ನವದೆಹಲಿ: ದೆಹಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಈಗ ಪುಣೆಯಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯವನ್ನು ಮುಂಜಾಗ್ರತೆ ಕ್ರಮವಾಗಿ ಮುಂಬೈಗೆ ಸ್ಥಳಾಂತರಿಸಲು ಬಿಸಿಸಿಐ ತಿರ್ಮಾನಿಸಿದೆ.ಈ ಕುರಿತಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಸಿಸಿಐ, ಪ್ರಕರಣ ಹೆಚ್ಚಳದಂತಹ ಯಾವುದೇ ಸಂಭವ ಉಂಟಾಗುವುದನ್ನು ತಪ್ಪಿಸಲು ಪಂದ್ಯದ ಸ್ಥಳವನ್ನು ಬದಲಾಯಿಸಲಾಗುತ್ತಿದೆ ಎಂದು ಘೋಷಿಸಿದೆ.
ಇದನ್ನು ಓದಿ: RR vs KKR: ಬಟ್ಲರ್ ಶತಕ, ಚಹಾಲ್ ಹ್ಯಾಟ್ರಿಕ್ ಕೈಚಳಕ, ರಾಜಸ್ಥಾನಕ್ಕೆ ಗೆಲುವಿನ ಪುಳಕ
ಈ ಹಿನ್ನಲೆಯಲ್ಲಿ ಈಗ ಬುಧವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ನ ಪಂದ್ಯವನ್ನು ಪುಣೆಯಿಂದ ಮುಂಬೈಗೆ ಸ್ಥಳಾಂತರಿಸಲಾಗಿದೆ ಮತ್ತು ಈಗ ಅದನ್ನು ಬ್ರಬೋರ್ನ್ ಕ್ರೀಡಾಂಗಣದಲ್ಲಿ ಆಡಲಾಗುತ್ತದೆ ಎಂದು ಬಿಸಿಸಿಐ ತಿಳಿಸಿದೆ.
UPDATE:
The #DCvPBKS match scheduled for tomorrow, 20th April, has been shifted to the Brabourne Stadium, Mumbai from MCA Stadium, Pune in light of the recent COVID-19 cases in the camp.The entire contingent will undergo another round of RT-PCR testing on Wednesday morning. pic.twitter.com/EgZojafHLQ
— Delhi Capitals (@DelhiCapitals) April 19, 2022
ಇದನ್ನೂ ಓದಿ: DC vs RCB: ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನದ ಹಿಂದಿನ ಗುಟ್ಟೇನು ಗೊತ್ತೇ?
ಈಗ ತನ್ನ ಇಮೇಲ್ ನಲ್ಲಿ ಕೊರೊನಾ ಧೃಡಪಟ್ಟಿರುವ ದೆಹಲಿ ಕ್ಯಾಪಿಟಲ್ಸ್ ತಂಡದ ಐದು ಸದಸ್ಯರ ಹೆಸರನ್ನು ಬಿಸಿಸಿಐ ಪಟ್ಟಿ ಮಾಡಿದೆ.ಇದರಲ್ಲಿ ಪ್ರಮುಖವಾಗಿ ಪ್ಯಾಟ್ರಿಕ್ ಫರ್ಹತ್, ಚೇತನ್ ಕುಮಾರ್, ಮಿಚೆಲ್ ಮಾರ್ಷ್,ಡಾ.ಅಭಿಜಿತ್ ಸಾಲ್ವಿ, ಆಕಾಶ್ ಮಾನೆ ಅವರು ಸೇರಿದ್ದಾರೆ.ಈಗ ಕೊರೊನಾ ಧೃಡಪಟ್ಟಿರುವ ಈ ಎಲ್ಲಾ ಸದಸ್ಯರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಬುಧುವಾರದಂದು ದೆಹಲಿ ಕ್ಯಾಪಿಟಲ್ಸ್ ತಂಡದ ಎಲ್ಲಾ ಸದಸ್ಯರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: IPL 2022: ಆರ್‌ಸಿಬಿಗೆ ಸಿಕ್ಕಿದ್ದಾರೆ ಧೋನಿಯಂತಹ ಮ್ಯಾಚ್ ಫಿನಿಶರ್, ಈ ಧೀಮಂತ ಆಟಗಾರ ಯಾರು ಗೊತ್ತೇ!
'ಏಪ್ರಿಲ್ 16 ರಿಂದ, ಇಡೀ ದೆಹಲಿ ಕ್ಯಾಪಿಟಲ್ಸ್ ತಂಡದ ಸದಸ್ಯರನ್ನು ದೈನಂದಿನ ಆರ್‌ಟಿ-ಪಿಸಿಆರ್ ಪರೀಕ್ಷಾ ವಿಧಾನದ ಅಡಿಯಲ್ಲಿ ಇರಿಸಲಾಗಿದೆ.ಏಪ್ರಿಲ್ 19 ರಂದು ನಡೆಸಲಾದ 4 ನೇ ಸುತ್ತಿನ ಆರ್‌ಟಿ-ಪಿಸಿಆರ್ ಪರೀಕ್ಷೆಗಳು ನೆಗಟಿವ್ ಬಂದಿವೆ.ಈಗ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಏಪ್ರಿಲ್ 20 ರ ಬೆಳಿಗ್ಗೆ ಮತ್ತೊಂದು ಸುತ್ತಿನ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ" ಎಂದು ಬಿಸಿಸಿಐ ಅಧಿಕೃತ ಪ್ರಕಟಣೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.