ಮುಂಬೈ: ಐಪಿಎಲ್ 2022 ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ದಿನೇಶ್ ಕಾರ್ತಿಕ್ ಈಗ ಮತ್ತೊಮ್ಮೆ ಟೀಮ್ ಇಂಡಿಯಾಗೆ ವಾಪಸ್ ಬರುತ್ತಾರಾ? ಎನ್ನುವ ಪ್ರಶ್ನೆ ಕಾಡುತ್ತಿದೆ.ಹೌದು, ಈಗ ಟಿ20 ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಮಾಡುವ ರೀತಿಗೆ ಎಲ್ಲರೂ ಪ್ರಭಾವಿತರಾಗಿದ್ದಾರೆ.ಅಂತವರ ಸಾಲಿಗೆ ಈಗ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಸೇರಿದ್ದಾರೆ.ಅವರು ಮುಂಬರುವ ಟಿ.20 ವಿಶ್ವಕಪ್ ನಲ್ಲಿ ದಿನೇಶ್ ಕಾರ್ತಿಕ್ ಭಾರತದ ತಂಡದ ಪರವಾಗಿ ಫಿನಿಶರ್ ಪಾತ್ರವನ್ನು ವಹಿಸಬಹುದು ಎಂದು ಹೇಳಿದ್ದಾರೆ.
ಈ ಹಿಂದೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಬೆಂಗಳೂರು ತಂಡಕ್ಕೆ ಬಂದಾಗಿನಿಂದ ಅದ್ಬುತ ಸ್ಟ್ರೈಕ್ ರೇಟ್ ನೊಂದಿಗೆ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇದುವರೆಗೆ ಅವರು 32, 14, 44, 7, 34 ಮತ್ತು 66 ರ ರನ್ ಗಳೊಂದಿಗೆ 209.57 ಸ್ಟ್ರೈಕ್ ರೇಟ್ ನ್ನು ಹೊಂದಿದ್ದಾರೆ.ಆರು ಇನಿಂಗ್ಸ್ ಗಳಲ್ಲಿ ಅವರು ಐದರಲ್ಲಿ ಅಜೇಯರಾಗಿ ಉಳಿಯುವ ಮೂಲಕ 197.00 ಸರಾಸರಿಯನ್ನು ಹೊಂದಿದ್ದಾರೆ.
ಇದನ್ನೂ ಓದಿ: DC vs RCB: ದಿನೇಶ್ ಕಾರ್ತಿಕ್ ಭರ್ಜರಿ ಪ್ರದರ್ಶನದ ಹಿಂದಿನ ಗುಟ್ಟೇನು ಗೊತ್ತೇ?
ಈ ಹಿನ್ನಲೆಯಲ್ಲಿ ಈಗ ಅವರ ಬ್ಯಾಟಿಂಗ್ ಪ್ರದರ್ಶನದಿಂದ ಪ್ರಭಾವಿತರಾಗಿರುವ ಗವಾಸ್ಕರ್ 'ಟಿ20 ವಿಶ್ವಕಪ್‌ಗೆ ಭಾರತ ತಂಡದ ಭಾಗವಾಗಲು ಬಯಸುವುದಾಗಿ ಅವರು ಹೇಳಿದ್ದಾರೆ.ಹಾಗಾಗಿ ನಾನು ಹೇಳುತ್ತಿರುವುದು ಅವರ ವಯಸ್ಸನ್ನು ನೋಡಬೇಡಿ, ಅವರು ಹೇಗೆ ಆಡುತ್ತಿದ್ದಾರೆ ಎನ್ನುವುದನ್ನು ನೋಡಿ ಎಂದು ಗವಾಸ್ಕರ್ ಹೇಳಿದ್ದಾರೆ.
.
ಇನ್ನೂ ಮುಂದುವರೆದು ಮಾತನಾಡಿದ ಗವಾಸ್ಕರ್ "ಅವರು ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಆಟದ ಚಿತ್ರಣವನ್ನೇ ಬದಲಿಸುತ್ತಿದ್ದಾರೆ.ಅದನ್ನು ಅವರು ತಮ್ಮ ತಂಡಕ್ಕಾಗಿ ಮಾಡುತ್ತಿದ್ದಾರೆ.ಅವರು ಇದೇ ಪಾತ್ರವನ್ನು ಟೀಮ್ ಇಂಡಿಯಾದಲ್ಲಿ ಟಿ 20 ವಿಶ್ವಕಪ್‌ನಲ್ಲಿ 6 ಅಥವಾ 7ನೇ ಸ್ಥಾನದಲ್ಲಿ ನೀವು ನಿರೀಕ್ಷಿಸಬಹುದಾದ ಕೆಲಸವನ್ನು ಅವರು ಮಾಡುತ್ತಿದ್ದಾರೆ,"ಎಂದು ಗವಾಸ್ಕರ್ ಹೇಳಿದರು.
ಇದನ್ನೂ ಓದಿ: IPL 2022: ಆರ್‌ಸಿಬಿಗೆ ಸಿಕ್ಕಿದ್ದಾರೆ ಧೋನಿಯಂತಹ ಮ್ಯಾಚ್ ಫಿನಿಶರ್, ಈ ಧೀಮಂತ ಆಟಗಾರ ಯಾರು ಗೊತ್ತೇ!
ದಿನೇಶ್ ಕಾರ್ತಿಕ್ ಅವರ ಅತ್ಯುತ್ತಮ ಪ್ರದರ್ಶನವು ದೆಹಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಬಂದಿತು, ಈ ಪಂದ್ಯದಲ್ಲಿ ಮುಸ್ತಾಪರ್ ರೆಹಮಾನ್ ಹಾಗೂ ಖಾಲಿಲ್ ಅಹಮದ್ ರಂತಹ ಬೌಲರ್ ಗಳ ಎದುರು ದಿನೇಶ್ ಕಾರ್ತಿಕ್ ಕೇವಲ 34 ಎಸೆತಗಳಲ್ಲಿ 66 ರನ್ ಗಳನ್ನು ಸಿಡಿಸುವ ಮೂಲಕ ಪಂದ್ಯದ ಗೆಲುವಿಗೆ ಕಾರಣಕರ್ತರಾದರು.
ದಿನೇಶ್ ಕಾರ್ತಿಕ್ ಭಾರತ ತಂಡದ ಪರವಾಗಿ 26 ಟೆಸ್ಟ್‌ಗಳು, 94 ಏಕದಿನ ಪಂದ್ಯಗಳು ಮತ್ತು 32 ಟಿ 20 ಪಂದ್ಯಗಳಲ್ಲಿ ಆಡಿದ್ದಾರೆ.ಅವರು ಕೊನೆಯದಾಗಿ ಭಾರತದ ಪರವಾಗಿ 2019 ರಲ್ಲಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಆಡಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.