Clove Remedies: ಆರ್ಥಿಕ ಬಿಕ್ಕಟ್ಟನ್ನು ದೂರ ಮಾಡಿ ಯಶಸ್ಸನ್ನು ಪಡೆಯಲು ಇಲ್ಲಿದೆ ಲವಂಗದ ಟ್ರಿಕ್

Clove Remedies: ಲವಂಗ ಪರಿಹಾರಗಳು ಬಹಳ ಪರಿಣಾಮಕಾರಿ. ಈ ಸುಲಭ ಪರಿಹಾರಗಳು ಮನೆಯ ಋಣಾತ್ಮಕತೆಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಧನಾತ್ಮಕತೆ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

Written by - Zee Kannada News Desk | Last Updated : Feb 21, 2022, 11:34 AM IST
  • ಲವಂಗದ ಈ ಸುಲಭ ತಂತ್ರಗಳು ತುಂಬಾ ಪರಿಣಾಮಕಾರಿ
  • ನಕಾರಾತ್ಮಕತೆಯನ್ನು ತೊಡೆದುಹಾಕುತ್ತದೆ
  • ಮನೆಯನ್ನು ಸಂತೋಷ ಮತ್ತು ಸಮೃದ್ಧಿಯಿಂದ ತುಂಬುತ್ತದೆ
Clove Remedies: ಆರ್ಥಿಕ ಬಿಕ್ಕಟ್ಟನ್ನು ದೂರ ಮಾಡಿ ಯಶಸ್ಸನ್ನು ಪಡೆಯಲು ಇಲ್ಲಿದೆ ಲವಂಗದ ಟ್ರಿಕ್ title=
Lavanga parihara for money, success

Clove Remedies: ಲವಂಗವನ್ನು ದೈನಂದಿನ ಜೀವನದಲ್ಲ ಮಸಾಲಾ ಅಥವಾ ಮೌತ್ ಫ್ರೆಶ್ನರ್ ಆಗಿ ಬಳಸಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಪ್ರಯೋಜನಕಾರಿ. ಆದರೆ ಇದರ ಹೊರತಾಗಿ, ಲವಂಗವನ್ನು ಸನಾತನ ಧರ್ಮದಲ್ಲಿ ಪೂಜೆ ಮತ್ತು ವಿವಿಧ ಪರಿಹಾರಗಳು ಮತ್ತು ತಂತ್ರಗಳಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಸರಳವಾಗಿ ಕಾಣುವ ಲವಂಗ ಪರಿಹಾರಗಳು ತುಂಬಾ ಶಕ್ತಿಯುತವಾಗಿವೆ. ಲವಂಗದ ಪರಿಹಾರಗಳು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಹಣಕಾಸಿನ ಬಿಕ್ಕಟ್ಟಿನಿಂದ ಪರಿಹಾರ ನೀಡಿ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸುವಂತೆ ಮಾಡುತ್ತದೆ.

ಲವಂಗ ಪರಿಹಾರಗಳು:
ನಕಾರಾತ್ಮಕತೆಯನ್ನು ಹೋಗಲಾಡಿಸಲು ಪರಿಹಾರಗಳು: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನೀವು ಪ್ರತಿದಿನ ಬೆಳಿಗ್ಗೆ ಮನೆಯ ದೇವಸ್ಥಾನದಲ್ಲಿ ದೇವರ ಆರತಿ ಮಾಡುವಾಗ ದೀಪಕ್ಕೆ 2 ಲವಂಗವನ್ನು ಹಾಕಿ ಆರತಿ ಮಾಡಿದರೆ, ಅದು ಮನೆಯ ನಕಾರಾತ್ಮಕತೆಯನ್ನು (Negativity) ಕೊನೆಗೊಳಿಸುತ್ತದೆ. 

ಇದನ್ನೂ ಓದಿ- Shani Uday: ಶನಿಯ ಉದಯದಿಂದ ಈ ರಾಶಿಯವರಿಗೆ ಅಪಾರ ಸಂಪತ್ತು- ಯಶಸ್ಸು ಪ್ರಾಪ್ತಿ

ರೋಗ ನಿವಾರಣೆಗೆ ಮದ್ದು : ಮನೆಯ ಸದಸ್ಯರಿಗೆ ಪದೇ ಪದೇ ಅನಾರೋಗ್ಯ ಕಾಡುತ್ತಿದ್ದರೆ ಅಥವಾ ಮನೆಯಲ್ಲಿ ಪದೇ ಪದೇ ಜಗಳ ನಡೆಯುತ್ತಿದ್ದರೆ ಬಾಣಲೆಯ ಮೇಲೆ 6-7 ಲವಂಗವನ್ನು (Clove) ಸುಟ್ಟು ಮನೆಯ ಯಾವುದೇ ಮೂಲೆಯಲ್ಲಿ ಇಡಿ. ಪ್ರತಿ 2 ರಿಂದ 4 ದಿನಗಳಿಗೊಮ್ಮೆ ಈ ಪರಿಹಾರವನ್ನು ಮಾಡುವುದನ್ನು ಮುಂದುವರಿಸಿ. ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡುತ್ತೀರಿ. 

ಆರ್ಥಿಕ ಅಡಚಣೆ ನಿವಾರಣೆಗೆ ಪರಿಹಾರ: ಕಷ್ಟಪಟ್ಟು ಕೆಲಸ ಮಾಡಿದರೂ ಆರ್ಥಿಕ ಸ್ಥಿತಿ ಸುಧಾರಿಸದಿದ್ದರೆ 7 ಲವಂಗ ಮತ್ತು 7 ಕರಿಮೆಣಸನ್ನು ಮುಖದಿಂದ ಇಳಿ ತೆಗೆದು ಯಾರೂ ಓಡಾಡದ ಜಾಗದಲ್ಲಿ ಎಸೆಯಿರಿ. ಈ ಲವಂಗ ಮತ್ತು ಕರಿಮೆಣಸನ್ನು ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಎಸೆಯಿರಿ. ಅದರ ನಂತರ ಹಿಂತಿರುಗಿ ನೋಡಬೇಡಿ. ಕೆಲವೇ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಬದಲಾಗಲಿದೆ. 

ಇದನ್ನೂ ಓದಿ- Guru Asta: ಗುರು ಅಸ್ತ, ಈ ರಾಶಿಯವರಿಗೆ ಅದೃಷ್ಟ

ಕೆಲಸದಲ್ಲಿ ಅಡೆತಡೆ ನಿವಾರಿಸಲು ಪರಿಹಾರ: ಯಾವುದೇ ಕೆಲಸವು ಪದೇ ಪದೇ ಕೆಡುತ್ತಿದ್ದರೆ, ಲವಂಗ, ಏಲಕ್ಕಿ ಮತ್ತು ವೀಳ್ಯದೆಲೆಯನ್ನು ವೀಳ್ಯದೆಲೆಯಲ್ಲಿ ಸುತ್ತಿ ಗಣೇಶನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತದೆ ಮತ್ತು ನಿಮ್ಮ ಕೆಲಸ ಕಾರ್ಯಗಳು ಶೀಘ್ರದಲ್ಲೇ ಯಾವುದೇ ವಿಘ್ನವಿಲ್ಲದೆ ಪೂರ್ಣಗೊಳ್ಳುತ್ತವೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News