ಬೆಂಗಳೂರು : ಹಲಾಲ್ ಅನ್ನೋದು ಆರ್ಥಿಕ ಜಿಹಾದ್ ಎಂದು ಬಿಜೆಪಿ ರಾಷ್ಟೀಯ ಕಾರ್ಯದರ್ಶಿ ಸಿಟಿ ರವಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರು ಕೇಳಿದ ಹಲಾಲ್ ಮಾಂಸ್ ಕ್ಕೆ ಹಿಂದು ಸಂಘಟನೆಗಳು ಬಹಿಷ್ಕಾರ ಪ್ರಶ್ನೆಗೆ ಉತ್ತರಿಸಿದ ಸಿಟಿ ರವಿ(CT Ravi), ಆರ್ಥಿಕ ಜಿಹಾದ್ ಅಂದ್ರೆ ಮುಸ್ಲಿಂರು ಇನ್ನೊಬ್ಬರ ಜೊತೆ ವ್ಯಾಪಾರ ಮಾಡಬಾರದು ಎಂದು ಒಂದು ಎಕಾನಾಮಿಕ್ ಜಿಹಾದ್ ತರಹ ಉಪಯೋಗಿಸುತ್ತಾರೆ. ಹಲಾಲ್ ಮಾಂಸವನ್ನ ಉಪಯೋಗಿಸಬಾರದು ಅಂದ್ರೆ ತಪ್ಪೇನು. ಹಲಾಲ್ ಮಾಂಸ್ ಅವರ ದೇವರಿಗೆ ಒಪ್ಪಿಸಿದ್ದು ಅವರಿಗೆ ಪ್ರೀಯಾ ನಮ್ಮ ದೇವರಿಗೆ ಎಂಜಲು ಎಂದರು.
ಇದನ್ನೂ ಓದಿ : ಮುಸ್ಲಿಂ ಹಲಾಲ್ ವಿರುದ್ದ ಕಾಳಿ ಸ್ವಾಮಿ ಅಭಿಯಾನ, ಹಲಾಲ್ ಮಾಂಸ ಖರೀದಿಸದಂತೆ ಕರೆ
ಹಲಾಲ್ ಮಾಂಸ(Halal Meat) ಉಪಯೋಗಿಸಿ ಅಂತ ಹೇಗೆ ರೈಟ್ಸ್ ಇದೆಯೋ ಹಾಗೆ , ಅದನ್ನ ಬಹಿಷ್ಕಾರಿಸಿ ಅಂತ ಹೇಳುವ ರೈಟ್ಸ್ ನಮ್ಗೆ ಇದೆ.ಹಲಾಲ್ ಅಂದ್ರೆ ಮುಸ್ಲಿಂರ ಧಾರ್ಮಿಕ ಕ್ರಿಯೆ, ಅದು ಅವರಿಗೆ ಪ್ರಿಯವಾಗಿರುತ್ತೆ. ಅದನ್ನ ಎಲ್ಲರೂ ಒಪ್ಪಿಕೊಳ್ಳಬೇಕು ಅಂತೆನಾದ್ರು ಇದೆಯಾ. ಸಾಮರಸ್ಯವನ್ನು ಹೇರುವುದಕ್ಕೆ ಬರೋದಿಲ್ಲ, ಹಾಗಂತ ಸಾಮರಸ್ಯ ಒನ್ ವೇ ಅಲ್ಲ ಅದು ಟೂ ವೇ ಎಂದು ಹೇಳಿದರು.
ಹಲಾಲ್ ಇಲ್ಲದ ಮಾಂಸ ಅವರು ತಿನ್ನೋದಕ್ಕೆ ರೆಡಿಯಾದ್ರೆ ಹಲಾಲ್ ಆಗಿರುವ ಮಾಂಸ ಇವರು ತಿನ್ನುತ್ತಾರೆ, ಈ ಹಿಂದೆ ಇರುವಂತ ನಿಯಮಗಳನ್ನೆಲ್ಲ ಈಗಲೂ ಒಪ್ಪಿಕೊಳ್ಳಲು ಆಗುತ್ತಾ? ಒಬ್ಬ ಹಿಂದು ಮಟನ್ ಸ್ಟಾಲ್ ಇಟ್ಟರೆ ಮುಸ್ಲಿಂರು(Islam) ಬಂದು ತಗೋತಾರಾ? ಮುಸ್ಲಿಂರ ಅಂಗಡಿಯಲ್ಲಿ ತಗೋಬೇಕು ಅಂತ ನೀವ್ ಯಾಕೆ ಹೇಳ್ತೀರಾ? ಹೇಳೋಕೆ ಏನ್ ರೈಟ್ಸ್ ಇದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : #LeopardDogFight : ಚಿರತೆಯೊಂದಿಗೆ ಕಾದಾಡಿ ಪ್ರಾಣ ಉಳಿಸಿಕೊಂಡ ಸಾಕು ನಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.