"ಕೆಜಿಎಫ್‌ನಲ್ಲಿ ಗರುಡನ ಕೊಲೆ ಬಳಿಕ ಮುಂದೇನಾಯ್ತು? ನೀವು ಓದತೀರಾ..?"

KGF2 Trailer: ಬಹು ನಿರೀಕ್ಷಿತ ಕೆಜಿಎಫ್‌ ಚಾಪ್ಟರ್‌ 2 ಟ್ರೇಲರ್‌ ರಿಲೀಸ್‌ ಆಗಿದೆ... ರಾಕಿ ಭಾಯ್ ಎಂಟ್ರಿ ಕೂಡ ಸಖತ್ತಾಗಿದೆ.. ಕೆಜಿಎಫ್‌ 2 ಟ್ರೇಲರ್‌ಗೆ ಅಭಿಮಾನಿಗಳ ರಿಸ್ಪಾನ್ಸ್‌ ಹೇಗಿದೆ?

Written by - Chetana Devarmani | Last Updated : Mar 28, 2022, 06:59 PM IST
  • "ರಕ್ತದಿಂದ ಬರೆದ ಕಥೆ ಇದು"
  • ಬಹು ನಿರೀಕ್ಷಿತ ಕೆಜಿಎಫ್‌ ಚಾಪ್ಟರ್‌ 2 ಟ್ರೇಲರ್‌ ರಿಲೀಸ್‌
  • ‘ಕೆಜಿಎಫ್​ ಚಾಪ್ಟರ್​ 2’ ಟ್ರೇಲರ್​ನಲ್ಲಿ ಅಬ್ಬರಿಸಿದ ಯಶ್
  • ಸಖತ್ತಾಗಿದೆ ರಾಕಿ ಭಾಯ್ ಎಂಟ್ರಿ
"ಕೆಜಿಎಫ್‌ನಲ್ಲಿ ಗರುಡನ ಕೊಲೆ ಬಳಿಕ ಮುಂದೇನಾಯ್ತು? ನೀವು ಓದತೀರಾ..?" title=
ಕೆಜಿಎಫ್‌

ಹಲವು ಸಮಯದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ಕೆಜಿಎಫ್‌ನಲ್ಲಿ (KGF) ಗರುಡನ ಕೊಲೆ ಬಳಿಕ ಮುಂದೇನಾಯ್ತು? ನೀವು ಓದತೀರಾ..? ಎಂದು ಮಾಳವಿಕಾ (Malavika) ಧ್ವನಿಯಿಂದ ಆರಂಭವಾಗುವ ಕೆಜಿಎಫ್‌2 ಟ್ರೇಲರ್‌ (KGF Chapter 2) ಎಲ್ಲೆಲ್ಲೂ ಸಖತ್‌ ಕ್ರೇಜ್‌ ಕ್ರಿಯೇಟ್‌ ಮಾಡಿದೆ. ನಿನ್ನೆ ಸಂಜೆ ರಿಲೀಸ್‌ ಆದ ಟ್ರೇಲರ್‌ ಎಲ್ಲ ದಾಖಲೆಗಳನ್ನು ಉಡೀಸ್‌ ಮಾಡಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: KGF verse:ಕೆಜಿಎಫ್‌2 ಟ್ರೇಲರ್ ನೋಡಿ ಥ್ರಿಲ್ ಆದವರಿಗೆ ಮತ್ತೊಂದು ಸರ್ಪ್ರೈಸ್!

ಕೆಜಿಎಫ್​ ಸಿನಿಮಾ ತೆರೆಕಂಡು ಮೂರು ವರ್ಷಗಳ ಬಳಿಕ ಕೆಜಿಎಫ್​ 2 (KGF2) ತೆರೆಗೆ ಬರುತ್ತಿದೆ. ಈ ಸಿನಿಮಾ ಹೇಗಿದೆ ಎನ್ನುವ ಝಲಕ್ ಟ್ರೇಲರ್​ನಲ್ಲಿ ಸಿಕ್ಕಿದೆ. ಶಿವರಾಜ್​ಕುಮಾರ್ (Shivarajkumar) ಅವರು ಟ್ರೇಲರ್ ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. 

ಕೆಜಿಎಫ್​ನ (KGF) ಅಧಿಪತಿ ಆಗಿದ್ದ ಗರುಡನನ್ನು ಹತ್ಯೆ ಮಾಡಿದ ಬಳಿಕ ಆ ಸಾಮ್ರಾಜ್ಯ ರಾಕಿ ಭಾಯ್‌ ಕೈ ಸೇರಿತು. ರಾಕಿ ನಟೋರಿಯಸ್​ ಗ್ಯಾಂಗ್​ಸ್ಟರ್​ ಹಾಗೂ ಉದ್ಯಮಿ ಎರಡೂ ಆಗಿರುತ್ತಾನೆ. ಕೆಜಿಎಫ್‌2 ಟ್ರೈಲರ್‌ನಲ್ಲಿ ಯಶ್ (Yash) ಪಾತ್ರ ಸಖತ್ ಆಗಿ ಮೂಡಿಬಂದಿದೆ. ಅಲ್ಲದೇ ಯಶ್‌ಗೆ ಎದುರಾಳಿಯಾಗಿ ಅಧೀರನ ಪಾತ್ರದಲ್ಲಿ ಸಂಜಯ್​ ದತ್​ ಮಿಂಚಿದ್ದಾರೆ.  ಟ್ರೈಲರ್​ನಲ್ಲಿ ರಾಕಿ ಹಾಗೂ ಅಧೀರನ ನಡುವೆ ದೊಡ್ಡ ಫೈಟ್​ ಇದೆ ಎನ್ನುವ ಸೂಚನೆ ಸಿಕ್ಕಿದೆ. 

ಕೆಜಿಎಫ್​ ಚಾಪ್ಟರ್​ 2 ಟ್ರೈಲರ್ (KGF2 Trailer) ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ. ‘ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ’ಎಂಬಿತ್ಯಾದಿ ಡೈಲಾಗ್​ಗಳು ಸಿನಿಮಾ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ.  

ಇದನ್ನೂ ಓದಿ: ಓ ಗಂಡಸರೇ, ನಿಮ್ಮ ಹೋಂ ಮಿನಿಸ್ಟರ್ ಜೊತೆ ಈ ಸವಾಲನ್ನು ಒಪ್ಪುವಿರಾ? ಫ್ಯಾನ್ಸ್‌ಗೆ ಉಪ್ಪಿ ಕೊಟ್ರು ಟಾಸ್ಕ್‌!

ಕೆಜಿಎಫ್​ 2 ಸಿನಿಮಾದಲ್ಲಿ ಯಶ್​ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ (Shrinidhi Shetty) ಕಾಣಿಸಿಕೊಂಡಿದ್ದಾರೆ. ಅಲ್ಲದೇ ಬಾಲಿವುಡ್​ನ ಖ್ಯಾತ ನಟಿ ರವೀನಾ ಟಂಡನ್​, ಬಹುಭಾಷಾ ನಟ ಪ್ರಕಾಶ್ ರಾಜ್​ (Prakash Raj) ಸೇರಿದಂತೆ ದೊಡ್ಡ ತಾರಾಗಣವೇ ಇದೆ. 'ಕೆಜಿಎಫ್ 2' ಟ್ರೈಲರ್ ಸಿಕ್ಕಾಪಟ್ಟೆ ಪವರ್‌ಫುಲ್ ಆಗಿದ್ದು, ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News