Exclusive VIDEO: ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಹಿರಂಗ

ಸೆಪ್ಟೆಂಬರ್ 2016ರಂದು ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಹಿರಂಗ.

Last Updated : Jun 28, 2018, 09:37 AM IST
Exclusive VIDEO: ಸರ್ಜಿಕಲ್ ಸ್ಟ್ರೈಕ್ ವಿಡಿಯೋ ಬಹಿರಂಗ title=

ನವದೆಹಲಿ: ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆ(LoC) ಬಳಿ 2016ರ ಸೆಪ್ಟೆಂಬರ್ 28, 29ರಂದು ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು. ಈ ದಾಳಿಯ 636 ದಿನಗಳ ನಂತರ, ಅದರ ಅತಿದೊಡ್ಡ ಸಾಕ್ಷಿ ಹೊರಹೊಮ್ಮಿದೆ. ಈ ದಾಳಿಯ ವಿಡಿಯೋ ಝೀ ನ್ಯೂಸ್ ಗೆ ಅಧಿಕೃತ ಮೂಲಗಳಿಂದ ಲಭ್ಯವಾಗಿದೆ.

ಭಾರತೀಯ ಸೈನ್ಯದ ಕಮಾಂಡೊಗಳು ಪಾಕಿಸ್ತಾನದ ಗಡಿಯೊಳಗೆ ಹೇಗೆ ಪ್ರವೇಶಿಸಿದರು ಮತ್ತು ಭಯೋತ್ಪಾದಕರ ನಾಲ್ಕು ವಿಭಿನ್ನ ಗುರಿಗಳನ್ನು ಗುರಿಯಾಗಿಟ್ಟುಕೊಂಡಿದ್ದನ್ನು ನಾವು ವೀಡಿಯೊದಲ್ಲಿ ತೋರಿಸುತ್ತೇವೆ.

ಭಾರತೀಯ ಸೇನೆ ಭಯೋತ್ಪಾದಕರ ಶಿಬಿರಗಳನ್ನು ನಾಶಗೊಳಿಸುವ, ಬಂಕರ್ಗಳು ಮತ್ತು ಇತರೆ ಕಟ್ಟಡಗಳನ್ನು ದ್ವಂಸ ಮಾಡುವ, ಕೆಲವು ಭಯೋತ್ಪಾದಕರನ್ನು ಹತ್ಯೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 

ಈ ದಾಳಿಯು ಭಾರತೀಯ ಸೈನ್ಯದ ಪ್ಯಾರಾ ಕಮಾಂಡೋಸ್ನ 8 ತಂಡಗಳಿಂದ ನಡೆಸಲ್ಪಟ್ಟಿತು. ಉಗ್ರಗಾಮಿಗಳ ನೆಲೆಗಳನ್ನು ನಾಶಮಾಡಲು ಈ ಸರ್ಜಿಕಲ್ ಸ್ಟ್ರೈಕ್ ನಡೆಸಲಾಯಿತು. UAV ನ ಸಹಾಯದಿಂದ ಸರ್ಜಿಕಲ್ ಸ್ಟ್ರೈಕ್ನ ಈ ವೀಡಿಯೊವನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಸರ್ಜಿಕಲ್ ಸ್ಟ್ರೈಕ್ ನಂತರ, ಎಲ್ಲ ಸೇನೆಯ ಎಲ್ಲಾ ತಂಡವು ಸುರಕ್ಷಿತವಾಗಿ ಮರಳಿತ್ತು. ಭಾರತೀಯ ಸೇನೆಯು ನಂತರ ಈ ಸುದ್ದಿಗಳ ಬಗ್ಗೆ ಮಾಧ್ಯಮಗಳಿಗೆ ತಿಳಿಸಿತ್ತು, ಮೊದಲು ಅದನ್ನು ಪಾಕಿಸ್ತಾನ ಸೈನ್ಯಕ್ಕೆ ತಿಳಿಸಲಾಯಿತು.

ದೇಶದ ಹಲವು ನಾಯಕರು ಈ ಸರ್ಜಿಕಲ್ ಸ್ಟ್ರೈಕ್ ಕುರಿತು ಹಲವು ಪ್ರಶ್ನೆಗಳನ್ನು ಕೇಳಿದ್ದರು. ಸಾಕ್ಷಿಯನ್ನೂ ಕೆಲಿದ್ದ್ದರು. 26/11ರ ಭಯೋತ್ಪಾದನಾ ದಾಳಿಯ ಮುಖ್ಯಸ್ಥ ಹಫೀಜ್ ಸಯೀದ್ ಝೀ ನ್ಯೂಸ್ ಗೆ ಬೆದರಿಕೆ ಹಾಕಿದ್ದನು. ಭಾರತೀಯ ಸೇನೆಯ ಬಗ್ಗೆ ತನಗೆ ನಗು ಬರುತ್ತಿದೆ ಎಂದು ಹಫೀಜ್ ಸಯೀದ್ ಹೇಳಿದ್ದನು. ಪಾಕಿಸ್ತಾನ ಸೇನೆ ಹೇಗೆ ಬದಲಾಗುತ್ತಾರೆ ಎಂಬುದನ್ನು ಝೀ ಟಿವಿಯವರು ನಿಮಗೆ(ಜನರಿಗೆ) ತಿಳಿಸುವರು ಎಂದು  ಹಫೀಜ್ ಸಯೀದ್ ಆಕ್ರೋಶದ ಮಾತುಗಳನ್ನಾಡಿದ್ದನು.

2016 ರ ಸೆಪ್ಟಂಬರ್ 28-29 ರ ರಾತ್ರಿ, ಸೇನಾಪಡೆಯು ಉಗ್ರಗಾಮಿಗಳನ್ನು ಗುರಿಯಾಗಿಸಲು ಸೈನ್ಯದ ಹಠಾತ್ ಕ್ರಮವನ್ನು ಘೋಷಿಸಿತು, ಲೆಫ್ಟಿನೆಂಟ್ ಜನರಲ್ ರಣವೀರ್ ಸಿಂಗ್, ಡೈರೆಕ್ಟರ್ ಜನರಲ್ ಮಿಲಿಟರಿ ಕಾರ್ಯಾಚರಣೆಗಳು. ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಭಾರತೀಯ ನಿಯಂತ್ರಣಾ ಪಡೆಗಳು ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ (2016 ರ ಸೆಪ್ಟಂಬರ್ 28-29) ಮಾಡಿತು. ಯಾವುದೇ ರೀತಿಯ ಪರಿಸ್ಥಿತಿಗೆ ಭಾರತ ಸಿದ್ಧವಾಗಿದೆ ಎಂದು ಅವರು ಹೇಳಿದರು. ಭಯೋತ್ಪಾದಕ ಶಿಬಿರಗಳಲ್ಲಿ ಭಾರೀ ನಷ್ಟ ಅನುಭವಿಸಿದೆ ಮತ್ತು ಅನೇಕ ಭಯೋತ್ಪಾದಕರು ಕೊಲ್ಲಲ್ಪಟ್ಟರು. "ನಾವು ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ಸಕ್ರಿಯರಾಗಿರಲು ಬಿಡುವುದಿಲ್ಲ" ಎಂದು ಲೆಫ್ಟಿನೆಂಟ್ ಜನರಲ್ ರಣವೀರ್ ಸಿಂಗ್ ಹೇಳಿದ್ದರು.

ಸರ್ಜಿಕಲ್ ಸ್ಟ್ರೈಕ್ ಎಂದರೇನು?
ನಿರ್ದಿಷ್ಟ ಗುರಿಗಳನ್ನು ಗುರುತಿಸಿ ನಿಖರವಾಗಿ ನಡೆಸಲಾಗುವ ದಾಳಿ ಸರ್ಜಿಕಲ್ ಸ್ಟ್ರೈಕ್. ಯಾವುದೇ ಸೀಮಿತ ಪ್ರದೇಶದಲ್ಲಿ, ಮಿಲಿಟರಿ ಶತ್ರುಗಳ ಮತ್ತು ಭಯೋತ್ಪಾದಕರನ್ನು ಹಾನಿಮಾಡಲು ಮಿಲಿಟರಿ ಕಾರ್ಯಾಚರಣೆಯನ್ನು ತೆಗೆದುಕೊಳ್ಳುತ್ತದೆ ಅದನ್ನು ಸರ್ಜಿಕಲ್  ಸ್ಟ್ರೈಕ್ ಎಂದು ಕರೆಯಲಾಗುತ್ತದೆ. 

Trending News