ಕೊರೊನಾ ನಾಲ್ಕನೇ ಅಲೆ ಹಾವಳಿ, ಈ ನಗರದಲ್ಲಿ ಕಠಿಣ ಲಾಕ್ ಡೌನ್..!

ಓಮಿಕ್ರಾನ್ ಬಿಎ.2 ನ ಉಪ-ರೂಪಾಂತರವು ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಪ್ರಸರಿಸುತ್ತಿರುವುದು ಈಗ ಆತಂಕ ಸೃಷ್ಟಿಸಿದೆ.

Written by - Zee Kannada News Desk | Last Updated : Mar 30, 2022, 04:40 PM IST
  • ಈಗ ಕೊರೊನಾ ಹರಡುವುದನ್ನು ತಡೆಯಲು ಚೀನಾ ತನ್ನ ವಾಣಿಜ್ಯ ರಾಜಧಾನಿ ಶಾಂಘೈ ಅನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ.
  • ಚೀನಾ ದೇಶದಲ್ಲಿ ಎರಡು ಹಂತಗಳಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ, ಇದು ಮೊದಲ ಹಂತವಾಗಿದೆ.
 ಕೊರೊನಾ ನಾಲ್ಕನೇ ಅಲೆ ಹಾವಳಿ, ಈ ನಗರದಲ್ಲಿ ಕಠಿಣ ಲಾಕ್ ಡೌನ್..! title=
file photo

ನವದೆಹಲಿ: ಓಮಿಕ್ರಾನ್ ಬಿಎ.2 ನ ಉಪ-ರೂಪಾಂತರವು ಜಗತ್ತಿನಾದ್ಯಂತ ಅನೇಕ ದೇಶಗಳಲ್ಲಿ ಪ್ರಸರಿಸುತ್ತಿರುವುದು ಈಗ ಆತಂಕ ಸೃಷ್ಟಿಸಿದೆ.

ಈಗ ಚೀನಾದಲ್ಲಿ ನಾಲ್ಕನೇ ಅಲೆಯ ಭಾಗವಾಗಿ ಕೊರೊನಾ ಪ್ರಕರಣ ಹೆಚ್ಚುತ್ತಿವೆ ಎನ್ನಲಾಗಿದೆ.ಕಳೆದ 2 ವರ್ಷಗಳಲ್ಲಿ ಚೀನಾ ವೈರಸ್ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಮತ್ತು ಇದೀಗ ಚೀನಾದಲ್ಲಿ ಸೋಂಕುಗಳು ವೇಗವಾಗಿ ಹರಡಲು ಪ್ರಾರಂಭಿಸಿವೆ.ಹೆಚ್ಚುತ್ತಿರುವ ಪ್ರಕರಣಗಳನ್ನು ಗಮನಿಸಿದರೆ,ಚೀನಾ ಕಟ್ಟುನಿಟ್ಟಾದ ಲಾಕ್‌ಡೌನ್ ಕ್ರಮಗಳನ್ನು ವಿಧಿಸಿದೆ, ಇದರಿಂದಾಗಿ ಲಕ್ಷಾಂತರ ಜನರು ತಮ್ಮ ಮನೆಯೊಳಗೆ ಇರುವಂತೆ ಕೋರಲಾಗಿದೆ.

ಇದನ್ನೂ ಓದಿ: RCB New Captain: ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ನೂತನ ನಾಯಕ..?

ಈಗ ಕೊರೊನಾ ಹರಡುವುದನ್ನು ತಡೆಯಲು ಚೀನಾ ತನ್ನ ವಾಣಿಜ್ಯ ರಾಜಧಾನಿ ಶಾಂಘೈ ಅನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ.ಚೀನಾ ದೇಶದಲ್ಲಿ ಎರಡು ಹಂತಗಳಲ್ಲಿ ನಿರ್ಬಂಧಗಳನ್ನು ಹೇರಲಾಗುತ್ತಿದೆ, ಇದು ಮೊದಲ ಹಂತವಾಗಿದೆ. ಶಾಂಘೈ ನಗರದಲ್ಲಿ 4381 ಲಕ್ಷಣ ರಹಿತ ಪ್ರಕರಣಗಳು ವರದಿಯಾಗಿದ್ದು, ರೋಗಲಕ್ಷಣಗಳೊಂದಿಗೆ 96 ಪ್ರಕರಣಗಳು ವರದಿಯಾಗಿವೆ.

ಇದನ್ನೂ ಓದಿ: IPL 2022: ಭಾರತೀಯ ಸಂಪ್ರದಾಯದ ಪ್ರಕಾರ ಮದುವೆಯಾದ ಗ್ಲೆನ್ ಮ್ಯಾಕ್ಸವೆಲ್..!

ರಸ್ತೆಗಳಲ್ಲಿ ಸಂಚಾರ ಸಂಪೂರ್ಣ ಸೀಮಿತವಾಗಿದೆ.ಅನೇಕ ರಸ್ತೆಗಳು ನಿರ್ಜನ ಪ್ರದೇಶಗಳಾಗಿ ಪರಿವರ್ತನೆಯಾಗಿವೆ.ಇನ್ನೊಂದೆಡೆಗೆ ಬಿಎ.2 ಗೆ ಲಾಕ್‌ಡೌನ್‌ ಅನಿವಾರ್ಯವಲ್ಲ ಎಂದು ಪ್ರಪಂಚದ ಅನುಭವ ತೋರಿಸುತ್ತದೆ ಎಂದು ವಿದೇಶಿ ತಜ್ಞರು ಹೇಳುತ್ತಾರೆ.ಇದರ ಹೊರತಾಗಿಯೂ ಚೀನಾ ಶಾಂಘೈ ನಗರವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದೆ.ಅನುಮತಿ ಪಡೆದ ವಾಹನಗಳಿಗೆ ಮಾತ್ರ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಮಾರ್ಚ್ 28 ರಂದು ಇದ್ದಕ್ಕಿದ್ದಂತೆ ಲಾಕ್‌ಡೌನ್ ಘೋಷಿಸಿದಾಗ, ಒಂದು ಹಾಡು ಜನರಲ್ಲಿ ಬಹಳ ಜನಪ್ರಿಯವಾಯಿತು.ಈ ಹಾಡಿನ ಸಾರವೇನೆಂದರೆ ಮೊದಲು ಕಿರಾಣಿ ಅಂಗಡಿಗೆ ಹೋಗಿ ನಂತರ ಕೋವಿಡ್ ಪರೀಕ್ಷೆಯನ್ನು ಮಾಡಿ. ಈ ಹಾಡು ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಗ್ಲೆನ್ ಮ್ಯಾಕ್ಸ್ ವೆಲ್ 

ಲಾಕ್‌ಡೌನ್ ಎಷ್ಟು ಕಟ್ಟುನಿಟ್ಟಾಗಿದೆ ಎಂದರೆ ಚೀನಾದ ವಾಲ್ ಸ್ಟ್ರೀಟ್ ಎಂದು ಕರೆಯಲ್ಪಡುವ ಲುಜಿಯಾಜುಯಿ ನಗರದಲ್ಲಿ, ಉದ್ಯೋಗಿಗಳು ತಮ್ಮ ಕಚೇರಿಗಳಲ್ಲಿ ಶಿಫ್ಟ್ ಹಾಸಿಗೆಗಳನ್ನು ಹಾಕಿದ್ದಾರೆ.ಕಳೆದ ವರ್ಷ ಇಲ್ಲಿಂದ USD 292 ಟ್ರಿಲಿಯನ್ ವ್ಯವಹಾರ ನಡೆದಿದೆ. ಹೀಗಾಗಿ ಚೀನಾದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ವರದಿಯ ಪ್ರಕಾರ, ಚೀನಾದಲ್ಲಿ ಕೋವಿಡ್ -19 ಲಾಕ್‌ಡೌನ್‌ನಿಂದ ತಿಂಗಳಿಗೆ 46 ಶತಕೋಟಿ ಡಾಲರ್ ನಷ್ಟು ನಷ್ಟವಾಗಿದೆ.ಇದು ಚೀನಾದ ಜಿಡಿಪಿಯ ಸುಮಾರು 3.1% ರಷ್ಟು ಎನ್ನಲಾಗಿದೆ.

Trending News