ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆಯೇ ಇಲ್ಲವೆಂದು ಬಿಜೆಪಿ ಟೀಕಿಸಿದೆ. ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲುವುದೇ ನಮ್ಮ ಗುರಿ, 150ಕ್ಕೆ ಒಂದೇ ಒಂದು ಸ್ಥಾನವೂ ಕಡಿಮೆಯಾಗಬಾರದು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ವ್ಯಂಗ್ಯವಾಡಿದೆ.
#ಪದಾಧಿಕಾರಿ150 ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದ್ದು, ‘ಭಾರತದ ಅತ್ಯಂತ ಹಿರಿಯ ಯುವನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲುವುದೇ ನಮ್ಮ ಗುರಿ ಎಂದಿದ್ದರು. ಆದರೆ ಇದನ್ನು ಅಪಾರ್ಥ ಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು 150+ ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಚುನಾವಣೆಯಲ್ಲಿ 150 ಗೆಲ್ಲುವುದು ಅಸಾಧ್ಯ ಎಂದುಕೊಂಡು 150+ ಪದಾಧಿಕಾರಿಗಳಿಗೆ ಅವಕಾಶ ನೀಡಿದ್ದೇ?’ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಚಂದ್ರು ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ ವಹಿಸಲು ನಿರ್ಧಾರ: ಸಿಎಂ ಬೊಮ್ಮಾಯಿ
‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಪಕ್ಷದ ಕಚೇರಿಯಲ್ಲೇ ಕುಳಿತು ಭ್ರಷ್ಟಾಚಾರದ ಆರೋಪ ಮಾಡಿದ ವಿ.ಎಸ್.ಉಗ್ರಪ್ಪನವರಿಗೆ ಉಪಾಧ್ಯಕ್ಷ ಸ್ಥಾನ! ಪಕ್ಷದಿಂದ ಉಚ್ಚಾಟನೆಗೊಂಡ ಮೊಹಮ್ಮದ್ ನಲಪಾಡ್ ಯುವ ಕ್ರಾಂಗ್ರೆಸ್ ಅಧ್ಯಕ್ಷ! ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿ ಪಡೆಯಲು ಇದೇ ಮಾನದಂಡವೋ?’ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಭಾರತದ ಅತ್ಯಂತ ಹಿರಿಯ ಯುವನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ 150 ಸ್ಥಾನ ಗೆಲ್ಲುವುದೇ ನಮ್ಮ ಗುರಿ ಎಂದಿದ್ದರು.
ಆದರೆ ಇದನ್ನು ಅಪಾರ್ಥ ಮಾಡಿಕೊಂಡ @DKShivakumar ಅವರು 150+ ಪದಾಧಿಕಾರಿಗಳನ್ನು ನೇಮಿಸಿದ್ದಾರೆ.
ಚುನಾವಣೆಯಲ್ಲಿ 150 ಗೆಲ್ಲುವುದು ಅಸಾಧ್ಯ ಎಂದುಕೊಂಡು 150+ ಪದಾಧಿಕಾರಿಗಳಿಗೆ ಅವಕಾಶ ನೀಡಿದ್ದೇ?#ಪದಾಧಿಕಾರಿ150 pic.twitter.com/SwQSQ7Au8k
— BJP Karnataka (@BJP4Karnataka) April 11, 2022
‘ಕಾಂಗ್ರೆಸ್ ಪಕ್ಷದಲ್ಲಿ ಸತ್ಯಕ್ಕೆ ಬೆಲೆ ಇಲ್ಲ! ಕೆಪಿಸಿಸಿಯ ಭ್ರಷ್ಟಾಧ್ಯಕ್ಷರ ಪರ್ಸೆಂಟೇಜ್ ರಾಜಕೀಯ ಬಯಲು ಮಾಡಿದ ಸಲೀಂ ಅಹ್ಮದ್ಗೆ ಗೇಟ್ ಪಾಸ್. ಭ್ರಷ್ಟಾಧ್ಯಕ್ಷರ ಪರ್ಸೆಂಟೇಜ್ ರಾಜಕೀಯಕ್ಕೆ ಹೂಂ ಗುಟ್ಟಿದ ಉಗ್ರಪ್ಪಗೆ ಉಪಾಧ್ಯಕ್ಷ ಪಟ್ಟ. ಸಿದ್ದರಾಮಯ್ಯ ಅವರೆದುರು ಡಿಕೆಶಿ ಇಷ್ಟೊಂದು ತತ್ತರಿಸಿದ್ದೇಕೆ?’ ಎಂದು ಬಿಜೆಪಿ ಟೀಕಿಸಿದೆ.
ಕೆಪಿಸಿಸಿ ಅಧ್ಯಕ್ಷ @DKShivakumar ಬಗ್ಗೆ ಪಕ್ಷದ ಕಚೇರಿಯಲ್ಲೇ ಕುಳಿತು ಭ್ರಷ್ಟಾಚಾರದ ಆರೋಪ ಮಾಡಿದ ಉಗ್ರಪ್ಪನವರಿಗೆ ಉಪಾಧ್ಯಕ್ಷ ಸ್ಥಾನ!
ಪಕ್ಷದಿಂದ ಉಚ್ಚಾಟನೆಗೊಂಡ ನಲಪಾಡ್ ಯುವ ಕ್ರಾಂಗ್ರೆಸ್ ಅಧ್ಯಕ್ಷ!
ಕಾಂಗ್ರೆಸ್ ಪಕ್ಷದಲ್ಲಿ ಜವಾಬ್ದಾರಿ ಪಡೆಯಲು ಇದೇ ಮಾನದಂಡವೋ?#ಪದಾಧಿಕಾರಿ150
— BJP Karnataka (@BJP4Karnataka) April 11, 2022
ಇದನ್ನೂ ಓದಿ: ನುಗ್ಗೆಕೇರಿಯಲ್ಲಿ ಮುಸ್ಲಿಂ ವ್ಯಾಪಾರಿಗಳ ತಳ್ಳುಗಾಡಿ ಧ್ವಂಸ: ಎಚ್ಡಿಕೆ ಆಕ್ರೋಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.