ಬೆಂಗಳೂರು: ‘ಕೆ.ಜಿ.ಎಫ್: 2’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ, ಅಷ್ಟೇ ಅಲ್ಲದೆ ದಿನದಿಂದ ದಿನಕ್ಕೆ ಚಿತ್ರದ ಮೇಲಿನ ಕ್ರೇಜ್ ಕೂಡ ದೊಡ್ದದಾಗುತ್ತಿದೆ.
ಬಾಹುಬಲಿ ಮತ್ತು ಸ್ಪೈಡರ್ ಮ್ಯಾನ್ನಂತಹ ಚಿತ್ರಗಳ ಈ ಹಿಂದಿನ ಮುಂಗಡ ಬುಕ್ಕಿಂಗ್ ದಾಖಲೆಯನ್ನು ಕನ್ನಡದ ಈ ಚಿತ್ರ ಹಿಂದಿಕ್ಕುವತ್ತ ಸಾಗುತ್ತಿದೆ.ಈಗಾಗಲೇ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಿದ ಟ್ರೇಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.ಚಿತ್ರದ ಪ್ರಚಾರಕ್ಕಾಗಿ ಕೆಜಿಎಫ್ ತಂಡವು ಈಗ ದೇಶಾದ್ಯಂತ ಸಂಚರಿಸುತ್ತಿದೆ.
ಇದನ್ನೂ ಓದಿ: ನಾನು ಪ್ರಭಾಸ್ ಅಲ್ಲ, ಯಶ್..! ಅಭಿಮಾನಿ ಪ್ರಶ್ನೆಗೆ ಯಶ್ ಖಡಕ್ ಉತ್ತರ..!
ರಾಕಿ ಭಾಯ್ ಮತ್ತು ಅಧೀರನ ಸಮರವನ್ನು ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.ಕೊರೊನಾ ನಂತರ ಬಿಡುಗಡೆಯಾಗುತ್ತಿರುವ ಅತಿ ದೊಡ್ಡ ಚಲನಚಿತ್ರಗಳಲ್ಲಿ ಒಂದಾಗಿರುವ ಈ ಸಿನಿಮಾ ಹೊಸ ಅಲೆಯನ್ನೇ ಸೃಷ್ಟಿಸಿದೆ.
ಈಗ ಕೆಜಿಎಫ್ 2 ಮುಂಗಡ ಬುಕ್ಕಿಂಗ್ ನಲ್ಲಿ ಸೃಷ್ಟಿಸಿರುವ ಹೊಸ ಅಲೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿನೆಪೊಲಿಸ್ ಇಂಡಿಯಾ, ಸಿಇಒ ದೇವಾಂಗ್ ಸಂಪತ್ "ಕೆಜಿಎಫ್ ಮತ್ತೊಮ್ಮೆ ದೇಶವನ್ನು ಆಕ್ರಮಿಸಲು ಸಿದ್ಧವಾಗಿದೆ ಎಂದು ತೋರುತ್ತಿದೆ, ಚಲನಚಿತ್ರದ ಪ್ರಗತಿಯು ಒಂದು ಮಹಾನ್ ಆರಂಭಿಕ ದಿನವನ್ನು ಸ್ಪಷ್ಟವಾಗಿ ಸೂಚಿಸುತ್ತದೆ, ಮುಂಗಡ ಬುಕ್ಕಿಂಗ್ ಆರಂಭಿಸಿದ ಮೊದಲ ಚಿತ್ರಮಂದಿರವಾಗಿರುವ ಸಿನಿಪೊಲಿಸ್,ಈಗ ಚಿತ್ರವೂ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಲಿದೆ" ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: 'ಕೆಜಿಎಫ್-2' ಬಗ್ಗೆ ಹಗುರವಾಗಿ ಮಾತನಾಡಿದ್ರಾ ಬಾಲಿವುಡ್ ನಟ ಶಾಹಿದ್ ಕಪೂರ್..!
ಕೆಜಿಎಫ್ 2 ಚಿತ್ರವು ಈಗ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಪ್ರಿಲ್ 14, 2022 ರಂದು ರಾಷ್ಟ್ರಾದ್ಯಂತ ಬಿಡುಗಡೆಯಾಗುತ್ತಿದೆ, ಈ ಚಿತ್ರವನ್ನು ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ್ದರೆ, ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಉದಯೋನ್ಮುಖ ಪ್ಯಾನ್-ಇಂಡಿಯಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಹೊಂಬಾಳೆ ಫಿಲ್ಮ್ಸ್ ಮುಂದಿನ ಎರಡು ವರ್ಷಗಳಲ್ಲಿ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಸಾಲಾರ್' ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ಕೆಲವು ದೊಡ್ಡ ಚಲನಚಿತ್ರಗಳನ್ನು ಪ್ರದರ್ಶಿಸಲು ಸಿದ್ಧವಾಗಿದೆ.
ರಿತೇಶ್ ಸಿಧ್ವಾನಿ ಮತ್ತು ಫರ್ಹಾನ್ ಅಖ್ತರ್ ಅವರ ಎಕ್ಸೆಲ್ ಎಂಟರ್ಟೈನ್ಮೆಂಟ್ ಮತ್ತು ಎಎ ಫಿಲ್ಮ್ಸ್ ಮೂಲಕ ಚಿತ್ರವನ್ನು ಉತ್ತರ-ಭಾರತದ ಮಾರುಕಟ್ಟೆಗಳಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ದಿಲ್ ಚಾಹ್ತಾ ಹೈ, ಜಿಂದಗಿ ನಾ ಮಿಲೇಗಿ ದೊಬಾರಾ, ದಿಲ್ ಧಡಕ್ನೆ ದೋ, ಮತ್ತು ಗಲ್ಲಿ ಬಾಯ್ ಮುಂತಾದ ಸೂಪರ್ ಹಿಟ್ಗಳನ್ನು ಎಕ್ಸೆಲ್ ಗ್ರೂಪ್ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.