'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಾಗಿ ಪ್ರತಿ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ'

ಮಾರ್ಚ್ 4 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೆಸ್ಟ್ ಪಂದ್ಯದ ಮಹತ್ವದ ಕುರಿತಾಗಿ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಮಾತನಾಡಿದ್ದಾರೆ.

Last Updated : Feb 23, 2022, 09:24 PM IST
  • ಮಾರ್ಚ್ 4 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೆಸ್ಟ್ ಪಂದ್ಯದ ಮಹತ್ವದ ಕುರಿತಾಗಿ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಮಾತನಾಡಿದ್ದಾರೆ.
'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಾಗಿ ಪ್ರತಿ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ' title=
file photo

ನವದೆಹಲಿ: ಮಾರ್ಚ್ 4 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಟೆಸ್ಟ್ ಪಂದ್ಯದ ಮಹತ್ವದ ಕುರಿತಾಗಿ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್ ಮಾತನಾಡಿದ್ದಾರೆ.

ಇದನ್ನೂ ಓದಿ: "ಅಪ್ಪು ಹೋದಮೇಲೆ ಈ ಹಾಡು ಹಾಡಲು ನನಗೆ ಭಯವಾಗುತ್ತಿದೆ".. ಭಾವುಕರಾದ ಗಾಯಕ ವಿಜಯ್‌ ಪ್ರಕಾಶ್

ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್‌ಗೆ ಮುನ್ನ ಮಾತನಾಡಿದ ಮಯಾಂಕ್ ಅಗರ್ವಾಲ್ (Mayank Agarwal),'ನಾನು ತಂಡದ ಭಾಗವಾಗಲು ಮತ್ತು ಭಾರತೀಯ ಟೆಸ್ಟ್ ತಂಡದ ಭಾಗವಾಗಲು ಉತ್ಸುಕನಾಗಿದ್ದೇನೆ.ತಂಡದ ಯಶಸ್ಸಿಗೆ ಕೊಡುಗೆ ನೀಡಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ" ಎಂದು ಮಯಾಂಕ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತೀಯ ಕ್ರಿಕೆಟ್ ತಂಡದ ಮೂವರು ಭಾವಿ ನಾಯಕರನ್ನು ಹೆಸರಿಸಿದ ರೋಹಿತ್ ಶರ್ಮಾ...!

'ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಿಂದಾಗಿ ಪ್ರತಿ ಟೆಸ್ಟ್ ಸರಣಿಯು ಅತ್ಯಂತ ಮಹತ್ವದ್ದಾಗಿದೆ.ಪ್ರತಿಯೊಂದು ಟೆಸ್ಟ್‌ನಲ್ಲಿಯೂ ಅಂಕಗಳಿವೆ.ನಮ್ಮ ತಂಡದ ಸಾಮೂಹಿಕ ಚಿಂತನೆಯು ನಾವು ಆಡುವ ಪ್ರತಿಯೊಂದು ಪಂದ್ಯದಲ್ಲೂ ಗೆಲುವನ್ನು ಎತ್ತಿಕೊಳ್ಳುವುದು ಮತ್ತು ಎಲ್ಲದರಿಂದ ಗರಿಷ್ಠ ಅಂಕಗಳನ್ನು ಪಡೆಯಲು ಪ್ರಯತ್ನಿಸುವುದು" ಎಂದು 31 ವರ್ಷದ ಮಾಯಂಕ್ ಅಗರವಾಲ್ ಹೇಳಿದ್ದಾರೆ.

ಇದನ್ನೂ ಓದಿ: 'ಎಲ್ಲಾ ಮಾದರಿಯ ಕ್ರಿಕೆಟ್ ತಂಡಕ್ಕೆ ನಾಯಕನಾಗಿರುವುದು ಗೌರವದ ಸಂಗತಿ'

ಇದೇ ವೇಳೆ ಆರಂಭಿಕ ಆಟಗಾರನ ಮಹತ್ವದ ಕುರಿತಾಗಿ ವಿವರಿಸಿದ ಅವರು 'ಟೆಸ್ಟ್ ಕ್ರಿಕೆಟ್‌ನಲ್ಲಿ ಓಪನರ್‌ನ ಪಾತ್ರವು ಪ್ರಮುಖವಾಗಿದೆ ಏಕೆಂದರೆ, ಐದು ದಿನಗಳ ಪಂದ್ಯದಲ್ಲಿ, ಆರಂಭಿಕ ಆಟಗಾರರು ಆ ದಿನದ ಆಟವನ್ನು ನಿರ್ಧರಿಸುತ್ತಾರೆ, ಆ ಮೂಲಕ ಉಳಿದವರು ಅನುಸರಿಸುವಂತೆ ಮಾಡುತ್ತಾರೆ.ನಾನು ಅದನ್ನು ನನ್ನ ಜೀವನದುದ್ದಕ್ಕೂ ಮಾಡಿದ್ದೇನೆ.ನಾನು ಅದನ್ನು ನಿಜವಾಗಿಯೂ ಆನಂದಿಸುತ್ತೇನೆ.ಆದರೆ ಹಾಗಂದ ಮಾತ್ರಕ್ಕೆ ನಾನು ಬರಿ ಆರಂಭಿಕನಾಗಿಯೇ ಕಣಕ್ಕೆ ಇಳಿಯಬೇಕು ಎನ್ನುವುದಲ್ಲ, ತಂಡವು ಬಯಸಿದಲ್ಲಿ ನಾನು ಯಾವುದೇ ಸ್ಥಾನದಲ್ಲಿಯೂ ಬ್ಯಾಟ್ ಮಾಡಲು ಸಿದ್ಧ' ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

"ಶ್ರೀಲಂಕಾ ತಂಡವು ಕಳೆದ ಎರಡು ದಶಕಗಳಲ್ಲಿ, ವಿಶೇಷವಾಗಿ ಸುದೀರ್ಘವಾದ ಸ್ವರೂಪದಲ್ಲಿ ತನ್ನ ಸ್ಪಿನ್-ಬೌಲಿಂಗ್ ದಾಳಿಯಿಂದಲೇ ಗಮನಸೆಳೆದಿದೆ. ಇದು ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿದೆ.ಆದರೆ ಶ್ರೀಲಂಕಾ ಅವರ ಮೇಲೆ ಎಸೆಯಬಹುದಾದ ಯಾವುದೇ ಕರ್ವ್‌ಬಾಲ್‌ ನ್ನು ಎದುರಿಸಲು ತಾವು ಸಿದ್ಧನಾರಾಗಿರುವುದಾಗಿ ಮಾಯಂಕ್ ಅಗರವಾಲ್ ಹೇಳಿದ್ದಾರೆ.

 

Trending News