ಟಾಲಿವುಡ್ ಸ್ಟಾರ್ ದಂಪತಿಗಳಲ್ಲಿ ಒಬ್ಬರಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ವಿಚ್ಛೇದನ ಪಡೆದುಕೊಂಡ ಬಳಿಕ ಫ್ಯಾನ್ಸ್ ಬೇಸರಕ್ಕೆ ಕಾರಣವಾಯಿತು. ನಟ ನಾಗ ಚೈತನ್ಯ, ಸಮಂತಾ ಪ್ರೀತಿಸಿ, ಮದುವೆಯಾಗಿ ಆಮೇಲೆ ವಿಚ್ಛೇದನವನ್ನು ಘೋಷಿಸಿದರು. ನಟಿ ಸಮಂತಾ ಸದ್ಯ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ ಸಹ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರ ಜೊತೆಗೆ ವೈಯಕ್ತಿಕ ಜೀವನದ ಕಡೆಗೂ ಗಮನ ಕೊಟ್ಟು ಎರಡನೇ ಮದುವೆಯಾಗಲು ನಿರ್ಧರಿಸಿದ್ದಾರೆ ಎಂಬ ಗಾಸಿಪ್ ಒಂದು ಶುರುವಾಗಿದೆ.
ಇದನ್ನೂ ಓದಿ: ಮಧುಮೇಹಿಗಳು ಬೆಲ್ಲದ ಚಹಾ ಸೇವಿಸಬಹುದೇ?
ಅನೇಕ ವರ್ಷಗಳ ಕಾಲ ಲವ್ ಮಾಡಿ, ಕುಟುಂಬಸ್ಥರೆದುರು ಅದ್ದೂರಿಯಾಗಿ ಮದುವೆಯಾಗಿದ್ದ ನಟ ನಾಗ ಚೈತನ್ಯ ಹಾಗೂ ಸಮಂತಾ ಸಂಬಂಧದಲ್ಲಿ ಬಿರುಕು ಮೂಡಿತು. ಈ ಮನಸ್ತಾಪ ಕೋರ್ಟ್ ಮೆಟ್ಟಿಲೇರಿ ವಿಚ್ಛೇದನ ಕೂಡ ತೆಗೆದುಕೊಂಡರು. ಈಗ ನಾಗ ಚೈತನ್ಯ ಸಮಂತಾರನ್ನು ಮರೆತು ಬೇರೆ ಮದುವೆ ಯೋಜನೆಯಲ್ಲಿದ್ದಾರೆ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ.
ಮೊದ ಮೊದಲು ನಾಗ ಚೈತನ್ಯ ಶ್ರುತಿ ಹಾಸನ್ ಜೊತೆ ಸ್ನೇಹ ಬೆಳೆಸಿದ್ದಾರೆ ಎಂದು ಹೇಲಲಾಗುತ್ತಿತ್ತು. ಆದರೆ ಸದ್ಯ ಶ್ರುತಿ ಹಾಸನ್ ಶಂತನು ಎಂಬುವವರ ಜೊತೆ ಪ್ರೀತಿಯಲ್ಲಿದ್ದಾರೆ ಎಂದು ತಿಳಿದುಬಂದಿತು. ಆ ಬಳಿಕ ನಾಗ ಚೈತನ್ಯ ಅವರು 'ಮಜಿಲಿ' ಸಿನಿಮಾದ ಸಹನಟಿ ದಿವ್ಯಾಂಶಾ ಕೌಶಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಳಿಸುದ್ದಿಯಿದೆ. ಆದರೆ ನಾಗ ಚೈತನ್ಯ ಈ ನಟಿಯ ಜೊತೆ ಮದುವೆಯಾಗಲು ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಕೂಡ ಹೇಳಲಾಗ್ತಿದೆ.
ಇದನ್ನೂ ಓದಿ: ಕಾಬೂಲ್ನಲ್ಲಿ ಡಬಲ್ ಸ್ಪೋಟ: ಆರು ಸಾವು, ಹಲವರಿಗೆ ಗಾಯ
ಒಟ್ಟಿನಲ್ಲಿ ವಿಚ್ಛೇದನದ ಬಳಿಕ ಅನೇಕ ಗಾಸಿಪ್ಗಳು ಶುರುವಾಗಿದ್ದು, ಇದೀಗ ನಾಗಚೈತನ್ಯ ಎರಡನೇ ಮದುವೆ ಸುದ್ದಿ ಬಲು ಜೋರಾಗಿ ಹಬ್ಬುತ್ತಿದೆ. ಆದರೆ ಈ ಬಗ್ಗೆ ನಟ ನಾಗ ಚೈತನ್ಯ ಮಾತ್ರ ಯಾವುದೇ ಸ್ಪಷ್ಟನೆ ನೀಡಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.