ತಮಿಳಿನ ಸೂಪರ್‌ಹಿಟ್ ಸಿನಿಮಾ 'ಸೂರರೈ ಪೊಟ್ರು' ಹಿಂದಿಗೆ ರಿಮೇಕ್ ಆಗುತ್ತಿದೆ. ಕನ್ನಡಿಗ ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮಿಂಚಲಿದ್ದಾರೆ. ತಮಿಳಿನ ಮೂಲ ಚಿತ್ರದಲ್ಲಿ ಈ ಪಾತ್ರವನ್ನು ಸೂರ್ಯ ನಿರ್ವಹಿಸಿದ್ದಾರೆ. ಕರ್ನಾಟಕದ ಖ್ಯಾತ ಉದ್ಯಮಿ, ಚಿಂತಕ ಕ್ಯಾಪ್ಟನ್ ಗೋಪಿನಾಥ್ ಅವರ ಕತೆಯನ್ನು ಹಿಂದಿಯಲ್ಲಿ ಸಿನಿಮಾ ಮಾಡಲಾಗುತ್ತಿದ್ದು, ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್ ನಟಿಸುತ್ತಿದ್ದಾರೆ. ಅವರಿಗೆ ನಾಯಕಿಯಾಗಿ ರಾಧಿಕಾ ಮದನ್ ಬಣ್ಣ ಹಚ್ಚಲಿದ್ದಾರೆ.
ಇದನ್ನೂ ಓದಿ:Viral Video: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ
ಕರ್ನಾಟಕದ ಕ್ಯಾಪ್ಟನ್ ಗೋಪಿನಾಥ್ ಅವರ ಆತ್ಮಕತೆ 'ಸಿಂಪ್ಲಿ ಫ್ಲೈ' ಪುಸ್ತಕವನ್ನು ಆಧರಿಸಿ ನಿರ್ದೇಶಕಿ ಸುಧಾ ಕೊಂಗರ ತಮಿಳಿನಲ್ಲಿ 'ಸೂರರೈ ಪೊಟ್ರು' ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆ ಆಗಿ ಹಿಟ್ ಆಗಿತ್ತು. ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿದ್ದರು. ಈಗ ಅದೇ ಸಿನಿಮಾವ ಹಿಂದಿಗೆ ರೀಮೇಕ್ ಆಗುತ್ತಿದ್ದು, ಕ್ಯಾ.ಗೋಪಿನಾಥ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಲಿದ್ದಾರೆ.
ಈ ಸಿನಿಮಾದ ನಾಯಕಿಯಾಗಿ ಹಿಂದಿಯಲ್ಲಿ ರಾಧಿಕಾ ಮದನ್ ಅಭಿನಯಿಸಲಿದ್ದಾರೆ. ತಮಿಳಿನ 'ಸೂರರೈ ಪೊಟ್ರು' ಸಿನಿಮಾ ನಿರ್ದೇಶನ ಮಾಡಿದ್ದ ಸುಧಾ ಕೊಂಗರ ಅವರೇ ಹಿಂದಿ ಸಿನಿಮಾವನ್ನೂ ನಿರ್ದೇಶನ ಮಾಡುತ್ತಿರುವುದು ವಿಶೇಷ. ಸಿನಿಮಾದ ಚಿತ್ರೀಕರಣ ಇಂದು ಪ್ರಾರಂಭವಾಗಿದ್ದು, ಶೂಟಿಂಗ್‌ಗೆ ಮುನ್ನ ತೆಂಗಿನ ಕಾಯಿ ಒಡೆಯುತ್ತಿರುವ ದೃಶ್ಯವನ್ನು ನಟ ಅಕ್ಷಯ್ ಕುಮಾರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:KGF ಚಾಪ್ಟರ್ 3 ನಲ್ಲಿ ನಟಿಸುತ್ತಾರಾ ಡಾರ್ಲಿಂಗ್ ಪ್ರಭಾಸ್!?
ಹಾಸನದ ಗೋಪಿನಾಥ್, ಭಾರತ ವಾಯುಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದರು. ಬಾಂಗ್ಲಾ ವಿಮೋಚನೆಯಲ್ಲಿಯೂ ಭಾಗವಹಿಸಿದ್ದರು. ಬಳಿಕ ಸಾಮಾನ್ಯರು ಸಹ ಅತಿ ಕಡಿಮೆ ಬೆಲೆಗೆ ವಿಮಾನದಲ್ಲಿ ಹಾರಾಡಬೇಕೆಂಬ ಆಸೆಯಿಂದ ಡೆಕ್ಕನ್ ಏವಿಯೇಷನ್ ಸಂಸ್ಥೆಯ ಮೂಲಕ ಏರ್ ಡೆಕ್ಕನ್ ಹೆಸರಿನ ಅತಿ ಕಡಿಮೆ ಬೆಲೆಯ ವಿಮಾನಯಾನ ಸಂಸ್ಥೆ ಆರಂಭಿಸಿದರು. ಬಳಿಕ ತಮ್ಮ ವಿಮಾನಯಾನ ಸಂಸ್ಥೆಯನ್ನು ಕಿಂಗ್ ಫೀಶರ್‌ಗೆ ಮಾರಿದರು. ಕನ್ನಡದ ಖ್ಯಾತ ಸಾಹಿತಿ ಗೋರೂರು ರಾಮಸ್ವಾಮಿ ಐಯ್ಯಂಗಾರ್ ಅವರ ಪುತ್ರನೇ ಕ್ಯಾ.ಗೋಪಿನಾಥ್.
ಸದ್ಯ ಚಿತ್ರೀಕರಣ ಆರಂಭವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದಾರೆ. ಮಂಗಳಕರ ರೀತಿಯಲ್ಲಿ ತೆಂಗಿನಕಾಯಿ ಒಡೆದು, ಸಣ್ಣ ಪ್ರಾರ್ಥನೆಯೊಂದಿಗೆ ಇನ್ನೂ ಹೆಸರಿಡದ ನಮ್ಮ ಕನಸಿನ ಸಿನಿಮಾದ ಚಿತ್ರೀಕರಣ ಆರಂಭಿಸಿದ್ದೇವೆ. ನೀವು ಯಾವುದೇ ಶೀರ್ಷಿಕೆಯನ್ನು ಸಲಹೆ ನೀಡುವುದಿದ್ದರೆ ಹಂಚಿಕೊಳ್ಳಿ. ನಿಮ್ಮ ಶುಭಾಶಯಗಳನ್ನೂ ತಿಳಿಸಿ ಎಂದು ಅಕ್ಕಿ ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.