Dietary Guidelines: ಆಹಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳಲ್ಲಿ ಬದಲಾವಣೆ

Dietary Guidelines For Indians: ಈಗ ಪ್ಯಾಕ್ ಮಾಡಿದ ಆಹಾರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮೊದಲಿಗಿಂತ ಉತ್ತಮ ರೀತಿಯಲ್ಲಿ ನೀಡಲಾಗುವುದು. ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾದ ಮಾಹಿತಿಯನ್ನು ಪ್ಯಾಕಿಂಗ್‌ನಲ್ಲಿರುವ ಲೇಬಲ್ ಮೂಲಕ ನೀಡಲಾಗುತ್ತದೆ.

Written by - Yashaswini V | Last Updated : Apr 4, 2022, 09:02 AM IST
  • ಭಾರತೀಯರಿಗೆ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಉತ್ತೇಜಿಸಲು ಆಹಾರ ಮಾರ್ಗಸೂಚಿಗಳಲ್ಲಿ ಪರಿಷ್ಕರಣೆ
  • ಇತ್ತೀಚೆಗೆ ಪರಿಷ್ಕೃತ ಆಹಾರ ಸಂಯೋಜನೆಯ ಡೇಟಾ ಮತ್ತು ಭಾರತೀಯರಿಗೆ ಪರಿಷ್ಕೃತ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿ ಪರಿಷ್ಕರಣೆ
  • ಶಿಫಾರಸುಗಳು ಆರೋಗ್ಯಕರ ಜೀವನಕ್ಕೆ ಅಗತ್ಯವಾದ ಪೋಷಕಾಂಶಗಳ ಪ್ರಮಾಣಕ್ಕೆ ಸಂಬಂಧಿಸಿವೆ ಎನ್ನಲಾಗಿದೆ
Dietary Guidelines: ಆಹಾರಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳಲ್ಲಿ ಬದಲಾವಣೆ title=
Dietary Guidelines

Dietary Guidelines For Indians: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ (NIN) 10 ವರ್ಷಗಳ ಹಿಂದೆ 2011 ರಲ್ಲಿ ಭಾರತೀಯರಿಗೆ ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯನ್ನು ಉತ್ತೇಜಿಸಲು ನೀಡಲಾದ ಆಹಾರ ಮಾರ್ಗಸೂಚಿಗಳನ್ನು ಪರಿಷ್ಕರಿಸುತ್ತಿದೆ.

ಅಸ್ತಿತ್ವದಲ್ಲಿರುವ 15 ಮಾರ್ಗಸೂಚಿಗಳ ಸಂಪೂರ್ಣ ವಿಮರ್ಶೆ ಮತ್ತು ಆರೋಗ್ಯಕರ ಆಹಾರ ಆಯ್ಕೆಗಳನ್ನು ಮಾಡಲು ಆಹಾರ ಲೇಬಲ್ ಮಾಹಿತಿಯನ್ನು ಬಳಸುವ ಬಗ್ಗೆ ಪ್ರಮುಖ ಸೇರ್ಪಡೆ ಇರುತ್ತದೆ. ಐಸಿಎಂಆರ್ (ICMR) -ಎನ್‌ಐಎನ್ (NIN) ನಿರ್ದೇಶಕಿ ಹೇಮಲತಾ ಆರ್, ದೇಶಾದ್ಯಂತ ಸಾಮಾನ್ಯವಾಗಿ ಸೇವಿಸುವ ಆಹಾರಗಳ ಇತ್ತೀಚೆಗೆ ಪರಿಷ್ಕೃತ ಆಹಾರ ಸಂಯೋಜನೆಯ ಡೇಟಾವನ್ನು ಮತ್ತು ಭಾರತೀಯರಿಗೆ ಪರಿಷ್ಕೃತ ಪೌಷ್ಠಿಕಾಂಶದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳನ್ನು ಪರಿಷ್ಕರಿಸಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ- ಸಿಹಿ ಸುದ್ದಿ! ಸರ್ಕಾರಿ ನೌಕರರಿಗೆ ಹೆಚ್ಚಿನ ವೇತನ ಶ್ರೇಣಿ; ಶೇ 15% ವರೆಗೆ ಸಂಬಳ ಹೆಚ್ಚಳ

ಎನ್‌ಐಎನ್‌ನ ಹಿರಿಯ ವಿಜ್ಞಾನಿ ಡಾ.ಸುಬ್ಬರಾವ್ ಎಂ ಗೌರವ್ ಗುಪ್ತ ಮಾತನಾಡಿ, 16 ನೇ ಮಾರ್ಗಸೂಚಿ ಹೀಗಿರುತ್ತದೆ: ಆರೋಗ್ಯಕರ ಆಹಾರ (Healthy Food) ಆಯ್ಕೆಗಳನ್ನು ಮಾಡಲು ಮತ್ತು ಆರೋಗ್ಯಕ್ಕೆ ಹಾನಿಕಾರಕ ಆಹಾರಗಳಿಂದ ದೂರವಿರಲು ಆಹಾರ ಲೇಬಲ್‌ಗಳ ಮಾಹಿತಿಯನ್ನು ಬಳಸಿ. ಪ್ಯಾಕೇಜ್ ಮಾಡಿದ ಆಹಾರವನ್ನು ಖರೀದಿಸುವಾಗ ಆಹಾರ ಲೇಬಲ್ ಮಾಹಿತಿಯನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಇದು ಸುಲಭವಾಗುತ್ತದೆ ಎಂದರು.

ಇದನ್ನೂ ಓದಿ- Nepal PM India Visit: ನೇಪಾಳದಲ್ಲಿ RuPay ಬಿಡುಗಡೆ ಮಾಡಿದ PM Modi, ಉಭಯ ದೇಶಗಳ ನಡುವೆ ಮಹತ್ವ ಒಪ್ಪಂದಗಳ ಮೇಲೆ ಹಸ್ತಾಕ್ಷರ

ಹೆಚ್ಚುವರಿಯಾಗಿ, ಹಿಂದಿನ ಮಾರ್ಗಸೂಚಿಗಳು ಪೋಷಕಾಂಶಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒಳಗೊಂಡಿವೆ ಮತ್ತು ಶಿಫಾರಸುಗಳು ಆರೋಗ್ಯಕರ ಜೀವನಕ್ಕೆ ಅಗತ್ಯವಾದ ಪೋಷಕಾಂಶಗಳ ಪ್ರಮಾಣಕ್ಕೆ ಸಂಬಂಧಿಸಿವೆ. ಹೊಸ ಮಾರ್ಗಸೂಚಿಗಳು ವಿವಿಧ ವಯೋಮಾನದವರು, ವಿಭಿನ್ನ ಲಿಂಗಗಳು ಮತ್ತು ವಿಭಿನ್ನ ಚಟುವಟಿಕೆಯ ಹಂತಗಳ ಜನರ ದೈನಂದಿನ ಆಹಾರದಲ್ಲಿ ಸೇರಿಸಬೇಕಾದ ವಿವಿಧ ಆಹಾರ ಗುಂಪುಗಳ ಸ್ಪಷ್ಟ ಮಾಹಿತಿಯೊಂದಿಗೆ ಆಹಾರ ಆಧಾರಿತ ವಿಧಾನವನ್ನು ಒದಗಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News