ಭಾರತದ ಅತ್ಯಂತ ಜನಪ್ರಿಯ ಬಾಲಿವುಡ್ ದಂಪತಿಗಳಲ್ಲಿ (Bollywood Couple) ಒಬ್ಬರು ದೀಪಿಕಾ ಮತ್ತು ರಣವೀರ್. ಡೇಟಿಂಗ್ ಆರಂಭಿಸಿದ್ದ ದಿನಗಳಿಂದಲೂ ಸಾಕಷ್ಟು ಸುದ್ದಿಯಲ್ಲಿದ್ದರು ಈ ಕ್ಯೂಟ್ ಕಪಲ್.
ಇದನ್ನೂ ಓದಿ: KGF verse:ಕೆಜಿಎಫ್ ತಂಡದಿಂದ ಮತ್ತೊಂದು ಸರ್ಪ್ರೈಸ್! ನೀವು ಹೋಗಬಹುದು ನರಾಚಿ ಲೋಕಕ್ಕೆ..
ಪ್ರತಿಯೊಬ್ಬರೂ ದೀಪಿಕಾ (Deepika) ಮತ್ತು ರಣವೀರ್ ಸಿಂಗ್ ಯಾವಾಗ ಮದುವೆ ಆಗುತ್ತಾರೆ ಎಂದು ಕಾದು ಕುಳಿತಿದ್ದರು. ಕೊನೆಗೂ 2018ರಲ್ಲಿ ಈ ಜೋಡಿ ಸಪ್ತಪದಿ ತುಳಿದರು. ಹಲವು ಸಂದರ್ಶನಗಳಲ್ಲಿ ರಣವೀರ್ ಮತ್ತು ದೀಪಿಕಾ ಮದುವೆಗೂ ಮುನ್ನ ಮತ್ತು ಮದುವೆಯ ನಂತರ ತಮ್ಮ ಜೀವನ ಹೇಗಿದೆ ಎಂದು ಹೇಳಿಕೊಂಡಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಪತಿ ರಣವೀರ್ (Ranaveer Singh) ತಮ್ಮನ್ನು ಯಾವ ನಿಕ್ನೇಮ್ನಿಂದ ಕರೆಯುತ್ತಾರೆ ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.
ಅದೇ ಫಟ್ ಫಟ್..! ಅಚ್ಚರಿ ಎನಿಸಿದರೂ ಇದು ಸತ್ಯ. ರಣ್ವೀರ್ ಸಿಂಗ್ ತಮ್ಮ ಪತ್ನಿಗೆ ಇಟ್ಟಿರುವ ಅಡ್ಡ ಹೆಸರು ಫಟ್ ಫಟ್.
ಇದನ್ನೂ ಓದಿ: ಹೊಸಬರ ಮ್ಯೂಸಿಕಲ್ 'ಸಂಭ್ರಮ'.. ಯೂತ್ಫುಲ್ ಎಂಟರ್ಟೈನರ್ಗೆ ಶ್ರೀ ಸಂಭ್ರಮ ಸಾರಥ್ಯ
ಯಾಕೆಂದರೆ ದೀಪಿಕಾ ಅವರಿಗೆ, ಒಂದೇ ಜಾಗದಲ್ಲಿ ಸುಮ್ಮನೇ ಕುಳಿತಿರುವುದು ಇಷ್ಟವಿಲ್ಲವಂತೆ. ಆದ ಕಾರಣ ಅವರು ನಿರಂತರವಾಗಿ ಏನಾದರೂ ಮಾಡುತ್ತಲೇ ಇರುತ್ತಾರಂತೆ. ಪತ್ನಿಯ ಈ ಗುಣವನ್ನು ಕಂಡು ರಣವೀರ್ ಫಟ್ ಫಟ್ ಎಂಬ ಅಡ್ಡ ಹೆಸರನ್ನು ಇಟ್ಟಿದ್ದಾರಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.