ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಹೊಸ‌ ಪ್ಲಾನ್ !

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಆದಾಯದ ಮೂಲ ಹೆಚ್ಚಳ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ‌.ನಗರದ ಆಸ್ತಿ ಮಾಲೀಕರು ತಪ್ಪಾಗಿ ವಲಯ ಘೋಷಿಸಿಕೊಂಡು ಕಡಿಮೆ ತೆರಿಗೆ ಕಟ್ಟುತ್ತಿದ್ದರೆ, ಇನ್ಮುಂದೆ ಎಲ್ಲದಕ್ಕೂ ಫುಲ್ ಸ್ಟಾಪ್ ಬೀಳಲಿದೆ. ಎಲ್ಲಾ ಆಸ್ತಿಗಳನ್ನು ತೆರಿಗೆ ವಲಯಕ್ಕೆ ತರುವುದರೊಂದಿಗೆ ವಲಯ ಪುನರ್ ಪರಿಶೀಲನೆಗೆ ಕಂದಾಯ ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ.

Written by - Sowmyashree Marnad | Edited by - Manjunath N | Last Updated : Apr 16, 2022, 06:02 PM IST
  • ನಗರದಲ್ಲಿ ಅನೇಕರಿಂದ ತಪ್ಪಾಗಿ ಆಸ್ತಿ ವಲಯ ಘೋಷಣೆಯಾಗಿದ್ದು, ಪರಿಶೀಲಿಸಿ ವಲಯ ಪುನರ್ ವಿಂಗಡಣೆಗೆ ಸಹಾಯಕ ಕಂದಾಯ ಅಧಿಕಾರಿಗಳಿಗೆ ಲಕಡಕ್ ಸೂಚನೆ ನೀಡಲಾಗಿದೆ.
ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಹೊಸ‌ ಪ್ಲಾನ್ !  title=

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ ಆದಾಯದ ಮೂಲ ಹೆಚ್ಚಳ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ‌.ನಗರದ ಆಸ್ತಿ ಮಾಲೀಕರು ತಪ್ಪಾಗಿ ವಲಯ ಘೋಷಿಸಿಕೊಂಡು ಕಡಿಮೆ ತೆರಿಗೆ ಕಟ್ಟುತ್ತಿದ್ದರೆ, ಇನ್ಮುಂದೆ ಎಲ್ಲದಕ್ಕೂ ಫುಲ್ ಸ್ಟಾಪ್ ಬೀಳಲಿದೆ. ಎಲ್ಲಾ ಆಸ್ತಿಗಳನ್ನು ತೆರಿಗೆ ವಲಯಕ್ಕೆ ತರುವುದರೊಂದಿಗೆ ವಲಯ ಪುನರ್ ಪರಿಶೀಲನೆಗೆ ಕಂದಾಯ ಅಧಿಕಾರಿಗಳಿಗೆ ಬಿಬಿಎಂಪಿ ಸೂಚನೆ ನೀಡಿದೆ.

ಇದನ್ನು ಓದಿ: HD Kumaraswamy : ಈಶ್ವರಪ್ಪ ಪರ ಹೆಚ್‌ಡಿಕೆ ಬ್ಯಾಟಿಂಗ್‌!

ನಗರದಲ್ಲಿ ಅನೇಕರಿಂದ ತಪ್ಪಾಗಿ ಆಸ್ತಿ ವಲಯ ಘೋಷಣೆಯಾಗಿದ್ದು, ಪರಿಶೀಲಿಸಿ ವಲಯ ಪುನರ್ ವಿಂಗಡಣೆಗೆ ಸಹಾಯಕ ಕಂದಾಯ ಅಧಿಕಾರಿಗಳಿಗೆ ಲಕಡಕ್ ಸೂಚನೆ ನೀಡಲಾಗಿದೆ."ಎ" ಝೋನ್ ನಿಂದ ಎಫ್ ವರೆಗೂ ವಿವಿಧ ತೆರಿಗೆ ವಲಯಗಳಿದ್ದು (ಝೋನ್)  ಒಂದೊಂದು ವಲಯಕ್ಕೆ ಒಂದೊಂದು ರೀತಿಯ ತೆರಿಗೆ ದರಪಟ್ಟಿ ಇದೆ. ವಲಯ ತಪ್ಪಾಗಿ ಘೋಷಿಸಿಕೊಂಡಿದ್ದರೆ ಪುನರ್ ವಿಂಗಡಣೆ ಮಾಡಲಾಗ್ತದೆ. ತೆರಿಗೆ ಪಾವತಿ ವೇಳೆ ಯಾವ ರಸ್ತೆಯಲ್ಲಿ ಆ ಆಸ್ತಿ ಎಂಬುದನ್ನು ಪತ್ತೆ ಮಾಡಿ, ಅದಕ್ಕೆ ತಕ್ಕ ತೆರಿಗೆ ಪಾವತಿಯಾಗ್ತಿದೆಯಾ ಎಂಬುದು ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಜೀ ಕನ್ನಡ ನ್ಯೂಸ್ ಗೆ ತಿಳಿಸಿದ್ದಾರೆ.

ಇದನ್ನು ಓದಿ: "40% ಕಮೀಷನ್ ವಿಚಾರ ನಮಗ್ಯಾಕೆ ?"

ಈ ಬಾರಿ ಆಸ್ತಿ ತೆರಿಗೆ ಸಂಗ್ರಹ ಗುರಿಯನ್ನು 2021-22 ರಲ್ಲಿ 3680.15 ಕೋಟಿ ರೂ ನಿಗದಿ ಮಾಡಲಾಗಿದೆ. 2020-21 ರಲ್ಲಿ 2820 ಕೋಟಿ ರೂ, 2020-21 ರಲ್ಲಿ 3074 ಕೋಟಿ ರೂ. ಸಂಗ್ರಹಿಸಲಾಗಿತ್ತು.ಅಲ್ಲದೆ ಬಿ ಖಾತಾ ವನ್ನು ಎ ಖಾತಾ ಆಗಿ ಪರಿವರ್ತಿಸುವ ಯೋಜನೆಯಿಂದ 1000 ಕೋಟಿ ರೂ ಆದಾಯ ನಿರೀಕ್ಷಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News