗೆ ಬಿದ್ದಿದ್ದಾರೆ.#ಕಾಂಗ್ರೆಸ್ಕಲಹ
— BJP Karnataka (@BJP4Karnataka) February 15, 2022
#ಕಾಂಗ್ರೆಸ್ಕಲಹ ಹ್ಯಾಶ್ ಟ್ಯಾಗ್ ಬಳಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಹಿಜಾಬ್ ವಿಚಾರದ ಬಗ್ಗೆ ಚರ್ಚಿಸುವುದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹಿರಿಯ ನಾಯಕರ ಸಭೆ ಕರೆದಿದ್ದಾರೆ. ಹಿಜಾಬ್ ಬಗ್ಗೆ ಯಾರೂ ಮಾತನಾಡಬಾರದು ಎಂಬ ಡಿ.ಕೆ.ಶಿವಕುಮಾರ್ ಆದೇಶಕ್ಕೆ ಸಿದ್ದರಾಮಯ್ಯ ಉಲ್ಟಾ ಹೊಡೆದಿದ್ದಾರೆ. ಹೀಗಾಗಿ ಅಸಮರ್ಥ ರಾಜ್ಯಾಧ್ಯಕ್ಷ ಡಿಕೆಶಿ(DK Shivakumar)ಅವರೀಗ ಹತಾಶೆಗೆ ಬಿದ್ದಿದ್ದಾರೆ’ ಅಂತಾ ಕುಟುಕಿದೆ.
ಹಿಜಾಬ್ ಬಗ್ಗೆ ಮಾತನಾಡಬಾರದು ಎಂದು ಜಮೀರ್ ಅವರಿಗೆ ಡಿಕೆಶಿ ಕಟ್ಟಪ್ಪಣೆ ನೀಡಿದ್ದರು.
ಆದರೆ ಸಿದ್ದರಾಮಯ್ಯ ಅವರು ಪಕ್ಷದ ವೇದಿಕೆಯಲ್ಲೇ ಹಿಜಾಬ್ ಸಭೆ ಕರೆದಿದ್ದಾರೆ. ಅದಕ್ಕೆ ಜಮೀರ್ ಅವರನ್ನೂ ಆಹ್ವಾನಿಸಿದ್ದಾರೆ.
ಹಾಗಾದರೆ ಡಿಕೆಶಿ ಆದೇಶಕ್ಕೆ ಕಿಮ್ಮತ್ತಿಲ್ಲವೇ?#ಕಾಂಗ್ರೆಸ್ಕಲಹ
— BJP Karnataka (@BJP4Karnataka) February 15, 2022
‘ಹಿಜಾಬ್ ಬಗ್ಗೆ ಮಾತನಾಡಬಾರದು ಎಂದು ಜಮೀರ್ ಅಹ್ಮದ್(Zameer Ahmed) ಅವರಿಗೆ ಡಿಕೆಶಿ ಕಟ್ಟಪ್ಪಣೆ ನೀಡಿದ್ದರು. ಆದರೆ ಸಿದ್ದರಾಮಯ್ಯ ಅವರು ಪಕ್ಷದ ವೇದಿಕೆಯಲ್ಲೇ ಹಿಜಾಬ್(Karnataka Hijab Row) ಸಭೆ ಕರೆದಿದ್ದಾರೆ. ಅದಕ್ಕೆ ಜಮೀರ್ ಅವರನ್ನೂ ಆಹ್ವಾನಿಸಿದ್ದಾರೆ. ಹಾಗಾದರೆ ಡಿಕೆಶಿ ಆದೇಶಕ್ಕೆ ಕಿಮ್ಮತ್ತಿಲ್ಲವೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: Online Gambling Ban : ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಲು ಸರ್ಕಾರ ಚಿಂತನೆ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.