ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಗ್ರಹಗಳ ಬದಲಾವಣೆಯು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. (Planet transit effect) ಶನಿದೇವನು ಏಪ್ರಿಲ್ನಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಲಿದ್ದಾನೆ. ಏಪ್ರಿಲ್ 29 2022 ರಂದು, ಶನಿ ಸಂಕ್ರಮಣ ನಡೆಯಲಿದೆ. ಈ ಸಮಯದಲ್ಲಿ, ಕರ್ಮಫಲದಾತ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಸಾಗುತ್ತಾನೆ (Saturn transit).
ಮೀನ ರಾಶಿಯ ಜನರ ಮೇಲೆ ಶನಿಯ ರಾಶಿ ಬದಲಾವಣೆಯ ಪರಿಣಾಮ:
ಮೀನ ರಾಶಿಯವರಿಗೆ, ಶನಿಯು ನಿರ್ದಿಷ್ಟವಾಗಿ ಮಂಗಳಕರ ಮತ್ತು ಫಲಪ್ರದ ಗ್ರಹವೆಂದು ಪರಿಗಣಿಸಲಾಗುವುದಿಲ್ಲ. ಶನಿಯ ಖರ್ಚಿನ ಮನೆಯ ಮೂಲಕ ಸಾಗುವುದು ಕೆಲವು ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡಬಹುದು. ಹೀಗಿರುವಾಗ ಅನಗತ್ಯ ಖರ್ಚು ವೆಚ್ಚಗಳು ಉಂಟಾಗಬಹುದು (Shani Rashi Parivarthan). ಕಣ್ಣಿನ ಸಮಸ್ಯೆ ಅತಿಯಾಗಿ ಕಾಡಬಹುದು. ಯಾವ ಕೆಲಸಕ್ಕೆ ಕೈ ಹಾಕಿದರೂ ನಷ್ಟ ಬಾಧಿಸಬಹುದು.
ಇದನ್ನೂ ಓದಿ : Budh Gochar: 24 ಗಂಟೆಗಳಲ್ಲಿ ಬದಲಾಗಲಿದೆ ಈ ರಾಶಿಯವರ ಭವಿಷ್ಯ
ಕೌಟುಂಬಿಕ ಕಲಹಗಳು, ಕುಟುಂಬ ಸದಸ್ಯರ ನಡುವೆ ವೈಮನಸ್ಸು, ಹಠಾತ್ ಹಣ ಖರ್ಚು ಹೀಗೆ ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರಬಹುದು (Saturn transit effects). ರೋಗ, ಋಣ ಮತ್ತು ಶತ್ರು ಮನೆಯ ಮೇಲೆ ಶನಿಯ ದೃಷ್ಟಿ ಇರುವುದರಿಂದ ಶತ್ರುಗಳು ಜಯ ಸಾಧಿಸಬಹುದು. ವೃಶ್ಚಿಕ ರಾಶಿಯ ಮೇಲೂ ಶನಿಯ ದೃಷ್ಟಿ ಆಗುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ಅದೃಷ್ಟಕ್ಕೆ ಅಡ್ಡಿಯಾಗಬಹುದು. ತಂದೆಗೆ ಆರೋಗ್ಯ ಸಮಸ್ಯೆ ಕಾಡಲಿದ್ದು, ಅದಕ್ಕಾಗಿ ಹಣ ಖರ್ಚಾಗಬಹುದು.
ಕೆಲಸದಲ್ಲಿ ಅಡೆತಡೆ ಎದುರಾಗಿ, ಮಾನಸಿಕ ಆತಂಕ ಹೆಚ್ಚಾಗುವುದು. ಮನಸ್ಸಿನಲ್ಲಿ ಗೊಂದಲದ ಸ್ಥಿತಿ ಉಂಟಾಗಬಹುದು. ವಿದೇಶದಿಂದ ಹಣವನ್ನು ಪಡೆಯುವ ಸಾಧ್ಯತೆಯಿದೆ. ಜೊತೆಗೆ ವ್ಯಾಪಾರ ವಿಸ್ತರಣೆಯಲ್ಲಿ ಯಶಸ್ಸನ್ನು ಕಾಣಬಹುದು. ಆದರೂ ಶನಿಯ (Shani deva) ಕ್ರಿಯೆಯ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ಕೆಲವು ವಿಶೇಷ ಕ್ರಮಗಳನ್ನು ಅನುಸರಿಸುವ ಅವಶ್ಯಕತೆ ಇರುತ್ತದೆ.
ಇದನ್ನೂ ಓದಿ : Mahayog In Jyotish: ಜಾತಕದಲ್ಲಿನ ಈ 3 ಮಹಾಯೋಗಗಳು ಸಿರಿವಂತನನ್ನಾಗಿಸುತ್ತವೆ, ಆದರೆ ಈ ತಪ್ಪು ಮಾಡಬೇಡಿ
ಪರಿಹಾರ : ಮೂಲ ಜಾತಕದ ಪ್ರಕಾರ, ಶನಿ ಶಾಂತಿಗಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕು. ಬಡವರು ಮತ್ತು ದುರ್ಬಲರಿಗೆ ಸಹಾಯ ಮಾಡಿದರೆ ಶನಿಯ ಪ್ರಕೋಪವನ್ನು ಕಡಿಮೆ ಮಾಡಿಕೊಳ್ಳಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.